ಅಂಧ ಕ್ರಿಕೆಟಿಗರಿಗೆ ನಗದು ಪುರಸ್ಕಾರ ನೀಡಿದ ಸಿಎಂ
ಬೆಂಗಳೂರು, ಮೇ 17: ಇತ್ತೀಚೆಗೆ ನಡೆದ ಅಂಧರ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡದಲ್ಲಿದ್ದ ಕರ್ನಾಟಕದ ಆಟಗಾರರಾದ ಪ್ರಕಾಶ್ ಜಯರಾಮಯ್ಯ ಹಾಗೂ ಆರ್. ಸುನಿಲ್ ಅವರನ್ನು ರಾಜ್ಯ ಸರ್ಕಾರ ಸನ್ಮಾನಿಸಿ, ನಗದು ಪುರಸ್ಕಾರ ನೀಡಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಬ್ಬರೂ ಆಟಗಾರರನ್ನು ಸನ್ಮಾನಿಸಿದರು.

ಇದೇ ವೇಳೆ, ಇಬ್ಬರು ಆಟಗಾರರಿಗೂ ತಲಾ 7 ಲಕ್ಷ ರು. ಮೊತ್ತದ ಚೆಕ್ ಗಳನ್ನು ವಿತರಿಸಿದ ಸಿದ್ದರಾಮಯ್ಯ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.












Click it and Unblock the Notifications