• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಸಿಲ ಧಗೆಗೆ ಬೆಂದು ಹೋಗುತ್ತಿದೆ ದೇಹ, ಪಾದಗಳು ಏನು ಮಹಾ!

|

ಬೆಂಗಳೂರು, ಏಪ್ರಿಲ್ 23: ವಿಶ್ವದೆಲ್ಲೆಡೆ ತಾಪಮಾನ ಹೆಚ್ಚಳ, ಪ್ರಾಕೃತಿಕ ವಿಕೋಪಗಳದ್ದೇ ಸುದ್ದಿ. ಭೂಮಿಯ ಸರಾಸರಿ ತಾಪ ಮಾನದಲ್ಲಿ ಒಂದು ಡಿಗ್ರಿ ಸೆಲ್ಷಿಯಸ್ ನ ನೂರರಲ್ಲಿ ಒಂದು ಭಾಗ ಹೆಚ್ಚಾದರೂ ಕೆಲವು ಸಸ್ಯ, ಪ್ರಾಣಿ ಪ್ರಭೇದಗಳು ನಾಶವಾಗುವವು.

ಅಷ್ಟು ಬಿಸಿ ಹೆಚ್ಚಿಸಲು ಅಟ್ಲಾಂಟಿಕ್ ಸಾಗರದ ಮೇಲೆ ಒಂದು ದಿನದಲ್ಲಿ ನಡೆಯುವ ವಿಮಾನಗಳ ಹಾರಾಟವೇ ಸಾಕು. ಪ್ರತಿ ಜೀವಿಗೂ ಈ ಭೂಮಿಯ ಮೇಲೆ ಹಕ್ಕಿದೆ. ಕಣ್ಮರೆಯಾಗುತ್ತಿರುವ ಒಂದೊಂದು ಸಸ್ಯ, ಪ್ರಾಣಿ ಪ್ರಭೇದವೂ ಮನುಷ್ಯನ ಅಸ್ತಿತ್ವದ ನಾಶವನ್ನೇ ಸೂಚಿಸುತ್ತದೆ.

ಅರ್ಥ್ ಡೇ ಸಂಭ್ರಮಾಚರಣೆ: ಭೂ ರಮೆಯನ್ನು ಪ್ರೀತಿಸಿ, ಉಳಿಸಿ

ಭೂಮಿಯ ದಿನ, ಅರ್ಥಾತ್ ಭೂಮಿಯನ್ನು ಕಾಪಾಡಿಕೊಳ್ಳುವ ದಿನವನ್ನು ಕಳೆದ 50 ವರ್ಷಗಳಿಂದಲೂ ವಿಶ್ವಾದ್ಯಂತ ಅನೇಕ ದೇಶಗಳು ಆಚರಿಸಿಕೊಂಡು ಬಂದಿವೆ. ಆದರೆ ಪರಿಸರ ಸಮತೋಲನ ಮಾತ್ರ ದಿನೇ ದಿನೇ ಅಧೋಗತಿಗೆ ಇಳಿಯುತ್ತಿದೆ. ಭೂಮಿಯಿಂದ ಆಕಾಶದವರೆಗೂ ಪರಿಸರ ಮಾಲಿನ್ಯ ಹರಡಿಕೊಳ್ಳುತ್ತಿದೆ. ಹಿಮಾಲಯ ಪರ್ವತ ಶ್ರೇಣಿಗಳು, ಉತ್ತರ ದಕ್ಷಿಣ ಧ್ರುವಗಳು ಕೂಡ ಮಾಲಿನ್ಯದಿಂದ ತುಂಬಿಕೊಂಡಿದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಆಶಾದಾಯಕ ಭವಿಷ್ಯವನ್ನು ನಿರೀಕ್ಷಿಸುತ್ತ ಅನೇಕ ದೇಶಗಳ ಸಂಘ-ಸಂಸ್ಥೆಗಳು, ಖಾಸಗಿ ಕಂಪೆನಿಗಳು ಹಾಗೂ ಭೂಮಿಯನ್ನು ಪ್ರೀತಿಸುವ ಎಲ್ಲರೂ ಒಟ್ಟುಗೂಡಿ ವಿಶ್ವದಾದ್ಯಂತ ಭೂಮಿಯ ದಿನವನ್ನು ಆಚರಿಸುತ್ತಿದ್ದಾರೆ. ಕೈಗಾರಿಕೀಕರಣದ ಹೆಸರಿನಲ್ಲಿ ನಮ್ಮೊಂದಿಗಿನ ಜೀವಜಗತ್ತನ್ನು ಸಂಪೂರ್ಣವಾಗಿ ಮರೆತುಹೋಗಿದ್ದೇವೆ.

ಈ ಎಲ್ಲದರ ಕಾರಣದಿಂದ ಪ್ರತಿ ವರ್ಷವೂ ಭೂಮಿಯ ಉಷ್ಣಾಂಶ ಹೆಚ್ಚುತ್ತಲೇ ಹೋಗುತ್ತಿದೆ. ಬೆಂಗಳೂರಿನ ಉಷ್ಣಾಂಶ ಇದಕ್ಕೆ ಒಳ್ಳೆಯ ಉದಾಹರಣೆ. ಬೆಂಗಳೂರು ಈ ದಿನ ಇಷ್ಟು ತಾಪಮಾನ ಏರಿಸಿಕೊಂಡಿರುವುದಕ್ಕೆ ಮುಖ್ಯವಾಗಿ ವಾಹನಗಳು ಉಗುಳುವ ಇಂಗಾಲದ ಡೈಆಕ್ಸೈಡ್, ಕೆರೆಗಳ ಒತ್ತುವರಿ, ಕೊಳವೆ ಬಾವಿಗಳಿಂದ ಮಿತಿಯಿಲ್ಲದೆ ನೀರು ತೆಗೆದು ಖಾಲಿ ಮಾಡಿರುವುದು, ಮರಗಿಡಗಳನ್ನು ಕಡಿದು ಹಸಿರು ಇಲ್ಲದಂತೆ ಕಾಂಕ್ರೀಟ್ ಕಾಡು ಮಾಡಿದ್ದು ಕಾರಣ.

ಭೂಮಿಯ ಮಾತಿರಲಿ, ಕುಡಿಯೋಣವೆಂದರೆ ನೀರು ಕೂಡ ಎಲ್ಲೂ ಸಿಗದು. 'ಯಾರು ನೀರನ್ನು ಕೊಂಡುಕೊಳ್ಳಲು ಯೋಗ್ಯರೋ ಅವರಿಗೆ ಮಾತ್ರ ಕುಡಿಯುವ ನೀರು' ಎಂಬಂತಿದೆ ನಮ್ಮ ಜಲ ನೀತಿ. ನೀರು ಕುಡಿಯಬೇಕು ಎಂದಾದರೆ ಅದನ್ನು ಕೊಳ್ಳುವ ತಾಕತ್ತಿರಬೇಕು. ಕೆರೆ ನದಿಗಳು ಕಲುಷಿತಗೊಂಡಿರುತ್ತವೆ.

ಒಂದು ವೇಳೆ ಅವು ಚೆನ್ನಾಗಿದ್ದರೆ ಅಲ್ಲಿ ಎಲ್ಲರಿಗೂ ಪ್ರವೇಶ ಇರುವುದಿಲ್ಲ. ಹೊಸ ಪೀಳಿಗೆಯವರು ವಿಷಯುಕ್ತ ಗಾಳಿಯನ್ನು ಉಚಿತವಾಗಿ ಉಸಿರಾಡಬಹುದು. ಅದಕ್ಕೆ ಬೇಲಿ ಹಾಕಲಾಗಿಲ್ಲ. ಆದರೆ ಈ ಮೊದಲಿನ ತಲೆಮಾರಿನವರು ಅವರವರ ವರ್ಗ, ಸ್ಥಾನಮಾನಕ್ಕೆ ತಕ್ಕಂತಹ ಅವರ ಜೀವನಶೈಲಿಯಿಂದ ಗಾಳಿಗೆ ಹೊಗೆ-ವಿಷ ಸೇರಿಸಿ ಇಟ್ಟಿದ್ದಾರೆ.

ಭೂಮಿಯ ಮೇಲೆ ಹುಟ್ಟುವ ಯಾವ ಜೀವಿಯೂ ನಿರ್ಗತಿಕವಾಗಿ ಹುಟ್ಟಬಾರದು. ಹುಟ್ಟಿದ ಎಲ್ಲರಿಗೂ ಗೌರವಯುತವಾಗಿ ಬದುಕುವ ಅವಕಾಶ ಇರಬೇಕು. ನಿಸರ್ಗದ ಸಂಪನ್ಮೂಲ ಎಲ್ಲರಿಗೂ ಲಭ್ಯವಾಗಬೇಕು. ದುಡಿಮೆಯ ಸಂಬಂಧಗಳು ಬದಲಾಗಬೇಕು. ಯಾರೂ ಯಾರನ್ನೂ ಶೋಷಿಸಬಾರದು. ಎಲ್ಲರೂ ಸಂತಸದಿಂದ ಇರುವುದಕ್ಕೆ ಪೂರಕವಾಗುವ ಪರಿಸರಸ್ನೇಹಿ ಜೀವನ ಶೈಲಿ ಮತ್ತು ಹೊಸ ದುಡಿಮೆಯ ಸಂಬಂಧಗಳನ್ನು ಹುಡುಕಿಕೊಳ್ಳುವ ಅಗತ್ಯವಿದೆ.

 ನೀರಿಲ್ಲದೆ ಸೊರಗುತಿದೆ ಭೂಮಿ, ಕರುಣೆ ಬಾರದೇ ಮೇಘಕೆ

ನೀರಿಲ್ಲದೆ ಸೊರಗುತಿದೆ ಭೂಮಿ, ಕರುಣೆ ಬಾರದೇ ಮೇಘಕೆ

ಬತ್ತಿದ ಕೆರೆಯ ಮೇಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಭೋಪಾಲ್ ನಲ್ಲಿ ಕಂಡುಬಂತು, ಅಲ್ಲಿರುವ ಬಿಸಿಲ ಧಗೆಗೆ ಕೆರೆ, ನದಿ ನೀರುಗಳು ಬತ್ತುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ವಿಶ್ವ ಭೂ ದಿನದ ಅಂಗವಾಗಿ ಈ ಫೋಟೊವನ್ನು ತೆಗೆಯಲಾಗಿದೆ. ಬರಡು ಭೂಮಿಯಲ್ಲಿ ಒಂಟಿ ಪಯಣಿಗನಾಗಿ ನೀರಿನ ಬಾಟಲಿ ಹಿಡಿದು ನೀರನ್ನು ಅರಸುತ್ತಾ ಹೋಗುವ ದೃಶ್ಯ.

 ನಕ್ಸಲರ ಎನ್‌ಕೌಂಟರ್ ಕುರಿತ ಪತ್ರಿಕಾಗೋಷ್ಠಿ

ನಕ್ಸಲರ ಎನ್‌ಕೌಂಟರ್ ಕುರಿತ ಪತ್ರಿಕಾಗೋಷ್ಠಿ

ಗಾಡ್ಚಿರೋಲಿ ಜಿಲ್ಲೆಯ ಭಾಮ್ರಗಢದಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ದಾಳಿಯಲ್ಲಿ 16 ಮಂದಿ ನಕ್ಸಲರನ್ನು ಎನ್‌ಕೌಂಟರ್ ಮಾಡಲಾಯಿತು. ಆ ಕುರಿತು ಎಸ್.ಪಿ. ಅಭಿನವ ದೇಶಮುಖ್ ಹಾಗೂ ಇನ್ನಿತರೆ ಪೊಲೀಸ್ ಸಿಬ್ಬಂದಿಗಳು ಭಾನುವಾರ ಪತ್ರಿಕಾಗೋಷ್ಠಿ ನಡೆಸಿದರು.

ಮಹಾರಾಷ್ಟ್ರದಲ್ಲಿ ಎನ್ಕೌಂಟರ್: 16 ನಕ್ಸಲರ ಹತ್ಯೆ

 ಮುಂಬೈ ಇಂಡಿಯನ್ಸ್ ಸೋಲಿಸಿದ ರಾಜಸ್ತಾನ್ ರಾಯಲ್ಸ್

ಮುಂಬೈ ಇಂಡಿಯನ್ಸ್ ಸೋಲಿಸಿದ ರಾಜಸ್ತಾನ್ ರಾಯಲ್ಸ್

ಕೊನೇ ಕ್ಷಣದವರೆಗೆ ಸೋಲು-ಗೆಲುವಿನ ರೋಚಕತೆಯಲ್ಲಿದ್ದ ಪಂದ್ಯದಲ್ಲಿ ಕೆ.ಗೌತಮ್ ಆಡಿದ ಸ್ಫೋಟಕ ಇನಿಂಗ್ಸ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 11ರಲ್ಲಿ ಸತತ 2 ಸೋಲುಗಳ ನಂತರ ಗೆಲುವಿನ ಲಯಕ್ಕೆ ಮರಳಿತು.ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ, ಮೂರು ಬಾರಿಯ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ 3 ವಿಕೆಟ್ ಗಳಿಂದ ಸೋಲಿಸಿತು.

 ಬೈಕ್ ಬುಡಾಫೆಸ್ಟ್ ಆಕರ್ಷಕ ಪ್ರದರ್ಶನ

ಬೈಕ್ ಬುಡಾಫೆಸ್ಟ್ ಆಕರ್ಷಕ ಪ್ರದರ್ಶನ

ಬುಡಾಫೆಸ್ಟ್ ನಲ್ಲಿ ಬೈಸಿಕಲ್ ಸವಾರರು ಬೈಕ್ ಬುಡಾಫೆಸ್ಟ್ ಆಚರಣೆ ಅಂಗವಾಗಿ ಡುನೇಡ್ ನದಿಯ ಸೇತುವೆ ಮೇಲೆ ಆಕರ್ಷಕ ಪ್ರದರ್ಶನ ನಡೆಸಿದರು.

 ಮುಂಬೈ ಇಂಡಿಯನ್ಸ್ ಮಣಿಸಿದ ರಾಜಸ್ಥಾನ ರಾಯಲ್ಸ್

ಮುಂಬೈ ಇಂಡಿಯನ್ಸ್ ಮಣಿಸಿದ ರಾಜಸ್ಥಾನ ರಾಯಲ್ಸ್

ರಾಜಸ್ಥಾನ ಹೊಸ ಆರಂಭಿಕ ಜೋಡಿಯೊಂದಿಗೆ ಕಣಕ್ಕಿಳಿದರು. ರಹಾನೆ ಹಾಗೂ ರಾಹುಲ್ ತ್ರಿಪಾಠಿ ಬೇಗನೆ ಪೆವಿಲಿಯರ್ ಸೇರಿಕೊಂಡರು. 3 ನೇ ವಿಕೆಟ್ ಗೆ ಜತೆಯಾದ ಸಂಜು ಸ್ಯಾಮನ್ಸ್ ಹಾಗೂ ಬೆನ್ ಸ್ಟ್ರೋಕ್ಸ್ ತಂಡವನ್ನು 100ರ ಗಡಿ ದಾಟಿಸಿದರು.ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ, ಮೂರು ಬಾರಿಯ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ 3 ವಿಕೆಟ್ ಗಳಿಂದ ಸೋಲಿಸಿತು. ಮುಂಬೈ ಇಂಡಿಯನ್ಸ್ ಮಣಿಸಿದ ರಾಜಸ್ಥಾನ ರಾಯಲ್ಸ್ ಸಂಭ್ರದ ಕ್ಷಣ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Most of the countries in the world celebrating World Earth Day every year since 50 years. But is it meaningful? What way earth is suffering and how many years it will remain. Here is the story about.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more