World Blood Donor Day 2021: ವಿಶ್ವ ರಕ್ತದಾನಿಗಳ ದಿನ 2021: ಉದ್ದೇಶ ಮತ್ತು ಇತಿಹಾಸ

ಬೆಂಗಳೂರು, ಜೂನ್ 14: ಯಾರೇ ಇರಲಿ, ಹೇಗೇ ಇರಲಿ ಎಲ್ಲರ ದೇಹದಲ್ಲೂ ಇರುವ ರಕ್ತ ಒಂದೇ, ಇದೇ ಕಾರಣಕ್ಕೆ ರಕ್ತ ಎಂದರೆ ಜೀವದ್ರವ್ಯ.

ಜತ್ತಿನಾದ್ಯಂತ ಪ್ರತಿಕ್ಷಣ ಲೆಕ್ಕವಿಲ್ಲದಷ್ಟು ಮಂದಿ ರಕ್ತದ ತೀರಾ ಅಗತ್ಯದಲ್ಲಿರುತ್ತಾರೆ, ಲಕ್ಷಾಂತರ ಮಂದಿ ರಕ್ತವನ್ನು ಹುಡುಕಿಕೊಂಡು ಆತಂಕದಿಂದ ಅಲೆಯುತ್ತಿರುತ್ತಾರೆ, ಇವರ ಅಗತ್ಯಗಳನ್ನು ಪೂರೈಸಲು ಸಮಾಜದಲ್ಲಿ ರಕ್ತದಾನಿಗಳ ಒಂದು ಗುಂಪು ನಿರ್ಮಾಣವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಇಂದು ವಿಶ್ವ ರಕ್ತದಾನಿಗಳ ದಿನ, ಆದರೆ ರಕ್ತದಾನದ ಕುರಿತು ನಮ್ಮಲ್ಲಿ ತಪ್ಪು ನಂಬಿಕೆಗಳಿವೆ, ಅದರಲ್ಲೂ ಈ ಕೊರೊನಾ ಸಂದರ್ಭದಲ್ಲಿ ಅನೇಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ, ಆದರೆ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ರಕ್ತದಾನ ಮಾಡಿದರೆ ಎಷ್ಟೋ ಜೀವಗಳನ್ನು ಉಳಿಸಬಹುದು ಎಂದು ವೈದ್ಯರು ಹೇಳುತ್ತಾರೆ.

World Blood Donor Day 2021: Date, Theme, History And Significance In Kannada

ವಿಶ್ವ ರಕ್ತದಾನಿಗಳ ದಿನದ ಇತಿಹಾಸ: ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನವನ್ನು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ ಜೂನ್ 14, 2004 ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ಆರಂಭಿಸಿತು.

ಸಾರ್ವಜನಿಕರಲ್ಲಿ ಆರೋಗ್ಯವಂತ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಮತ್ತು ಹಣರಹಿತ ಸುರಕ್ಷಿತ ರಕ್ತದಾನ ಮಾಡುವ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಒಕ್ಕೂಟವು ಹೊಂದಿದೆ.

ಮೇ 2005 ರಲ್ಲಿ, ಡಬ್ಲ್ಯುಎಚ್‌ಒ ತನ್ನ 192 ಸದಸ್ಯ ರಾಷ್ಟ್ರಗಳೊಂದಿಗೆ 58 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ರಕ್ತದಾನಿಗಳ ದಿನವನ್ನು ಸ್ಥಾಪಿಸಿತು. ವಿಶ್ವದಾದ್ಯಂತದ ಎಲ್ಲಾ ದೇಶಗಳಲ್ಲಿ ರಕ್ತದಾನಿಗಳ ಅಮೂಲ್ಯ ಹೆಜ್ಜೆಗೆ ಗೌರವಿಸಲು ಮತ್ತು ಜನರ ಜೀವವನ್ನು ಉಳಿಸಿದ್ದಕ್ಕಾಗಿ ಧನ್ಯವಾದ ಹೇಳಲು ಪ್ರೇರೇಪಿಸಿತು.

ವಿಶ್ವ ರಕ್ತದಾನಿಗಳ ದಿನ 2021 ಉದ್ದೇಶ: ಸಮುದಾಯ ಒಗ್ಗಟ್ಟು ಮತ್ತು ಸಾಮಾಜಿಕ ಒಗ್ಗಟ್ಟು ಹೆಚ್ಚಿಸುವಲ್ಲಿ ಸಮುದಾಯ ಮೌಲ್ಯಗಳನ್ನು ಉತ್ತೇಜಿಸಲು ರಕ್ತದಾನ ಸಹಾಯ ಮಾಡುತ್ತದೆ.
ವಿಶ್ವದಾದ್ಯಂತ ರಕ್ತದಾನಿಗಳಿಗೆ ಧನ್ಯವಾದ ಹೇಳಲು ಮತ್ತು ಅಗತ್ಯವಿರುವವರರಿಗೆ ದುಡ್ಡು ರಹಿತ ರಕ್ತದಾನ ಮಾಡಲು ಜಾಗೃತಿ ಮೂಡಿಸುವುದು. ರಕ್ತದಾನ ಮಾಡುವಂತೆ ಯುವಕರನ್ನು ಪ್ರೋತ್ಸಾಹಿಸಲು ಮತ್ತು ಇತರರು ಅದೇ ರೀತಿ ಮಾಡಲು ಪ್ರೇರೇಪಿಸುವುದು.

ವಿಶ್ವ ರಕ್ತದಾನಿಗಳ ದಿನ 2021ರ ಉಲ್ಲೇಖಗಳು
* ರಕ್ತ ದಾನ ಮಾಡಿ ಮತ್ತು ಅನೇಕ ಮುಖಗಳಲ್ಲಿ ಮೂಡುವ ಮಂದಹಾಸಕ್ಕೆ ಕಾರಣರಾಗಿ
* ರಕ್ತದಾನದಿಂದ ನಿಮಗೆ ಏನೂ ಖರ್ಚಾಗುವುದಿಲ್ಲ, ಆದರೆ ಅದು ಜೀವವನ್ನು ಉಳಿಸುತ್ತದೆ.
* ನಿಮ್ಮ ರಕ್ತವು ಅಮೂಲ್ಯವಾದುದು: ದಾನ ಮಾಡಿ, ಜೀವವನ್ನು ಉಳಿಸಿ ಮತ್ತು ಅದನ್ನು ದೈವಿಕಗೊಳಿಸಿ.
* ನಿಮ್ಮನ್ನು ಎಂದಿಗೂ ನೀವು ದುರ್ಬಲರೆಂದು ಎಂದು ಭಾವಿಸಬೇಡಿ, ಜೀವ ಉಳಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಕೇವಲ ರಕ್ತದಾನ ಮಾಡಿ.
* ರಕ್ತವನ್ನು ನೀಡಲು ನಿಮಗೆ ಹೆಚ್ಚುವರಿ ಶಕ್ತಿ ಅಥವಾ ಹೆಚ್ಚುವರಿ ಆಹಾರ ಬೇಕಾಗಿಲ್ಲ ಮತ್ತು ನೀವು ಜೀವವನ್ನು ಉಳಿಸುವಿರಿ.
* ರಕ್ತದಾನ ಮಾಡುವುದು ಎಂದರೆ ನಿಮಗೆ ಅದು ಕೆಲವು ನಿಮಿಷಗಳು, ಆದರೆ ಬೇರೆಯವರಿಗೆ ಅದು ಜೀವಿತಾವಧಿ.
* ಮೂರ್ಖರು ಅಥವಾ ಸೊಳ್ಳೆಗಳು ನಿಮ್ಮ ರಕ್ತವನ್ನು ಹೀರಲು ಬಿಡಬೇಡಿ, ಅದನ್ನು ಉತ್ತಮ ಬಳಕೆಗೆ ಇರಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+