ಪಂಚರಾಜ್ಯ ಚುನಾವಣಾ ಪ್ರಚಾರಕ್ಕೆ ಮಹಿಳಾ ಮಣಿಗಳ ಗ್ಲಾಮರ್

Posted By:
Subscribe to Oneindia Kannada

ನವದೆಹಲಿ, ಜನವರಿ 28: ಪ್ರಿಯಾಂಕಾ ಗಾಂಧಿಯೇನು ಅಂಥಾ ಸುಂದರಿಯೇನಲ್ಲ. ಆಕೆಗಿಂತ ಸೂಪರ್ ಸುಂದರಿಯಲು ನಮ್ಮ ಪಕ್ಷದಲ್ಲಿದ್ದಾರೆಂದು ಉತ್ತರ ಪ್ರದೇಶದ ಬಿಜೆಪಿ ನಾಯಕ ವಿನಯ್ ಕಾಟಿಯಾರ್ ಅವರ ಹೇಳಿಗೆ ರಾಜಕೀಯದಲ್ಲಿ ಒಂದೆರಡು ದಿನಗಳ ಮಟ್ಟಿಗೆ ವಾದ ವಿವಾದದ ಅಲೆಯನ್ನೇ ಎಬ್ಬಿಸಿತು. ಮಾಧ್ಯಮಗಳಂತೂ ಬಿಡುವಿಲ್ಲದೆ ಇದರ ಬಗ್ಗೆ ಚರ್ಚೆಗಳನ್ನು ನಡೆಸಿದವು.

ಅದೇನೇ ಇರಲಿ, ಚುನಾವಣಾ ಕ್ಯಾಂಪೇನ್ ಗಳಲ್ಲಿ ಗಿಮಿಕ್ ಗಳ ಮೂಲಕ ಮತಯಾಚನೆ ಮಾಡುವುದು, ಸ್ಟಾರ್ ಗಳನ್ನು ಮುಂದಿಟ್ಟುಕೊಂಡು ಮತದಾರನ ಮನೆ ಬಾಗಿಲು ತಟ್ಟುವುದು ಹೊಸತೇನಲ್ಲ. ಇದಕ್ಕಾಗಿಯೇ ಸಿನಿಮಾ ತಾರೆಯರನ್ನು ಬಳಸಿಕೊಳ್ಳುವ ಟ್ರೆಂಡ್ ನಮ್ಮಲ್ಲಿ ಶುರುವಾಗಿ ಹತ್ತಾರು ವರ್ಷಗಳೇ ಕಳೆದಿವೆ.

ಅಂದರೆ, ಚುನಾವಣಾ ಪಕ್ಷಗಳು ಗ್ಲಾಮರ್, ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವುದು ಹೊಸತೇನಲ್ಲ. ಅಂತೆಯೇ, ತಮ್ಮ ಪಕ್ಷಗಳಲ್ಲೇ ಲಕ್ಷಣವಾಗಿರುವ ಹೆಣ್ಣುಮಕ್ಕಳು, ವರ್ಚಸ್ಸೂ ಉಳ್ಳವರಾಗಿದ್ದರೆ ಅಂಥವರನ್ನೇ ಪ್ರಧಾನ ಪ್ರಚಾರಕರನ್ನಾಗಿ ಪಕ್ಷಗಳು ಅವಲಂಬಿಸುವ ಹೊಸ ಪರಿಪಾಠ ಆರಂಭವಾಗಿದೆ.

ಹಾಗಾಗಿಯೇ, ಶೀಘ್ರದಲ್ಲೇ ವಿಧಾನಸಭೆ ನಡೆಯಲಿರುವ ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಾಂಡ ಹಾಗೂ ಮಣಿಪುರಗಳಲ್ಲಿ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಈ ಪಕ್ಷಗಳಲ್ಲಿನ ನಾಯಕಿಯರೇ ಪ್ರಚಾರಕ್ಕಿಳಿಯಲಿರುವುದರಿಂದ ಇಲ್ಲಿನ ಚುನಾವಣೆಗೀಗ ಗ್ಲಾಮರ್ ಸ್ಪರ್ಶ ಸಿಕ್ಕಂತಾಗಿದೆ.

ಕಾಂಗ್ರೆಸ್ ಪರವಾಗಿ ಪ್ರಿಯಾಂಕಾ ಜೀ, ನಟಿ ನಗ್ಮಾ, ಬಿಜೆಪಿ ಪರವಾಗಿ ಹೇಮಾಮಾಲಿನಿ, ಸ್ಮೃತಿ ಇರಾನಿ, ಸಮಾಜವಾದಿ ಪರವಾಗಿ ಡಿಂಪಲ್ ಅಖಿಲೇಶ್ ಯಾದವ್, ಜಯಾಬಚ್ಚನ್, ಬಹುಜನ ಸಮಾಜವಾದಿ ಪಕ್ಷದ ಪರವಾಗಿ ಆ ಪಕ್ಷದ ನಾಯಕಿ ಮಾಯಾವತಿ ಪ್ರಚಾರ ನಡೆಸಲಿದ್ದಾರೆ. ಆದರೆ, ಗ್ಲಾಮರ್ ವಿಚಾರಕ್ಕೆ ಬಂದರೆ, ಪ್ರಿಯಾಂಕಾ, ನಗ್ಮಾ, ಹೇಮಾಮಾಲಿನಿ, ಸ್ಮೃತಿ ಇರಾನಿ, ಡಿಂಪಲ್ ಅವರು ಪ್ರತ್ಯೇಕವಾಗಿ ನಿಲ್ಲಲಿದ್ದಾರೆ.

ಕಾಂಗ್ರೆಸ್ ನ ಪ್ರಮುಖ ನಾಯಕಿ

ಕಾಂಗ್ರೆಸ್ ನ ಪ್ರಮುಖ ನಾಯಕಿ

ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಯಾಚಿಸಲಿರುವ ಸ್ಟಾರ್ ಕ್ಯಾಂಪೇನರ್ ಗಳಲ್ಲಿ ಪ್ರಿಯಾಂಕಾ ಗಾಂಧಿ ಅಗ್ರಗಣ್ಯರು. ಆದರೆ, ಅವರು ತುಂಬಾ ಕಡೆ ಸಂಚಾರ ಮಾಡುತ್ತಿಲ್ಲ. ಕಾಂಗ್ರೆಸ್ ನ ಭದ್ರಕೋಟೆ ಎಂದೆನಿಸಿರುವ ಅಮೇಥಿ, ರಾಯ್ ಬರೇಲಿಗಳಲ್ಲಿ ಮಾತ್ರ ಕ್ಯಾಂಪೇನ್ ಮಾಡಲಿದ್ದಾರೆ.

ಆಡಳಿತಾರೂಢ ಪಕ್ಷಕ್ಕೆ ಬೆಂಬಲ

ಆಡಳಿತಾರೂಢ ಪಕ್ಷಕ್ಕೆ ಬೆಂಬಲ

ಸಮಾಜವಾದಿ ಪಕ್ಷದ ಸ್ಟಾರ್ ಕ್ಯಾಂಪೇನರ್ ಗಳ ಪೈಕಿ ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಅಖಿಲೇಶ್ ಅವರು ಪ್ರಮುಖರು. ಈಗಾಗಲೇ ಆ ಪಕ್ಷದ ಚುನಾವಣಾ ಪ್ರಚಾರ ಹೋರ್ಡಿಂಗ್, ಕಟೌಟ್, ಬ್ಯಾನರ್ ಗಳಲ್ಲಿ ಅವರೇ ರಾರಾಜಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಉತ್ತರ ಪ್ರದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಅವರು ಮಾತನಾಡಬಲ್ಲರು.

ಕಮಲಕ್ಕೆ ತಾರಾ ಮೆರುಗು

ಕಮಲಕ್ಕೆ ತಾರಾ ಮೆರುಗು

ಹಿರಿಯ ಚಿತ್ರ ತಾರೆ ಹಾಗೂ ಬಿಜೆಪಿ ನಾಯಕಿ ಹೇಮಾಮಾಲಿನಿಯವರನ್ನು ನೋಡಿದರೆ, ಬಿಜೆಪಿಯಲ್ಲಿ ಗ್ಲಾಮರ್ ತಾರೆಗಳಿಗೇನೂ ಕೊರತೆಯಿಲ್ಲ ಎಂದು ಹೇಳಿದ್ದ ವಿನಯ್ ಕಟಿಯಾರ್ ಹೇಳಿಕೆಯಲ್ಲಿ ಅತಿಶಯೋಕ್ತಿ ಏನಿಲ್ಲ ಬಿಡಿ ಎಂದೆನಿಸಿದು. ಈಗಲೂ ತಮ್ಮ ವರ್ಚಸ್ಸು ಹಾಗೂ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ಹೇಮಾಜೀ ಅವರಿಗೆ ಪ್ರಚಾರಗಳಲ್ಲಿ ಭಾರೀ ಜನಬೆಂಬಲ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇವರಾರಿಗೂ ಕಮ್ಮಿಯಿಲ್ಲ

ಇವರಾರಿಗೂ ಕಮ್ಮಿಯಿಲ್ಲ

ಮಾಜಿ ನಟಿ ಹಾಗೂ ಹಾಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಿಜೆಪಿಯ ಮಹಿಳಾ ನಾಯಕಿಯರಲ್ಲಿ ಪ್ರಭಾವಿ. ಒಳ್ಳೆಯ ಮಾತುಗಾರರೂ ಹೌದು. ಇಷ್ಟು ವರ್ಷಗಳಲ್ಲಿ ಪ್ರಚಾರದ ಅನುಭವವೂ ಅವರಿಗೆ ಸಾಕಷ್ಟಿದೆ. ಹಾಗಾಗಿ, ಪಂಚ ರಾಜ್ಯಗಳಲ್ಲಿ ಅವರು ಚುನಾವಣಾ ಪ್ರಚಾರ ಮಾಡಿದರೆ, ಜನ ಸೇರುವುದಂತೂ ಗ್ಯಾರಂಟಿ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವ ವರ್ಚಸ್ಸು ಅವರಿಗಿದೆ.

ಸಿನಿಮಾ ಜನಪ್ರಿಯತೆಯೇ ಆಧಾರ

ಸಿನಿಮಾ ಜನಪ್ರಿಯತೆಯೇ ಆಧಾರ

ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ಪ್ರಿಯಾಂಕಾ ಜತೆಗೆ ನಟಿ ನಗ್ಮಾ ಕೂಡ ಕೈ ಜೋಡಿಸಲಿದ್ದಾರೆ. ಚಿತ್ರನಟಿಯಾಗಿ ಅವರು ಹಿಂದೆ ಗಳಿಸಿರುವ ಜನಪ್ರಿಯತೆ ಈಗ ಚುನಾವಣಾ ಪ್ರಚಾರ ನಡೆಯುತ್ತಿರುವ ಪಂಚರಾಜ್ಯಗಳಲ್ಲಿ ಈಗಲೂ ಗಾಢವಾಗಿದೆ. ಹಾಗಾಗಿ, ನಗ್ಮಾ ಅವರ ರಂಗ ಪ್ರವೇಶ ಕಾಂಗ್ರೆಸ್ ಗೆ ಕೊಂಚವಾದರೂ ನೆರವಾಗಲಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The most refreshing side of the UP elections is that almost all the parties are banking heavily on women campaigners. Leaders such as Dimple Yadav, Priyanka Gandhi, Smriti Irani have been blazing the campaign.
Please Wait while comments are loading...