3 ಲಕ್ಷ ರು. ಗೆ ಸೌದಿ ಅರೇಬಿಯಾಕ್ಕೆ ಸೇಲ್ ಆದ ಮಹಿಳೆಯ ಕಥೆ!

ಕೆಲಸಕ್ಕೆ ನೇಮಕಗೊಂಡಿದ್ದೇನೆಂದು ತೆರಳಿದ್ದ ಮಹಿಳೆಗೆ ಅಲ್ಲಿಗೆ ಹೋದ ಮೇಲೆ ಸತ್ಯ ಗೊತ್ತಾಗಿ, ಭಾರತಕ್ಕೆ ಬರಲು ಪೇಚಾಡುತ್ತಿರುವ ಹೈದರಾಬಾದ್ ಮಹಿಳೆ.

ಹೈದರಾಬಾದ್, ಏಪ್ರಿಲ್ 24: ದೂರದ ಸೌದಿ ಅರೇಬಿಯಾದಲ್ಲಿ ಕೆಲಸ, ಕೈ ತುಂಬ ಸಂಬಳದ ಆಮಿಷ ತೋರಿಸಿದ ಇಬ್ಬರು ದುರುಳರು, ತೆಲಂಗಾಣದ ಮಹಿಳೆಯೊಬ್ಬರನ್ನು 3 ಲಕ್ಷ ರು.ಗೆ ಮಾರಾಟ ಮಾಡಿದ್ದಾರೆ.

ತಾನು ಕೆಲಸಕ್ಕೆ ನೇಮಕಗೊಂಡಿದ್ದೇನೆಂದು ತೆರಳಿದ್ದ ಮಹಿಳೆಗೆ ಅಲ್ಲಿಗೆ ಹೋದ ಮೇಲೆ ಸತ್ಯ ಗೊತ್ತಾಗಿ, ಭಾರತಕ್ಕೆ ಬರಲು ಪೇಚಾಡುತ್ತಿದ್ದು, ಅದಕ್ಕೆ ಆಕೆಯನ್ನು ಕೊಂಡಿರುವ ವ್ಯಕ್ತಿ ಅವಕಾಶ ನೀಡದೇ ಚಿತ್ರ ಹಿಂಸೆ ನೀಡುತ್ತಿರುವ ಹೃದಯ ವಿದ್ರಾವಕ ಪ್ರಕರಣವಿದು. ಇದೀಗ, ಆ ಮಹಿಳೆಯರ ಪುತ್ರಿ ಸಮೀರಾ ತನ್ನ ತಾಯಿಯನ್ನು ಬಿಡಿಸಿಕೊಡಬೇಕೆಂದು ತೆಲಂಗಾಣ ಹಾಗೂ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ.[ಕೊನೆಗೂ ಹುಬ್ಬಳ್ಳಿ ಹುಡುಗನ ಸೇರಿದ ಪಾಕಿಸ್ತಾನಿ ಹುಡುಗಿ]

Women Sold to Saudi Arabia for just 3 lakhs Rs.

ಮಗಳು ಸಲ್ಲಿಸಿರುವ ಮನವಿಯನ್ವಯ, ಇಂಥ ಸನ್ನಿವೇಶಕ್ಕೆ ಸಿಲುಕಿಕೊಂಡಿರುವ ಮಹಿಳೆಯರ ಹೆಸರು ಸಲ್ಮಾ ಬೇಗಂ. ಆಕೆಗೀಗ 39 ವರ್ಷ. ಈಕೆ, ಹೈದರಾಬಾದ್ ನ ಬಾಬಾ ನಗರದವಳು. ತನ್ನ ಮಗಳೊಂದಿಗೆ ಜೀವನ ಮಾಡುತ್ತಿದ್ದ ಈಕೆ ಬಡತನದಲ್ಲೇ ಬದುಕು ಸವೆಸಿದ್ದಳು.

ಆಕೆಯ ತಲೆಯ ಮೇಲೆ ಸಾಕಷ್ಟು ಸಾಲ ಇದ್ದಿದ್ದರಿಂದ ಹೆಚ್ಚು ದುಡಿಯಬೇಕೆಂಬ ಅಭಿಲಾಷೆ ಆಕೆಗಿತ್ತು. ಇದನ್ನು ಆಕೆಗೆ ಪರಿಚಯವಿದ್ದ ಅಕ್ರಮ್ ಹಾಗೂ ಶಫಿ (ಇವರೇ ಏಜೆಂಟರು) ಎಂಬುವರ ಬಳಿ ಹೇಳಿಕೊಂಡಿದ್ದಳು.[ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ]

ಆಕೆಯ ಪರಿಸ್ಥಿತಿಯ ಲಾಭ ಹೊಡೆಯಲು ಆಲೋಚಿಸಿದ ಅಕ್ರಮ್ ಹಾಗೂ ಶಫಿ, ಆಕೆಗೆ ಸೌದಿ ಅರೇಬಿಯಾದಲ್ಲಿ ಧನಿಕರೊಬ್ಬರ ಮನೆಯಲ್ಲಿ ಮನೆಗೆಲಸ ಕೊಡಿಸಿ, ಕೈತುಂಬಾ ಸಂಬಳ ಬರುವಂತೆ ಮಾಡುವುದಾಗಿ ಹೇಳಿದ್ದರು. ಅದರಂತೆ, ಆಕೆಯ ದಾಖಲೆಗಳನ್ನು ಪಡೆದು ಸೌದಿ ಅರೇಬಿಯಾದಿಂದ ಮನೆಗೆಲಸದ ವೀಸಾ ಕೊಡಿಸಿ ಆಕೆಯನ್ನು ಅರೇಬಿಯಾಕ್ಕೆ ಕಳುಹಿಸಿದ್ದಾರೆ.

ಈಕೆಯನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಮಾಲೀಕ ಈಕೆಯನ್ನು ವಿವಾಹಕ್ಕಾಗಿ ಪೀಡಿಸತೊಡಗಿದ್ದಾನೆ. ಆದರೆ, ಆಕೆ ಇದಕ್ಕೆ ನಿರಾಕರಿಸಿದಾಗ ಆತ ಆಕೆಯನ್ನು ಮದುವೆಯಾಗಲೆಂದೇ ಇಲ್ಲಿಗೆ ಕರೆಸಿಕೊಂಡಿದ್ದು, ಇದಕ್ಕಾಗಿ ಭಾರತದಲ್ಲಿನ ಏಜೆಂಟರೊಬ್ಬರಿಗೆ 3 ಲಕ್ಷ ರು. ನೀಡಿರುವುದಾಗಿ ಹೇಳಿದ್ದಾನೆ.ಆಗಲೇ ಸತ್ಯ ಬಯಲಿಗೆ ಬಂದಿದೆ.

ತಕ್ಷಣವೇ, ಪುತ್ರಿ ಸಮೀರಾ ಮೊಬೈಲ್ ಗೆ ಸಂಪರ್ಕಿಸಿದ ಸಲ್ಮಾ ನಡೆದ ಘಟನೆ ಹೇಳಿದ್ದಾಳೆ. ಇತ್ತ, ಗಾಬರಿಯಾದ ಮಗಳು ಪೊಲೀಸರಿಗೆ ದೂರು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ, ಈಗ ಆಕೆ ಸರ್ಕಾರಕ್ಕೆ ನೇರವಾಗಿ ಮನವಿ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+