ಹೆತ್ತ ಮಗನನ್ನೇ ತುಂಡು ತುಂಡಾಗಿ ಕತ್ತರಿಸಿದ ತಾಯಿ

Posted By: Prithviraj
Subscribe to Oneindia Kannada

ಗುಂಟೂರು, ಅಕ್ಟೋಬರ್, 20: ಹೆತ್ತ ಮಗನನ್ನೇ ತಾಯಿಯೊಬ್ಬಳು ದಾರುಣವಾಗಿ ಕೊಂದು ತುಂಡು ತುಂಡಾಗಿ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕಾಕುಮಾನು ತಾಲ್ಲೂಕಿನ ಬೋಡಿಪಾಲೆಂನಲ್ಲಿ ಈ ಘಟನೆ ನಡೆದಿದ್ದು ಗುರುವಾರ (ಅ.20)ರಂದು ಬೆಳಕಿಗೆ ಬಂದಿದೆ.

Women kills son in Gunturu district Andhrapradesh

ಮೃತ ಬಾಲಕನನ್ನು ಕೋಟೇಶ್ವರ್ ರಾವ್ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿರುವ ಮಹಿಳೆಯನ್ನು ಅಂಜಮ್ಮ ಎಂದು ಹೇಳಲಾಗಿದೆ. ಸಹೋದರನೊಂದಿಗೆ ಕೂಡಿ ಹೆತ್ತ ಮಗನನ್ನೇ ದಾರುಣವಾಗಿ ಹತ್ಯೆಮಾಡಲಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದರಿಂದ ಮನೆಯಿಂದ ದುರ್ವಾಸನೆ ಬಂದಿದೆ. ಇದರಿಂದ ಮನೆಗೆ ಹೋಗಿ ಸ್ಥಳೀಯರು ಪರಿಶೀಲಿಸಿದಾಗ ತುಂಡು ತುಂಡಾಗಿ ಬಿದ್ದಿದ್ದ ಮೃತನ ಅಂಗಾಂಗಳು ಕಾಣಿಸಿಕೊಂಡಿವೆ.

ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಆಸ್ತಿವಿವಾದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿ ಮಹಿಳೆ ಅಂಜಮ್ಮಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A woman has killed her son Koteswar Rao and chopped the body into pieces in Guntur district of Andhra Pradesh.
Please Wait while comments are loading...