ಹೆಣ್ಮಕ್ಳೇ ಸ್ಟ್ರಾಂಗು ಗುರು; ದೇಶ ಆಳುವವರನ್ನು ನಿರ್ಧರಿಸೋದು ಮಹಿಳಾ ಮತದಾರರು!
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಾವು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಸಾಧನೆ ಮಾಡುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ದೇಶ ಆಳುವ ಸರ್ಕಾರ ಯಾವುದು ಎನ್ನುವುದನ್ನೂ ಕೂಡ ಮಹಿಳೆಯರೇ ನಿರ್ಧರಿಸಿದ್ದಾರೆ! ಹೌದು, ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಈ ವಿಚಾರವನ್ನು ಬಹಿರಂಗಪಡಿಸಿದ್ದು, ಪುರುಷ ಮತದಾರರಲ್ಲ, ಮಹಿಳಾ ಮತದಾರರ ಮತಗಳೇ ನಿರ್ಣಾಯಕ ಎನ್ನುವ ವಿಚಾರ ತಿಳಿಸಿವೆ.
ಚುನಾವಣಾ ಆಯೋಗ ಇತ್ತೀಚೆಗೆ 2024ರ ಲೋಕಸಭಾ ಚುನಾವಣೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮತದಾನ ಮಾಡಿದ್ದಾರೆ. ಪುರುಷ ಮತ್ತು ಮಹಿಳೆಯರ ಮತಗಳ ವ್ಯತ್ಯಾಸದಲ್ಲಿ ಕಡಿಮೆಯಾಗಿರುವುದು ಮತ್ತೊಂದು ಮುಖ್ಯ ಸಂಗತಿಯಾಗಿದೆ.

28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 15ರಲ್ಲಿ ಪುರುಷರಿಗಿಂತ ಮಹಿಳಾ ಮತದಾನದ ಪ್ರಮಾಣ ಹೆಚ್ಚಾಗಿವೆ. ಆದರೆ ಉಳಿದ ಕಡೆ ಪುರುಷ ಮತದಾರರು ಹೆಚ್ಚಾಗಿದ್ದಾರೆ. ಉಳಿದ ಕಡೆಗಳಲ್ಲಿ ಮಹಿಳಾ ಮತ್ತು ಪುರಷ ಮತದಾರರ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದೇ ಇದ್ದರು ಬಿಹಾರದಲ್ಲಿ ಮಾತ್ರ ಲಿಂಗ ವ್ಯತ್ಯಾಸದಲ್ಲಿ ಹೆಚ್ಚು ಪ್ರಮಾಣವಿದೆ. ಬಿಹಾರ ಹೊರತುಪಡಿಸಿ ಜಾರ್ಖಂಡ್ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.
ಹೆಚ್ಚು ಮತದಾನವಾಗಿರುವ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಪುರುಷರಿಗಿಂತ ಮಹಿಳಾ ಮತದಾನದ ಪ್ರಮಾಣ ಹೆಚ್ಚಾಗಿದೆ. ಒಡಿಶಾ, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಪುರುಷ ಮತ್ತು ಮಹಿಳಾ ಮತದಾರರ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ಗುಜರಾತ್, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನಗಳಲ್ಲಿ ಪುರುಷರ ಮತನಾದ ಮಹಿಳೆಯರಿಗಿಂತ ಹೆಚ್ಚಾಗಿದೆ. ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಮತ್ತು ಕರ್ನಾಟಕದಲ್ಲಿ ಕೂಡು ಪುರುಷರ ಮತದಾನ ಪ್ರಮಾಣ ಹೆಚ್ಚಾಗಿದ್ದರೂ ಮಹಿಳಾ ಮತದಾರರ ಸಂಖ್ಯೆಗಿಂತ ದೊಡ್ಡ ಪ್ರಮಾಣದಲ್ಲಿ ಏನೂ ಹೆಚ್ಚಾಗಿಲ್ಲ.
ಬಿಹಾರದಲ್ಲಿ ಮಹಿಳೆಯರಿಗಿಂತ ಪುರುಷ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ, ಮತ ಚಲಾಯಿಸಿದವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿದ್ದಾರೆ. ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ ಮತ್ತು ಹೆಚ್ಚಾಗಿ ಮತ ಚಲಾಯಿಸಿದ್ದಾರೆ. ಆದರೆ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮತ ಚಲಾವಣೆಯಲ್ಲಿ ಮಹಿಳೆಯರಿಗಿಂತ ಪುರುಷರು ಮುಂದಿದ್ದಾರೆ.
ವ್ಯತ್ಯಾಸಕ್ಕೆ ಕಾರಣವೇನು?
ಬಿಹಾರ, ಜಾರ್ಖಂಡ್‌ನಂತಹ ಹಿಂದುಳಿದ ರಾಜ್ಯಗಳಲ್ಲಿ ಮಹಿಳಾ ಮತ್ತು ಪುರುಷರ ಮತದಾನದಲ್ಲಿ ಹೆಚ್ಚು ವ್ಯತ್ಯಾಸವಾಗಲು ಮುಖ್ಯ ಕಾರಣ ವಲಸೆ. ಹೆಚ್ಚಿನ ಪ್ರಮಾಣದ ಪುರುಷರ ಕೆಲಸ ಹುಡುಕಿ ಹೊರ ರಾಜ್ಯಗಳಿಗೆ ಹೋಗುವ ಕಾರಣ ಇಲ್ಲಿ ಮಹಿಳೆಯರೇ ಹೆಚ್ಚಾಗಿ ಮತದಾನದ ಪ್ರಮಾಣ ಹೊಂದಿದ್ದಾರೆ.












Click it and Unblock the Notifications