ಕಪ್ಪು ಬಣ್ಣದ ಮೈ ಹೀಗಳೆದಿದ್ದಕ್ಕೆ ಆಹಾರದಲ್ಲಿ ವಿಷ ಬೆರೆಸಿದ ಮಹಿಳೆ

ರಾಯಗಡ, ಜೂನ್ 23: ಕಪ್ಪು ಬಣ್ಣದ ಚರ್ಮ ಹೊಂದಿರುವುದಕ್ಕೆ ಅವಮಾನಗಳನ್ನು ಎದುರಿಸುತ್ತಿದ್ದ ಮಹಿಳೆಯೊಬ್ಬರು ಸಂಬಂಧಿಕರ ಮನೆಯ ಕಾರ್ಯಕ್ರಮದಂದು ಊಟಕ್ಕೆ ವಿಷ ಬೆರೆಸಿದ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಐವರು ಮೃತಪಟ್ಟಿದ್ದರೆ, ಸುಮಾರು 80 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಜೂನ್ 18ರಂದು ನಡೆದಿದೆ. ಮಹಾದ್ ಗ್ರಾಮದಲ್ಲಿ ಸುಭಾಷ್ ಮಾನೆ ಎಂಬುವವರ ಗೃಹಪ್ರವೇಶ ಸಮಾರಂಭ ನಡೆದಿತ್ತು. ಅಲ್ಲಿ ಆರೋಪಿ ಪ್ರಗ್ಯಾ ಸುರ್ವಾಸೆ ಆಹಾರದಲ್ಲಿ ಕೀಟನಾಶಕವನ್ನು ಬೆರೆಸಿ, ಸಂಬಂಧಿಕರಿಗೆ ಬಡಿಸಿದ್ದರು.

woman poisons food at family function

ವಿಷಪೂರಿತ ಆಹಾರ ಸೇವನೆಯಿಂದ ನಾಲ್ವರು ಮಕ್ಕಳು ಮತ್ತು ವೃದ್ಧರೊಬ್ಬರು ಮೃತಪಟ್ಟಿದ್ದರು.

ತನಿಖೆ ಆರಂಭಿಸಿರುವ ಪೊಲೀಸರು, ಹತ್ಯೆ ಪ್ರಯತ್ನ ಆರೋಪದಡಿ ಮಹಿಳೆಯನ್ನು ಬಂಧಿಸಿದ್ದಾರೆ.

ಕೌಟುಂಬಿಕ ವಿವಾದಗಳ ಕಾರಣ ಈ ಕೃತ್ಯ ಎಸಗಿರುವುದಾಗಿ ಆಕೆ ತಪ್ಪು ಒಪ್ಪಿಕೊಂಡಿದ್ದಾಳೆ. ಸೋಮವಾರ ನಡೆದ ಸಂತೋಷಕೂಟದ ವೇಳೆ ವಿಷಪೂರಿತ ಆಹಾರ ಸೇವಿಸಿದವರಲ್ಲಿ ಒಟ್ಟು 120 ಮಂದಿ ಅಸ್ವಸ್ಥಗೊಂಡಿದ್ದರೆ, ಐವರು ಮೃತಪಟ್ಟಿದ್ದಾರೆ ಎಂದು ರಾಯಗಡ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪರಾಸ್ಕರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+