• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೈಂಗಿಕ ಕಿರುಕುಳ: ಹಿರಿಯ ಅಧಿಕಾರಿ ಮೇಲೆ ಯುವ ಐಎಎಸ್ ಅಧಿಕಾರಿ ಆರೋಪ

|

ಚಂಡಿಗಡ, ಜೂನ್ 11: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹರಿಯಾಣದ ಯುವ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

'ಆದರೆ, ಈ ಆರೋಪ ಸತ್ಯಕ್ಕೆ ದೂರವಾದದ್ದು. ಇತರೆ ಅಧಿಕಾರಿಗಳಿಂದ ಎಲ್ಲ ಅಗತ್ಯ ಅನುಮೋದನೆ ದೊರೆತ ಕಡತಗಳಲ್ಲಿ ತಪ್ಪುಗಳನ್ನು ಹುಡುಕಲು ಹೋಗಬೇಡಿ ಎಂಬ ಸಲಹೆ ಮಾತ್ರ ನೀಡಿದ್ದಾಗಿ ಅಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.

ಅಸಭ್ಯವಾಗಿ ವರ್ತಿಸಿದ ಪೊಲೀಸರಿಗೇ ಪಂಚುಕೊಟ್ಟ ಗಟ್ಟಿಗಿತ್ತಿ ಈಕೆ!

ತನ್ನ ಹಿರಿಯ ಅಧಿಕಾರಿ ವಿರುದ್ಧ ದೂರು ನೀಡಿರುವ ಮಹಿಳಾ ಅಧಿಕಾರಿ, ಅದರ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿಯೂ ಬರೆದುಕೊಂಡಿದ್ದಾರೆ.

woman ias officer accused her senior of sexual harassment

'ಹಿರಿಯ ಅಧಿಕಾರಿಯು ನನ್ನ ಬಳಿ ದ್ವಂದ್ವಾರ್ಥದ ಮಾತುಗಳನ್ನು ಆಡಿದ್ದರು. ಅಲ್ಲದೆ ನನ್ನ ವಾರ್ಷಿಕ ಗೋಪ್ಯ ವರದಿಯನ್ನು (ಎಸಿಆರ್) ಹಾಳು ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಹೊಸದಾಗಿ ಮದುವೆಯಾಗಿರುವ ವಧುವಿನಂತೆ ನೀನು ಎಲ್ಲವನ್ನೂ ವಿವರಿಸಬೇಕು. ನಾನೂ ಹಾಗೆಯೇ ಹೇಳಿಕೊಡುತ್ತೇನೆ ಎಂದು ಅವರು ಹೇಳಿದರು' ಎಂಬುದಾಗಿ ಅವರು ಆರೋಪಿಸಿದ್ದಾರೆ.

ಮೇ 22ರಂದು ತಮ್ಮ ಕಚೇರಿಗೆ ಬರುವಂತೆ ಸೂಚನೆ ನೀಡಿದ್ದ ಹಿರಿಯ ಅಧಿಕಾರಿ ಸುನಿಲ್ ಗುಲಾಟಿ, ತಮಗೆ ಬೆದರಿಕೆ ಹಾಕಿದ್ದರು. ಕಚೇರಿಯ ಕಡತಗಳ ಬಗ್ಗೆ ವಿರುದ್ಧವಾದ ಕಾಮೆಂಟ್‌ಗಳನ್ನು ಮಾಡುವುದನ್ನು ನಿಲ್ಲಿಸದಿದ್ದರೆ ತನ್ನ ವಾರ್ಷಿಕ ಎಸಿಆರ್‌ಅನ್ನು ಹಾಳು ಮಾಡಬೇಕಾಗುತ್ತದೆ ಎಂದು ಹೆದರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಚೇರಿಗೆ ಕರೆಯಿಸಿದ್ದ ಅಧಿಕಾರಿಯು ತಮ್ಮ ಬಳಿ ಅನುಚಿತವಾಗಿ ವರ್ತಿಸಿದ್ದರು. ಸಂಜೆ 5 ಕ್ಕೆ ಕಚೇರಿಗೆ ಕರೆಯಿಸಿ 7.39ರವರೆಗೂ ಅಲ್ಲಿ ಇರಲು ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಈ ಘಟನೆ ಬಗ್ಗೆ ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರಕ್ಕೆ ವಿವರವಾದ ದೂರು ಸಲ್ಲಿಸಿರುವುದಾಗಿ ಸಹ ಮಹಿಳಾ ಅಧಿಕಾರಿ ಹೇಳಿದ್ದಾರೆ.

ಪ್ರತಿ ಕಡತದ ಮೇಲೆಯೂ ನಕಾರಾತ್ಮಕವಾದ ಕಾಮೆಂಟ್‌ಗಳನ್ನು ಬರೆಯುವುದು ಬೇಡ. ಈ ವರ್ತನೆಯ ಕಾರಣದಿಂದ ಹಿರಿಯ ಅಧಿಕಾರಿಗಳು ಆಕೆಯ ವೃತ್ತಿಗೆ ತೊಂದರೆ ಕೊಡಬಹುದು ಎಂದು ಆಕೆ ವೃತ್ತಿಗೆ ಹೊಸಬರಾಗಿದ್ದರಿಂದ ಸಲಹೆ ನೀಡಿದ್ದಾಗಿ ಅಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.

ಸುನಿಲ್ ಗಿಲಾಟಿ ಅವರು ನನಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದರು. ನನ್ನನ್ನು ಈ ಹಿಂದೆ ಅಂಬಾಲ, ಕೋಸ್ಲಿ ಮತ್ತು ಡಬ್ವಾಲಿಗಳಿಗೆ ನಿಯೋಜಿಸಿದ್ದಾಗಲೂ ಇಂತಹ ಘಟನೆಗಳು ನಡೆದಿದ್ದವು. ಅದರ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೆ. ನನಗೆ ಜೀವದ ಮೇಲೆ ಭಯವಿದೆ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ.

ರೋಹ್ಟಕ್‌ನಲ್ಲಿನ ಸಭೆಗೆ ಬರುವಂತೆ ನನ್ನನ್ನು ಕರೆದಿದ್ದರು. ನಾನು ಅವರ ಜತೆ ಮಧ್ಯಾಹ್ನ 2.30-5 ಗಂಟೆವರೆಗೆ ಒಬ್ಬಳೇ ಇರಬೇಕಾಗಿತ್ತು. ಬಳಿಕ ಚಂಡಿಗಡಕ್ಕೆ ಒಬ್ಬಳೇ ಹೋಗುವಂತೆ ಸೂಚಿಸಿದ್ದರು. ನನಗೆ ಈ ಹಿಂದೆಯೂ ಕಿರುಕುಳ ನೀಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ದೂರಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A young woman IAS Officer of Haryana has accused on her senior officer of sexual harassment and threatening her. The senior officer has denied that allegation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more