ಮೀರತ್ ಮಹಿಳೆ ಜನ್ ಧನ್ ಖಾತೆಯಲ್ಲಿ 100 ಕೋಟಿ ರು ಹೆಂಗೆ ಬಂತು?

Posted By:
Subscribe to Oneindia Kannada

ಮೀರತ್, ಡಿಸೆಂಬರ್ 27: ಜನ್ ಧನ್ ಖಾತೆಯಲ್ಲಿ 100 ಕೋಟಿ ರು ಬ್ಯಾಲೆನ್ಸ್ ಇರುವುದನ್ನು ಕಂಡ ಮಹಿಳೆಯೊಬ್ಬರು ಹೌಹಾರಿದ್ದಾರೆ. ಈ ಬಗ್ಗೆ ಗಾಬರಿಗೊಂಡು ಪ್ರಧಾನಿ ಸಚಿವಾಲಯಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಶೀತಲ್ ಯಾದವ್ ಅವರ ಜನ್ ಧನ್ ಖಾತೆ ಕಥೆ ಇಲ್ಲಿ ಓದಿ

ಉತ್ತರಪ್ರದೇಶದ ಮೀರತ್‍ನ ಶೀತಲ್ ಯಾದವ್ ತಮ್ಮ ಜನ್‍ಧನ್ ಖಾತೆಯಲ್ಲಿ ಸುಮಾರು 100 ಕೋಟಿ ರೂಪಾಯಿ ಬ್ಯಾಲೆನ್ಸ್ ಇರುವುದನ್ನು ಕಂಡು ದಂಗಾಗಿದ್ದಾರೆ. ಈ ಬಗ್ಗೆ ಶೀತಲ್ ಯಾದವ್ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಆದ್ರೆ ಅವರು ಸರಿಯಾಗಿ ಉತ್ತರ ಕೊಡದೆ ಆಮೇಲೆ ಬನ್ನಿ ಎಂದು ಹೇಳಿದ ಕಾರಣ ಸೋಮವಾರದಂದು ಮಹಿಳೆ ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

Woman finds Rs 100 cr in Jan-Dhan account, approaches PMO

' ನಾನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾರದಾ ರೋಡ್ ಶಾಖೆಯಲ್ಲಿ ಜನ್‍ಧನ್ ಖಾತೆಯನ್ನು ಹೊಂದಿದ್ದೇನೆ. ಡಿಸೆಂಬರ್ 18ರಂದು ಎಟಿಎಂನಿಂದ ಹಣ ಡ್ರಾ ಮಾಡಲು ಹೋದಾಗ ನನ್ನ ಖಾತೆಯಲ್ಲಿ 99,99,99,394 ರೂ ಬ್ಯಾಲೆನ್ಸ್ ಇತ್ತು. ಇದನ್ನು ನಂಬಲಾಗದೆ ಕ್ಯೂನಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದವರನ್ನು ಮತ್ತೆ ಚೆಕ್ ಮಾಡಲು ಹೇಳಿದೆ.

ಅವರು ಚೆಕ್ ಮಾಡಿದಾಗಲೂ ಅಷ್ಟೆ ಹಣ ಇತ್ತು. ನಂತರ ಮತ್ತೊಂದು ಎಟಿಎಂಗೆ ಹೋಗಿ ಚೆಕ್ ಮಾಡಿದಾಗಲೂ ಅಷ್ಟೇ ಬ್ಯಾಲೆನ್ಸ್ ತೋರಿಸುತ್ತಿತ್ತು. ನಂತರ ಈ ಬಗ್ಗೆ ವಿಚಾರಿಸಲು ಎರಡು ದಿನ ಬ್ಯಾಂಕಿಗೆ ಅಲೆದಾಡಿದರೂ ಬ್ಯಾಂಕ್ ಸಿಬ್ಬಂದಿ ನನ್ನ ದೂರಿಗೆ ಕಿವಿಗೊಡಲಿಲ್ಲ.

ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಸ್ಪಷ್ಟನೆ ನೀಡಲಿದ್ದು ಒಂದು ದಿನದ ನಂತರ ಬರುವಂತೆ ಹೇಳಿದ್ರು. ಅದರಂತೆ ಮತ್ತೆ ಬ್ಯಾಂಕಿಗೆ ಹೋದಾಗ ಮತ್ತೊಂದು ಕಾರಣ ಕೊಟ್ಟು ವಾಪಸ್ ಕಳಿಸಿದ್ರು ಅಂತ ಶೀತಲ್ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರವನ್ನು ಶೀತಲ್ ಅವರ ಪತಿ ಜಿಲೇಂದರ್ ಸಿಂಗ್ ಪ್ರಧಾನಿ ಸಚಿವಾಲಯಕ್ಕೆ ಕಳಿಸಿದ್ದಾರೆ.

ಟ್ರಾನ್ಸ್ ಫಾರ್ಮರ್ ಉತ್ಪಾದನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಜಿಲೇಂದರ್ ಸಿಂಗ್ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಪ್ಯಾಕೇಜಿಂಗ್ ವಿಭಾಗದಲ್ಲಿ ಕೆಲಸ ಮಾಡುವ ನನ್ನ ಪತ್ನಿಗೆ ತಿಂಗಳಿಗೆ 5 ಸಾವಿರ ರೂ. ಸಂಬಳ. ನನಗೂ ಕೂಡ ಬರುವುದು ಅಲ್ಪ ಪ್ರಮಾಣದ ಸಂಬಳವೇ. ಹೀಗಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣ ಆಕೆಯ ಖಾತೆಗೆ ಹೇಗೆ ಬಂತು ಎಂದು ಆಶ್ಚರ್ಯವಾಯ್ತು ಅಂತ ಹೇಳಿದ್ದಾರೆ.

ಬ್ಯಾಂಕ್ ಸಿಬ್ಬಂದಿಯ ವರ್ತನೆಯಿಂದ ಬೇಸತ್ತಿದ್ದ ಜಿಲೇಂದರ್, ಪ್ರಧಾನಿ ಸಚಿವಾಲಯಕ್ಕೆ ಇ-ಮೇಲ್ ಕಳಿಸಲು ವಿದ್ಯಾವಂತರೊಬ್ಬರ ಸಹಾಯ ಕೇಳಿದೆವು ಅಂತ ತಿಳಿಸಿದ್ದಾರೆ. ಡಿಸೆಂಬರ್ 26ರಂದು ಪ್ರಧಾನಿ ಸಚಿವಾಲಯಕ್ಕೆ ಪತ್ರ ಕಳಿಸಿದ್ದೇವೆ.

ಠೇವಣಿಯ ಗರಿಷ್ಠ ಮೊತ್ತವನ್ನು 50 ಸಾವಿರ ರೂ.ಗೆ ನಿಗದಿಪಡಿಸಿರುವಾಗ 100 ಕೋಟಿ ರೂ. ಖಾತೆಗೆ ಹೇಗೆ ಬಂತು ಎಂಬ ಬಗ್ಗೆ ಪತ್ತೆ ಮಾಡಲು ಸಹಾಯ ಮಾಡುವಂತೆ ಕೋರಿದ್ದೇವೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shocked to find nearly Rs 100 crore in her Jan-Dhan account in a Meerut branch of a state-run bank, a woman here on Monday sought the PMO's intervention after the bank officials did not attend to her complaint and kept asking her to come some other time.
Please Wait while comments are loading...