Necklace for Dog: ಸಾಕಿದ ನಾಯಿಗೆ ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನದ ನೆಕ್ಲೆಸ್ ಹಾಕಿದ ಮಹಿಳೆ- ವಿಡಿಯೋ ವೈರಲ್

ಜನರು ಸಾಮಾನ್ಯವಾಗಿ ತಮ್ಮ ಸಾಕುಪ್ರಾಣಿಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಸಾಕುಪ್ರಾಣಿಗಳ ಮಾಲೀಕರು ಯಾವಾಗಲೂ ತಮ್ಮ ಸಾಕುಪ್ರಾಣಿಗಳು ಅತ್ಯುತ್ತಮ ಆಹಾರವನ್ನು ತಿನ್ನಬೇಕು, ಎಸಿಯಲ್ಲಿ ಇರಬೇಕು, ಮನೆ ಸದಸ್ಯರಂತೆ ಸೌಲಭ್ಯಗಳನ್ನು ಹೊಂದಿರಬೇಕು ಅಂತ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನದ ನೆಕ್ಲೆಸ್ ಅನ್ನು ಸಾಕು ನಾಯಿಗೆ ಹಾಕಿದ್ದಾಳೆ.

ಹೌದು.... ಮಹಿಳೆಯೊಬ್ಬರು ತನ್ನ ಮುದ್ದಿನ ನಾಯಿಗೆ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಚೆಂಬೂರ್ ಮೂಲದ 'ಅನಿಲ್ ಜ್ಯುವೆಲರ್ಸ್' ಶಾಪ್‌ನ ಮಾಲೀಕರೊಬ್ಬರು ಸರಿತಾ ಸಲ್ಡಾನ್ಹಾ ಅವರ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಹಿಳೆ ತನ್ನ ಮುದ್ದಿನ ನಾಯಿ ಟೈಗರ್‌ಗಾಗಿ ಚಿನ್ನದ ಸರವನ್ನು ಖರೀದಿಸಿ ಹಾಕುವುದು ಕಂಡು ಬಂದಿದೆ.

Woman buys 2 5 lakh rupees gold chain for pet video goes viral

ಸಲ್ಡಾನ್ಹಾ ಮುಂಬೈನ ಚೆಂಬೂರ್ ಪ್ರದೇಶದ ನಿವಾಸಿ ಎಂದು ಅನಿಲ್ ಜ್ಯುವೆಲರ್ಸ್ ಮಾಲೀಕ ಪಿಯೂಷ್ ಜೈನ್ ಬರೆದಿದ್ದಾರೆ. ಕಳೆದ ತಿಂಗಳು ತನ್ನ ಮುದ್ದಿನ ನಾಯಿ ಟೈಗರ್‌ಗೆ ಚಿನ್ನದ ಸರ ಖರೀದಿಸಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆಂದು ತಿಳಿಸಿದ್ದಾರೆ. 35 ಗ್ರಾಂನ ಚೈನ್ ಬೆಲೆ 2.5 ಲಕ್ಷ ರೂ.ಗೂ ಹೆಚ್ಚು ಎಂದು ವಿವರಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅನಿಲ್ ಜ್ಯುವೆಲ್ಲರ್ಸ್ ಹಂಚಿಕೊಂಡ ವೀಡಿಯೊದಲ್ಲಿ, ಸಲ್ಡಾನ್ಹಾ ತನ್ನ ನಾಯಿಯೊಂದಿಗೆ ಆಭರಣ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಡಾನ್ಹಾ ಅವರು ನೆಕ್ಲೆಸ್ ಅನ್ನು ನೋಡುತ್ತಿರುವಾಗ ನಾಯಿ ಅವರಿಗಾಗಿ ತಾಳ್ಮೆಯಿಂದ ಕಾಯುತ್ತಿತ್ತು. ತನ್ನ ಮಾಲೀಕರು ತನ್ನ ಕೊರಳಿಗೆ ಚಿನ್ನದ ಸರ ಹಾಕುತ್ತಿದ್ದಂತೆ ಟೈಗರ್ ಖುಷಿಯಿಂದ ಬಾಲ ಅಲ್ಲಾಡಿಸುತ್ತಿರುವುದು ವಿಡಿಯೋದಲ್ಲಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಅನಿಲ್ ಜ್ಯುವೆಲರ್ಸ್ ಮಾಲೀಕ ಪಿಯೂಷ್ ಜೈನ್, ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಆಳವಾದ ಮತ್ತು ಸುಂದರವಾದ ಒಡನಾಟ ಇರುತ್ತದೆ ಎಂದು ಬರೆದಿದ್ದಾರೆ. ಈ ವೀಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ವೀಡಿಯೊವನ್ನು 46,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಡಜನ್ಗಟ್ಟಲೆ ಪ್ರತಿಕ್ರಿಯೆಗಳನ್ನು ಈ ವಿಡಿಯೋ ಸ್ವೀಕರಿಸಿದೆ. ಮಹಿಳೆಗೆ ನಾಯಿ ಮೇಲಿರುವ ಪ್ರೀತಿ ಕಂಡು ಜನ ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ಕಾಮೆಂಟ್ ವಿಭಾಗದಲ್ಲಿ ಪ್ರಶಂಸಿಸಿದ್ದಾರೆ.

ಕಾಮೆಂಟ್ ಹೇಗಿದೆ?

'ನಾಯಿ ಪುಣ್ಯ ಮಾಡಿದೆ, ಅದ್ಭುತ ದೃಶ್ಯ' Instagram ಕಾಮೆಂಟರ್ ಬರೆದಿದ್ದಾರೆ.

ಇನ್ನೊಬ್ಬರು ವೀಡಿಯೊವನ್ನು ನೋಡಿ 'ಎಷ್ಟು ಸುಂದರವಾಗಿದೆ. ನಾಯಿಗಳು ಮಕ್ಕಳಿದ್ದಂತೆ' ಎಂದು ಬರೆದಿದ್ದಾರೆ.

"ಸೂಪರ್ ಐ ಲೈಕ್ ದಿಸ್" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಅನೇಕರು ಟೈಗರ್ ನ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ. ಅಂತರ್ಜಾಲದಲ್ಲಿ ನಾಯಿಗಳ ವೀಡಿಯೊಗಳು ಬಹುಬೇಗ ವೈರಲ್ ಆಗಿ ಬಿಡುತ್ತವೆ. ಈಗ ಈ ವಿಡಿಯೋವನ್ನು ಜನ ಮೆಚ್ಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+