ಛತ್ತೀಸ್ ಗಢ: ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಕೊರಿಯ(ಛತ್ತೀಸ್ ಗಢ), ಏಪ್ರಿಲ್ 02: ತುಂಬು ಗರ್ಭಿಣಿಯೊರ್ವಳು ಆಟೋ ರಿಕ್ಷಾದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಛತ್ತೀಸ್ ಗಢದ ಕೊರಿಯ ಎಂಬಲ್ಲಿ ನಡೆದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಮಹಿಳೆಯೊಬ್ಬರನ್ನು ಇಲ್ಲಿನ ಕೊರಿಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸುವುದಕ್ಕಾಗಿ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರ್ಯಾರೂ ಇಲ್ಲದ ಕಾರಣ ಆಟೋದಲ್ಲೆ ಪ್ರಸವ ವೇದನೆ ಶುರುವಾಗಿತ್ತು. ಇದರಿಂದಾಗಿ ಕುಟುಂಬಸ್ಥರೇ ಸೇರಿ ಆಟೋದಲ್ಲೆ ಆಕೆ ಮಗುವಿಗೆ ಜನ್ಮ ನೀಡುವುದಕ್ಕೆ ನೆರವಾಗಿದ್ದರು.

ಗರ್ಭಿಣಿಯರಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಂಥ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ಬಡವರಿಗೆ, ಬುಡಕಟ್ಟು ಜನರಿಗಾಗಿಯೇ ಇರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭಗಳಲ್ಲೂ ವೈದ್ಯರಿರುವುದಿಲ್ಲ ಎಂದರೆ ತಲೆತಗ್ಗಿಸುವ ಸಂಗತಿ ಎಂದು ಜನರು ಆರೋಗ್ಯ ಕೇಂದ್ರಕ್ಕೆ ಛೀಮಾರಿ ಹಾಕುತ್ತಿದ್ದಾರೆ.












Click it and Unblock the Notifications