• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಗೆ ಭರ್ಜರಿ ಜಯ, ಯಾವ ರಾಜ್ಯದಲ್ಲಿ ಯಾರ ರಾಜ್ಯಭಾರ?

By Sachhidananda Acharya
|

ಬೆಂಗಳೂರು, ಮಾರ್ಚ್ 3: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು ಒಂದು ರಾಜ್ಯದಲ್ಲಿ ಮಾತ್ರ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ.

ಒಟ್ಟಾರೆ ಇಂದಿನ ಫಲಿತಾಂಶದ ಅಂತ್ಯಕ್ಕೆ ಕಾಂಗ್ರೆಸ್ 3 ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಂಡಿದ್ದರೆ, ಎಡಪಕ್ಷಗಳ ಪಾಲಿಗೆ ಉಳಿದಿದ್ದು ಕೇರಳ ಮಾತ್ರ. ಬಿಜೆಪಿ ಬರೋಬ್ಬರಿ 20 ರಾಜ್ಯಗಳಲ್ಲಿ ಅಧಿಕಾರಕ್ಕೇರಿದ್ದು ಮೇಘಾಲಯದಲ್ಲೂ ಸರಕಾರ ಸ್ಥಾಪಿಸಿದರೆ 21ನೇ ರಾಜ್ಯವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ.

ದಿಗ್ವಿಜಯದ ನಡೆ ಕರ್ನಾಟಕದ ಕಡೆಗೆ : ಅಮಿತ್ ಶಾ

2014ರಲ್ಲಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರುವ ಹೊತ್ತಿಗೆ ಬಿಜೆಪಿ ಕೈಯಲ್ಲಿ 6, ಕಾಂಗ್ರೆಸ್ ಕೈಯಲ್ಲಿ 14 ರಾಜ್ಯಗಳಿದ್ದವು. ಸದ್ಯ ಬಿಜೆಪಿ ತನ್ನ ಬಲವನ್ನು 21ಕ್ಕೆ ಏರಿಕೆ ಮಾಡಿಕೊಂಡಿದ್ದರೆ ಕಾಂಗ್ರೆಸ್ 3ಕ್ಕೆ ಕುಸಿದಿದೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು

ಬಿಜೆಪಿ ತನ್ನ ಮಿತ್ರ ಪಕ್ಷಗಳೊಂದಿಗೆ 20 ರಾಜ್ಯದಲ್ಲಿ ಅಧಿಕಾರದಲ್ಲಿದೆ. ಮೇಘಾಲಯದಲ್ಲೂ ಅಧಿಕಾರಕ್ಕೇರುವ ಹವಣಿಕೆಯಲ್ಲಿದೆ.

ಬಿಜೆಪಿ ಮಿತ್ರಪಕ್ಷಗಳೊಂದಿಗೆ ಅಧಿಕಾರದಲ್ಲಿರುವ ರಾಜ್ಯಗಳೆಂದರೆ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತ್ರಿಪುರ, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಮೇಘಾಲಯ (ಸರಕಾರ ರಚಿಸಿದರೆ).

ಈಶಾನ್ಯದ ಹೀನಾಯ ಸೋಲು : ರಾಹುಲ್ ಮೇಲೆ ನೆಟ್ ನೋಟ

ಕಾಂಗ್ರೆಸ್ ಗೆ ಉಳಿದಿದ್ದು ಮೂರೇ ಮೂರು

ಕಾಂಗ್ರೆಸ್ ಗೆ ಉಳಿದಿದ್ದು ಮೂರೇ ಮೂರು

ಇಂದಿನ ಸೋಲಿನೊಂದಿಗೆ ಕಾಂಗ್ರೆಸ್ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದ್ದು ಪುಟ್ಟ ರಾಜ್ಯ ಮಿಜೋರಾಂ ಹಾಗೂ ಕರ್ನಾಟಕ ಮತ್ತು ಪಂಜಾಬ್ ನಲ್ಲಿ ಮಾತ್ರ ಅಧಿಕಾರವನ್ನು ಉಳಿಸಿಕೊಂಡಿದೆ.

ತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿ

ಐದು ರಾಜ್ಯಗಳಲ್ಲಿ ಇತರರು

ಐದು ರಾಜ್ಯಗಳಲ್ಲಿ ಇತರರು

ಇನ್ನು ಐದು ರಾಜ್ಯಗಳಲ್ಲಿ ಇತರ ಪಕ್ಷಗಳು ಅಧಿಕಾರದಲ್ಲಿವೆ. ಕೇರಳದಲ್ಲಿ ಎಡಪಕ್ಷಗಳ ಮೈತ್ರಿಕೂಟ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್ ಎಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ, ಒಡಿಶಾದಲ್ಲಿ ಬಿಜು ಜನಾತಾದಳ ಅಧಿಕಾರದಲ್ಲಿದೆ. ಇದೇ ವೇಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿದೆ.

ಮುಂಬರಲಿರುವ ಚುನಾವಣೆಗಳು

ಮುಂಬರಲಿರುವ ಚುನಾವಣೆಗಳು

ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಇದೇ ಮೇನಲ್ಲಿ ಚುನಾವಣೆ ನಡೆಯಲಿದೆ. ಇನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಈ ವರ್ಷದ ಅಂತ್ಯಕ್ಕೆ ಚುನಾವಣೆ ನಡೆಯಬೇಕಾಗಿದೆ. ತನ್ನ ದಂಡಯಾತ್ರೆ ಮುಂದುವರಿಸಬೇಕಾದೆ ಬಿಜೆಪಿ ಕರ್ನಾಟಕವನ್ನು ಗೆಲ್ಲಬೇಕಾಗಿದೆ ಮತ್ತು ಉಳಿದ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಿದೆ.

ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After winning Tripura, Nagaland and (almost) Meghalaya the BJP has brought two more state under its belt, marking its presence in 21 states in India today. The Congress, in turn, is dominant in only three states currently – a far cry from its presence in 13 states back in 2014.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more