ಶೇ. 63.1 ಮತಗಳೊಂದಿಗೆ ಮುಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್

ನವದೆಹಲಿ, ಜೂನ್ 23: ಎನ್ಡಿಎ ಬತ್ತಳಿಕೆಯಲ್ಲಿ ಎಲೆಕ್ಟೋರಲ್ ಕಾಲೇಜಿನ ಶೇಕಡಾ 63.1 ಮತಗಳಿದ್ದು ಮುಂದಿನ ರಾಷ್ಟ್ರಪತಿ ಯಾರು ಎಂಬುದು ಈಗಲೇ ನಿಕ್ಕಿಯಾಗಿದೆ. ಬುಧವಾರ ವಿಪಕ್ಷಗಳು ಮೀರಾ ಕುಮಾರ್ ರನ್ನು ತಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿವೆ. ಆದರೆ ಅವರು ಗೆಲ್ಲುವ ಸಾಧ್ಯತೆಗಳು ಮಾತ್ರ ಇಲ್ಲವೇ ಇಲ್ಲ.

ಹಾಗಾಗಿ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

With 63.1 per cent of votes, Kovind is next President of India

ಎನ್ಡಿಎಗೆ ತನ್ನದೇ ಆದ ಶೇಕಡಾ 48.9 ಮತಗಳಿವೆ. ಆದರೆ ಎನ್ಡಿಎ ಹೊರತಾದ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ರಾಮ್ ನಾಥ್ ಕೋವಿಂದ್ ಬೆಂಬಲಿಗರ ಸಂಖ್ಯೆ ಶೇಕಡಾ 63ರ ಗಡಿ ದಾಟಿದೆ. ಎಲೆಕ್ಟೋರಲ್ ಕಾಲೇಜಿನಲ್ಲಿ ಶೇಕಡಾ 1.91 ಮತಗಳಿರುವ ಜೆಡಿಯು, ಶೇ. 5.39 ಮತಗಳಿರುವ ಎಐಎಡಿಎಂಕೆ, ಶೇ. 2.99 ಮತಗಳಿರುವ ಬಿಜೆಡಿ, ಶೇ. 2 ಮತಗಳಿರುವ ಟಿಆರ್ ಎಸ್, ಶೇ. 1.53 ಮತಗಳಿರುವ ವೈಎಸ್ಆರ್ ಕಾಂಗ್ರೆಸ್, ಶೇ. 0.38 ಮತಗಳಿರುವ ಐಎನ್ಎಲ್ ಡಿ ಬಿಜೆಪಿ ಅಭ್ಯರ್ಥಿಯ ಬೆಂಬಲಕ್ಕೆ ನಿಂತಿವೆ.

ಇದರ ಜತೆಗೆ ಶೇ. 2.34 ಮತಗಳಿರುವ ಶಿವಸೇನೆ ಕೂಡಾ ಕೋವಿಂದ್ ರನ್ನು ಬೆಂಬಲಿಸಲಿದೆ ಎಂದು ಎನ್ಡಿಎ ಅಂದುಕೊಂಡಿದೆ. ಹೀಗೆ ಒಟ್ಟು ಶೇ. 63.1 ಮತಗಳನ್ನು ಬುಟ್ಟಿಯಲ್ಲಿಟ್ಟುಕೊಂಡಿದ್ದು ಕೋವಿಂದ್ ಆಯ್ಕೆಯ ಹಾದಿ ಸುಗಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+