• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ತವ್ಯಕ್ಕೆ ವಾಪಸಾದ ಮೇಲೆ ಮೊದಲ ಬಾರಿ MiG- 21 ಕಾಕ್ ಪಿಟ್ ನಲ್ಲಿ ಅಭಿನಂದನ್

By ಅನಿಲ್ ಆಚಾರ್
|

ಬಾಲಾಕೋಟ್ ದಾಳಿಯ ನಂತರ ಪಾಕಿಸ್ತಾನದ F- 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ, ವೀರ್ ಚಕ್ರ ಪುರಸ್ಕೃತ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಮತ್ತೆ MiG- 21 ಯುದ್ಧ ವಿಮಾನದ ಕಾಕ್ ಪಿಟ್ ಗೆ (ಪೈಲಟ್ ಕೂರುವ ಸ್ಥಳ) ಸೋಮವಾರ ಹಿಂತಿರುಗಿದ್ದಾರೆ. ಅಂದಹಾಗೆ ಬಹಳ ಕಾಲದ ನಂತರ ಕರ್ತವ್ಯಕ್ಕೆ ಹಿಂತಿರುಗಿ, ಪಠಾಣ್ ಕೋಟ್ ವಾಯು ನೆಲೆಯಿಂದ ಹಾರಾಟ ನಡೆಸಿದ್ದಾರೆ.

ಆದರೆ, ಈ ವಿಮಾನ ಹಾರಾಟ ಒಂದೇ ಕಾರಣಕ್ಕಾಗಿ ವಿಶೇಷ ಅಲ್ಲ. ಅಭಿನಂದನ್ ವರ್ತಮಾನ್ ಗೆ ಸಹ ಪೈಲಟ್ ಆಗಿ ಹಾರಾಟ ನಡೆಸಿರುವವರು ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ. ಏರ್ ಚೀಫ್ ಕೂಡ MiG- 21 ಯುದ್ಧ ವಿಮಾನದ ಪೈಲಟ್. 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಯುದ್ಧ ಸಾಮಗ್ರಿಗಳನ್ನು ಧ್ವಂಸ ಮಾಡಿ, ಭಾರತದ ಪರವಾಗಿ ಸನ್ನಿವೇಶ ಸೃಷ್ಟಿ ಆಗಲು ಕಾರಣರಾದವರು ಧನೋವಾ.

ಅಭಿನಂದನ್ ವರ್ಧಮಾನ ಡಿಬ್ರೀಫಿಂಗ್ ಮುಕ್ತಾಯ

ಕಳೆದ ಫೆಬ್ರವರಿಯಲ್ಲಿ ತಾವು ಚಲಾಯಿಸುತ್ತಿದ್ದ MiG- 21 ವಿಮಾನವನ್ನು ಕ್ಷಿಪಣಿ ಮೂಲಕ ಶತ್ರುಗಳು ಹೊಡೆದುರುಳಿಸುವ ಕೆಲವೇ ಕ್ಷಣಗಳ ಮುನ್ನ ಪಾಕಿಸ್ತಾನದ F- 16 ಯುದ್ಧ ವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ್ದರು. ವಿಮಾನದಿಂದ ಹೊರಬಿದ್ದ ಅಭಿನಂದನ್ ಪಾಕಿಸ್ತಾನ ಗಡಿ ಪ್ರವೇಶಿಸಿದ್ದರು. ಆಗ ಅವರನ್ನು ಪಾಕ್ ವಶಕ್ಕೆ ಪಡೆದಿತ್ತು.

60 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದರು

60 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದರು

60 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದ ಅವರು, ಆ ನಂತರ ಬಿಡುಗಡೆ ಆಗಿದ್ದರು. ಮಾರ್ಚ್ ನಲ್ಲಿ ಬಿಡುಗಡೆ ಆಗಿದ್ದ ಅಭಿನಂದನ್ ಗಾಯಗಳಿಂದ ಚೇತರಿಸಿಕೊಂಡು, ಈಚೆಗಷ್ಟೇ ವಿಮಾನ ಹಾರಾಟಕ್ಕೆ ತಮ್ಮ ಕ್ಷಮತೆ ಸಾಬೀತು ಮಾಡಿದ್ದರು. ಆರು ತಿಂಗಳ ಹಿಂದೆ ಇದೇ ಪಠಾಣ್ ಕೋಟ್ ವಾಯು ನೆಲೆಯಿಂದ ಯುದ್ಧ ವಿಮಾನದಲ್ಲಿ ತೆರಳಿದ್ದರು ಅಭಿನಂದನ್.

ಭಾರತದ ಯುದ್ಧ ವಿಮಾನಗಳು ಹಳೆಯವು

ಭಾರತದ ಯುದ್ಧ ವಿಮಾನಗಳು ಹಳೆಯವು

ಈ ಪಠಾಣ್ ಕೋಟ್ ವಾಯು ನೆಲೆ ಭಾರತದ ಮುಂಚೂಣಿ ಪೋಸ್ಟ್. ಜತೆಗೆ ಭಾರತ ವಾಯು ಸೇನೆಯ 26 ಸ್ಕ್ವಾಡ್ರನ್ ಅಧಿಕಾರಿಗಳು ಇರುವುದು ಇಲ್ಲೇ. F- 16 ಹಾಗೂ MiG- 21 ಯುದ್ಧ ವಿಮಾನಗಳು ಬಳಸಿ ಭಾರತ ಹಾಗೂ ಪಾಕಿಸ್ತಾನದ ಕಾದಾಟ ಏನು ನಡೆದಿತ್ತು, ಆ ನಂತರ ಭಾರತದ ಬಳಿ ಇರುವ ಯುದ್ಧ ವಿಮಾನಗಳು ಎಷ್ಟು ಹಳೆಯವು ಎಂಬ ಚರ್ಚೆ ಹುಟ್ಟು ಹಾಕಿತ್ತು.

ನಲವತ್ನಾಲ್ಕು ವರ್ಷದ ಹಳೆಯ ವಿಮಾನ

ನಲವತ್ನಾಲ್ಕು ವರ್ಷದ ಹಳೆಯ ವಿಮಾನ

ಜತೆಗೆ ಯುದ್ಧವಿಮಾನಗಳ ಅಪ್ ಗ್ರೇಡ್ ಗೆ ಒತ್ತಡ ಹೆಚ್ಚಾಯಿತು. ಕಳೆದ ತಿಂಗಳು ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ್ದ ವಾಯು ಸೇನೆ ಮುಖ್ಯಸ್ಥ ಧನೋವಾ, ನಾವು ಈಗಲೂ ನಲವತ್ನಾಲ್ಕು ವರ್ಷದಷ್ಟು ಹಳೆಯ MiG- 21 ಬಳಸುತ್ತಿದ್ದೇವೆ, ಯಾವ ಕಾರು ಚಾಲಕರು ಸಹ ಇಷ್ಟು ಹಳೆಯದಾದ ತಮ್ಮ ವಾಹನವನ್ನು ಚಲಾಯಿಸಲ್ಲ ಎಂದಿದ್ದರು.

ಸದ್ಯದಲ್ಲೇ ಹಾರಾಟ ನಿಲ್ಲಿಸಲಿವೆ MiG- 21 ಯುದ್ಧ ವಿಮಾನಗಳು

ಸದ್ಯದಲ್ಲೇ ಹಾರಾಟ ನಿಲ್ಲಿಸಲಿವೆ MiG- 21 ಯುದ್ಧ ವಿಮಾನಗಳು

ಭಾರತದ ವಾಯು ಸೇನೆಯಲ್ಲಿ 5 ಸ್ಕ್ವಾಡ್ರನ್ ರಷ್ಯಾ ನಿರ್ಮಿತ MiG- 21 ಯುದ್ಧ ವಿಮಾನಗಳಿವೆ. ಸದ್ಯದಲ್ಲೇ ಇವು ಐದರ ಹಾರಾಟ ನಿಲ್ಲಿಸಲಾಗುತ್ತದೆ. ಇವುಗಳಲ್ಲಿ 4 ಸ್ಕ್ವಾಡ್ರನ್ ಗಳನ್ನು MiG- 21 ಬೈಸನ್ ಯುದ್ಧ ವಿಮಾನಗಳಾಗಿ ಉನ್ನತೀಕರಿಸಲಾಯಿತು. 26 ಸ್ಕ್ವಾಡ್ರನ್ ವಿಮಾನಗಳ ಉನ್ನತೀಕರಿಸಿಲ್ಲ. ಈ ವರ್ಷದ ಕೊನೆಗೆ ಅವುಗಳ ಬಳಕೆ ನಿಲ್ಲಲಿದೆ. ಭಾರತೀಯ ವಾಯು ಸೇನೆಗೆ ಕನಿಷ್ಠ 42 ಸ್ಕ್ವಾಡ್ರನ್ ಯುದ್ಧ ವಿಮಾನಗಳು ಅಗತ್ಯ ಆದರೆ ಇರುವುದು ಕೇವಲ 30 ಸ್ಕ್ವಾಡ್ರನ್. ಯುದ್ಧ ವಿಮಾನಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗದಿರಲಿ ಎಂಬ ಕಾರಣಕ್ಕೆ ಭಾರತೀಯ ವಾಯು ಸೇನೆಯಿಂದ MiG- 21 ಉನ್ನತೀಕರಿಸಲಾಯಿತು.

English summary
India Air Force Wing Commander Abhinandan Varthaman finally returned to the cockpit of the MiG-21 fighter jet on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X