Get Updates
Get notified of breaking news, exclusive insights, and must-see stories!

WhatsApp: ಭಾರತದಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆಯೇ? ಐಟಿ ಸಚಿವರು ಹೇಳಿದ್ದೇನು?

ನವದೆಹಲಿ, ಜುಲೈ. 30: ಮೊಬೈಲ್ ಪೋನ್ ತೆಗೆದುಕೊಂಡರೆ ಮೊದಲು ಡೌನ್‌ಲೋಡ್ ಮಾಡಿಕೊಳ್ಳುವುದು ವಾಟ್ಸಾಪ್ ಆಪ್. ಈ ಆಪ್ ಈಗ ಜೀವನದ ಒಂದು ಭಾಗವೇ ಆಗಿದೆ. ಹೀಗಿರುವಾಗ ದೇಶದಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ ಎಂಬ ಪುಕಾರು ಹಬ್ಬಿದೆ. ಹೀಗಾಗಿ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ವಾಟ್ಸಾಪ್ ಮತ್ತು ಅದರ ಮಾತೃ ಸಂಸ್ಥೆ ಮೆಟಾ ಭಾರತದಲ್ಲಿ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆಗಳ ಬಗ್ಗೆ ಭಾರತ ಸರ್ಕಾರಕ್ಕೆ ತಿಳಿಸಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಇದನ್ನು ಸ್ಪಷ್ಟಪಡಿಸಿದ್ದಾರೆ.

Will WhatsApp shut down in India IT Minister Ashwini Vaishnaw explains

ಬಳಕೆದಾರರ ವಿವರಗಳನ್ನು ಹಂಚಿಕೊಳ್ಳಲು ಸರ್ಕಾರ ನಿರ್ದೇಶನ ನೀಡಿರುವ ಕಾರಣ ವಾಟ್ಸಾಪ್ ಭಾರತದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲು ಯೋಜಿಸುತ್ತಿದೆಯೇ ಎಂಬ ಕಾಂಗ್ರೆಸ್ ಸದಸ್ಯ ವಿವೇಕ್ ಟಂಖಾ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟೀಕರಣ ನೀಡಿದ್ದಾರೆ.

ವಿವೇಕ್ ಟಂಖಾ ಅವರ ಪ್ರಶ್ನೆಯು ವಾಟ್ಸಾಪ್ ನಿಂದ ಹಿಂದಿನ ಹೇಳಿಕೆಗಳನ್ನು ಅನುಸರಿಸಿ ಹೊಸ ಐಟಿ ನಿಯಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ವರ್ಷದ ಆರಂಭದಲ್ಲಿ, ಸಂದೇಶಗಳಲ್ಲಿನ ಎನ್‌ಕ್ರಿಪ್ಶನ್ ಅನ್ನು ಮುರಿಯಲು ಒತ್ತಾಯಿಸಿದರೆ ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಾಗಿ ವಾಟ್ಸಾಪ್ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.

Will WhatsApp shut down in India IT Minister Ashwini Vaishnaw explains

ವಾಟ್ಸಾಪ್‌ನ ವಕೀಲ ತೇಜಸ್ ಕರಿಯಾ, ಎನ್‌ಕ್ರಿಪ್ಶನ್ ಅನ್ನು ಮುರಿಯುವುದು ಬಳಕೆದಾರರ ಗೌಪ್ಯತೆಯನ್ನು ಹಾಳುಮಾಡುತ್ತದೆ. ಆಪ್ ಮೇಲಿನ ನಂಬಿಕೆಗೆ ಧಕ್ಕೆ ತರುತ್ತದೆ ಮತ್ತು ಲಕ್ಷಾಂತರ ಸಂದೇಶಗಳನ್ನು ದೀರ್ಘಾವಧಿಯವರೆಗೆ ಡೀಕ್ರಿಪ್ಶನ್ ಮಾಡಬೇಕಾಗುತ್ತದೆ ಎಂಬ ಖಚಿತತೆಯಿಲ್ಲದೆ ಸಂಗ್ರಹಿಸುವ ಅವಶ್ಯಕತೆಯಿದೆ ಎಂಬ ಮಾಹಿತಿಯನ್ನು ಹೈಲೈಟ್ ಮಾಡಿದ್ದರು.

ವಾಟ್ಸಾಪ್ ಮತ್ತು ಮೆಟಾ ತಿದ್ದುಪಡಿ ಮಾಡಲಾದ ಐಟಿ ನಿಯಮಗಳನ್ನು ಪ್ರಶ್ನಿಸಿದ್ದು, ಅವು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತವೆ ಮತ್ತು ಅಸಾಂವಿಧಾನಿಕ ಎಂದು ವಾದಿಸಿವೆ. ಫೆಬ್ರವರಿ 2021 ರಲ್ಲಿ ಪರಿಚಯಿಸಲಾದ ಈ ಹೊಸ ನಿಯಮಗಳು, ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆಯನ್ನು ಒಳಗೊಳ್ಳುತ್ತವೆ. ಭಾರತೀಯ ಸರ್ಕಾರವು ಈ ನಿಯಮಗಳನ್ನು ಸಮರ್ಥಿಸಿಕೊಂಡಿದೆ.

ಭಾರತದಲ್ಲಿ ವಾಟ್ಸಾಪ್ ಸ್ಥಗಿತಗೊಂಡರೆ ಏನಾಗುತ್ತದೆ?

ವಾಟ್ಸಾಪ್ ಭಾರತವನ್ನು ತೊರೆದರೆ, ಕಂಪನಿ ಮತ್ತು ಅದರ 400 ಮಿಲಿಯನ್‌ಗಿಂತಲೂ ಹೆಚ್ಚು ಜನರ ಬಳಕೆದಾರರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಭಾರತದಲ್ಲಿ ಅನೇಕ ವ್ಯಕ್ತಿಗಳು ಮತ್ತು ವ್ಯವಹಾರಗಳು ಸಂವಹನಕ್ಕಾಗಿ ವಾಟ್ಸಾಪ್ ಅನ್ನು ಅವಲಂಬಿಸಿವೆ. ಹೀಗಾಗಿ ವಾಟ್ಸಾಪ್ ಸ್ಥಗಿತಗೊಂಡರೆ ಈ ಸಂವಹನ ಮಾರ್ಗಗಳು ಸ್ಥಗಿತಗೊಂಡು ಆರ್ಥಿಕತೆಗೆ ಹಾನಿಯುಂಟುಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+