ಸುಷ್ಮಾ ಸ್ವರಾಜ್ ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತೇನೆ: ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ, ಜೂನ್ 1: ಅಚ್ಚರಿಯ ಆಯ್ಕೆಯಲ್ಲಿ ನೂತನ ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಿರುವ ಎಸ್ ಜೈಶಂಕರ್, ಹಿಂದಿನ ಸಚಿವಾಲಯದ ಸುಷ್ಮಾ ಸ್ವರಾಜ್ ನಡೆದ ದಾರಿಯಲ್ಲೇ ನಡೆಯುತ್ತೇನೆ ಎಂದಿದ್ದಾರೆ.

ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಮೊದಲ ಟ್ವೀಟ್ ನಲ್ಲಿ ಜೈಶಂಕರ್, ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಸುಷ್ಮಾ ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ನನಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

1977ರ ಐಎಫ್ಎಸ್ ಅಧಿಕಾರಿಯಾಗಿರುವ ಜೈಶಂಕರ್, 2015-2018ರ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಸಚಿವಾಲಯದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.

Will follow Sushma Swarajs footsteps: S Jaishankar in first tweet as External Affairs Minister

64ವರ್ಷದ ಜೈಶಂಕರ್ ಅವರನ್ನು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಸ್ವಾಗತಿಸಿದರು. ವಿಜಯ್ ಗೋಖಲೆ, ಕಳೆದ ಜನವರಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಕೆ ಸುಬ್ರಮಣ್ಯಂ ಅವರ ಪುತ್ರರಾಗಿರುವ ಜೈಶಂಕರ್, ಟಾಟಾ ಸಮೂಹ ಸಂಸ್ಥೆಯ ಜಾಗತಿಕ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು.

ಪ್ರಧಾನಿ ಮೋದಿ ಮತ್ತು ರಕ್ಷಣಾ ಇಲಾಖೆಯ ಸಲಹೆಗಾರ ಅಜಿತ್ ಧೋವಲ್ ಅವರ ಅತ್ಯಂತ ಆಪ್ತರಲ್ಲಿ ಜೈಶಂಕರ್ ಕೂಡಾ ಒಬ್ಬರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+