ಉಪ ರಾಷ್ಟ್ರಪತಿಯಾದ ಮೇಲೂ ಜನರೊಂದಿಗೆ ಬೆರೆಯುವೆ: ವೆಂಕಯ್ಯ

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 10: ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ತಾವು ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸುವ ಪರಿಪಾಠ ಮುಂದುವರಿಸುವುದಾಗಿ ಭಾರತದ ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ನೂತನ ಉಪರಾಷ್ಟ್ರಪತಿ ನಾಯ್ಡು ಅವರಿಗೆ ಬಿಎಸ್ ವೈ ಶುಭಹಾರೈಕೆ

ಇದೇ ತಿಂಗಳ 11ರಂದು ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಬುಧವಾರ ರಾತ್ರಿ ವೆಂಕಯ್ಯ ನಾಯ್ಡು ಅವರು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು.

Will continue to meet people, says Venkaiah Naidu

ಈ ಸಂದರ್ಭದಲ್ಲಿ ಮಾತನಾಡಿದ ಅವರು,'' ಸಕ್ರಿಯ ರಾಜಕಾರಣಿಯಾಗಿ ಇದು ನನ್ನ ಕೊನೆಯ ಬಹಿರಂಗ ಸಾರ್ವಜನಿಕ ಸಮಾವೇಶವಾಗಿರಬಹುದು. ಆದರೆ, ಉಪರಾಷ್ಟ್ರಪತಿಯಾದ ನಂತರವೂ ನಾನು ಜನರೊಂದಿಗೆ ಮುಖಾಮುಖಿಯಾಗಲು ಬಯಸುತ್ತೇನೆ. ಉಪರಾಷ್ಟ್ರಪತಿಗೆ ನೀಡುವ 7 ಎಕರೆ ಬಂಗಲೆಯಲ್ಲಿ ಹಾಯಾಗಿ ಕುಳಿತುಕೊಳ್ಳಲಾರೆ. ಮಾಧ್ಯಮಗಳೊಂದಿಗೆ, ಜನರೊಂದಿಗೆ ಆಗಾಗ ಮುಖಾಮುಖಿಯಾಗುತ್ತೇನೆ'' ಎಂದು ಅವರು ತಿಳಿಸಿದರು.

Venkaiah Naidu says, Farmers loan waiver has become a fashion now | Oneindia Kannada

ತಮ್ಮ ಮಾತುಗಳನ್ನು ಮುಂದುವರಿಸಿ, '' ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ನಾನೆಂದಿಗೂ ಜನರ ಸಮಸ್ಯೆ ಆಲಿಸುವುದರಿಂದ ವಿಮುಖನಾಗಿಲ್ಲ. ಆಂಧ್ರಪ್ರದೇಶದ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿದ್ದೇನೆ. ಜನರ ಸಮಸ್ಯೆಯನ್ನು ಆಲಿಸಿದ್ದೇನೆ. ಜನರನ್ನು, ಮಾಧ್ಯಮಗಳನ್ನು ಭೇಟಿ ಮಾಡುವ ಇದೇ ಪರಿಪಾಠವನ್ನು ಉಪರಾಷ್ಟ್ರಪತಿಯಾದ ನಂತರವೂ ಪಾಲಿಸುತ್ತೇನೆ'' ಎಂದು ಅವರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
“Meeting people, touring areas, that has been my main activity for the 50 years of my life in politics. Even after I become Vice-President in two days, I want to continue the life I am used to,” says Venkaiah Naidu to media persons before becoming Vice President.
Please Wait while comments are loading...