ರೋಹಿತ್ ವೇಮುಲ ಪರ ಕನ್ಹಯ್ಯ ಕುಮಾರ್ ಬ್ಯಾಟಿಂಗ್

Subscribe to Oneindia Kannada

ಹೈದ್ರಾಬಾದ್, ಮಾರ್ಚ್, 23: ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಇದೀಗ ಆತ್ಮಹತ್ಯೆ ಮಾಡಿಕೊಂಡ ಹೈದ್ರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮಲ ಪರವಾಗಿ ಹೋರಾಟ ಆರಂಭಿಸಿದ್ದಾರೆ

ಕೇಂದ್ರ ಸರ್ಕಾರ ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ತರಬೇಕು ಎಂದು ಬುಧವಾರ ಹೇಳಿಕೆ ನೀಡಿದ್ದಾರೆ. ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿದ ಕುಮಾರ್, ಇಂಥ ಆತ್ಮಹತ್ಯೆ ಪ್ರಕರಣ ತಡೆಯಲು ಕೇಂದ್ರ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು ಎಂದು ಒತ್ತಾಯ ಮಾಡಿದರು.[ರಾಹುಲ್ - ಕನ್ಹಯ್ಯಾ 1 ಗಂಟೆ ಮಾತುಕತೆ: ಏನಿರಬಹುದು ವಿಷಯ?]

ಓರ್ವ ಪ್ರೊಫೆಸರ್ ಹಾಗೂ ಮೂವರು ಜೆಎನ್ ಯು ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಹೈದರಾಬಾದ್ ಗೆ ಬಂದಿಳಿದ ಕನ್ಹಯ್ಯ ರೋಹಿತ್ ವೇಮುಲಾ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

ಜೆಎನ್ ಯು ಕ್ಯಾಂಪಸ್ ನಲ್ಲಿ ದೇಶದ್ರೋಹದ ಘೋಷಣೆ ಕೂಗಿದ ಆರೋಪದಡಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕನ್ಹಯ್ಯ ಕುಮಾರ್ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ

ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ

ಷಹೈದ್ರಾಬಾದ್ ವಿವಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇನೆ ಎಂದು ಹೇಳಿದರು.

ಹೋರಾಟ ನಿಲ್ಲುವುದಿಲ್ಲ

ಹೋರಾಟ ನಿಲ್ಲುವುದಿಲ್ಲ

ವ್ಯವಸ್ಥೆಯ ಲೋಪಗಳ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ರೋಹಿತ್ ವೇಮುಲ ಅವರ ಕನಸನ್ನು ನನಸು ಮಾಡಲು ಶ್ರಮಿಸಬೇಕಿದೆ ಎಂದು ಹೇಳಿದರು.

ಕೇಂದ್ರದ ಮೇಲೆ ವಾಗ್ದಾಳಿ

ಕೇಂದ್ರದ ಮೇಲೆ ವಾಗ್ದಾಳಿ

ಜೈಲಿನಿಂದ ಬಿಡುಗಡೆಯಾಗಿ ಬಂದ ಕನ್ಹಯ್ಯಾ ಕುಮಾರ್ ಮೋದಿ ಸರ್ಕಾರದ ವಿರುದ್ಧ ದೆಹಲಿ ಜೆಎನ್ ಯು ಕ್ಯಾಂಪಸ್ ನಲ್ಲಿ ವಾಗ್ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರ ನಮ್ಮ ಒಗ್ಗಟ್ಟನ್ನು ಒಡೆಯಲು ಯತ್ನಿಸುತ್ತಿಸದೆ. ದೇಶಕ್ಕೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು.

ಕುಟುಂಬಕ್ಕೆ ಸಾಂತ್ವನ

ಕುಟುಂಬಕ್ಕೆ ಸಾಂತ್ವನ

ವೇಮುಲ ತಾಯಿ ರಾಧಿಕಾ ಮತ್ತು ಸಹೋದರ ರಾಜಾ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಕನ್ಹಯ್ಯಾ ದೇಶದಲ್ಲಿ ಮುಂದೆ ಇಂಥ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.

 ಸ್ಮೃತಿ ಇರಾನಿ ರಾಜೀನಾಮೆಗೆ ಒತ್ತಾಯ

ಸ್ಮೃತಿ ಇರಾನಿ ರಾಜೀನಾಮೆಗೆ ಒತ್ತಾಯ

ಹೈದ್ರಾಬಾದ್ ವಿವಿಯ ವೇಮುಲ ಆತ್ಮಹತ್ಯೆ ಮಾಡಿಕೊಂಡಾಗ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯ ಮಾಡಿದ್ದವು.

 ಸ್ಮೃತಿ ಇರಾನಿ ಭಾಷಣ

ಸ್ಮೃತಿ ಇರಾನಿ ಭಾಷಣ

ಸಂಸತ್ ನಲ್ಲಿ ವೇಮುಲ ಪ್ರಕರಣದ ಬಗ್ಗೆ ಮಾತನಾಡಿದ್ದ ಇರಾನಿ, ಸಾವಿನ ಮುಂಚೆ ಮತ್ತು ನಂತರದ ಎಲ್ಲ ದಾಖಲೆಗಳನ್ನು ಮುಂದಿಟ್ಟು ಖಡಕ್ ಉತ್ತರ ನೀಡಿದ್ದರು.

ಬಿಗಿ ಭದ್ರತೆ

ಬಿಗಿ ಭದ್ರತೆ

ಕನ್ಹಯ್ಯಾ ಕುಮಾರ್ ಹೈದ್ರಾಬಾದ್ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಪೊಲೀಸ್ ಬಂದೋಬಸ್ತ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JNU students' union president Kanhaiya Kumar today said the Joint Action Committee for Social Justice of Hyderabad Central University will continue with its struggle until the Centre brings out 'Rohith Act'. Kanhaiya, who landed at the Rajiv Gandhi International Airport here at around 11 AM, also said that he will participate and address a public meeting organised by the JAC on the HCU campus this evening, "if the police permits".
Please Wait while comments are loading...