ಹಿಜಾಬ್ ಮುಟ್ಟಲು ಬಂದವರ ಕೈ ಕತ್ತರಿಸಬೇಕು: ಎಸ್‌ಪಿ ನಾಯಕಿ
ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ಮತ್ತು ಕೇಶರಿ ಶಾಲು ವಿವಾದ ಇದೀಗ ದೇಶದ ವಿವಿಧೆಡೆ ತಲುಪಿದೆ.
ಮುಸ್ಲಿಮರ ಹಿಜಾಬ್ ಮುಟ್ಟಲು ಬಂದವರ ಕೈ ಕತ್ತರಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಖಾನುಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾರಾದರೂ ಸರಿ, ಹಿಜಾಬ್ನ್ನು ಮುಟ್ಟಲು ಬಂದರೆ ಅವರ ಕೈ ಕತ್ತರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅಂದಹಾಗೇ, ಈ ರೀತಿ ಮಾತನಾಡಿದ್ದು ರುಬೀನಾ ಖಾನಮ್. ಮುಸ್ಲಿಮರ ಹಿಜಾಬ್ ತಂಟೆಗೆ ಬಂದರೆ ನಾವೂ ಸುಮ್ಮನಿರುವುದಿಲ್ಲ ಎಂದು ಖಾರವಾಗಿ ಹೇಳಿಕೆ ನೀಡಿದ್ದಾರೆ.

ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಉರ್ದುಸ್ತಾನ್ ಪರಿಕಲ್ಪನೆಗೆ ಉತ್ತೇಜನ ನೀಡಲು, ಈ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಹಿಜಾಬ್ ಜನಾಭಿಪ್ರಾಯ ಚಳವಳಿ ಪ್ರಾರಂಭಿಸಲು ಮುಸ್ಲಿಮರಿಗೆ ಕರೆ ನೀಡಿದೆ ಎಂದೂ ಹೇಳಲಾಗಿದೆ. ಅಷ್ಟೇ ಅಲ್ಲ, ಎಸ್ಎಫ್ಜೆ ಮುಖ್ಯಸ್ಥ ಈಗಾಗಲೇ ವಿಡಿಯೋ ಸಂದೇಶದ ಮೂಲಕ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಿದ್ದಾನೆ ಎಂದೂ ತಿಳಿಸಿಲಾಗಿದೆ.
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಗಲಾಟೆ ಮಿತಿಮೀರಿದೆ. ಫೆ.16ರವರೆಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆ ನಡೆಸುವಂತಿಲ್ಲ. ಧಾರ್ಮಿಕ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಕೂಡ ತೀರ್ಪು ನೀಡಿದೆ. ಇಷ್ಟಾದರೂ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಿಜಾಬ್ ವಿವಾದ ಸುದ್ದಿಯಾಗುತ್ತಿದ್ದು, ಪಾಕಿಸ್ತಾನ ಕೂಡ ಇದಕ್ಕೆ ಸಂಬಂಧಪಟ್ಟ ಹೇಳಿಕೆ ನೀಡಿದೆ.
ಈ ಮಧ್ಯೆ ಹಿಜಾಬ್ ವಿವಾದವನ್ನು ಇನ್ನಷ್ಟು ಹೆಚ್ಚಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪ್ರಯತ್ನ ಮಾಡುತ್ತಿದೆ. ಅದೂ ಕೂಡ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ ಫಾರ್ ಜಸ್ಟೀಸ್ ಮೂಲಕ ಜಿಜಾಬ್ ವಿವಾದಕ್ಕೆ ಉತ್ತೇಜನ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಮಾಹಿತಿ ನೀಡಿವೆ ಎಂಬುದು ಮೂಲಗಳಿಂದ ತಿಳಿದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಭಾರತದಲ್ಲಿರುವ ಕೆಲವರು ದೇಶ ವಿರೋಧಿಗಳು ಸಿಖ್ ಫಾರ್ ಜಸ್ಟೀಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುರನ್ನು ಸೇರಿಕೊಂಡು ಇಲ್ಲಿ ಹಿಜಾಬ್ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬಹುದು. ಈ ಮೂಲಕ ಇಲ್ಲಿನ ಪರ-ವಿರೋಧ ವಿವಾದವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದೂ ದೇಶದ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ.
ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತು ತೀವ್ರ ವಿವಾದದ ಹಿನ್ನೆಲೆಯಲ್ಲಿ ಮಾತನಾಡಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಹಿಜಾಬ್ ಇಸ್ಲಾಂನ ಆಚರಣೆಯಲ್ಲಿ ಅಂತರ್ಗತವಾಗಿಲ್ಲ ಎಂದು ಹೇಳಿದ್ದಾರೆ.
ಸಿಖ್ಖರಿಗೆ ಟರ್ಬನ್ ರೀತಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಅನಿವಾರ್ಯವಲ್ಲ. ಕೆಲವು ಕಾಲೇಜುಗಳು ಮತ್ತು ಶಾಲೆಗಳಲ್ಲಿ ಸಿಖ್ಖರಿಗೆ ಟರ್ಬನ್ ಧರಿಸಲು ಅವಕಾಶವಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ ಎಂಬ ವಾದವು ಅಸಂಬದ್ಧ ಎಂದು ಹೇಳಿದರು.
"ಸಿಖ್ ಧರ್ಮದಲ್ಲಿ, ಪೇಟವನ್ನು ಧರ್ಮಕ್ಕೆ ಅತ್ಯಗತ್ಯವೆಂದು ಪರಿಗಣಿಸಲಾಗಿದೆ ಮತ್ತು ಸ್ವೀಕರಿಸಲಾಗಿದೆ. ಮತ್ತೊಂದೆಡೆ ಹಿಜಾಬ್ ಕುರಿತಾಗಿ ಕುರಾನ್‌ನಲ್ಲಿ ಯಾವುದೇ ಉಲ್ಲೇಖವನ್ನು ಕಾಣುವುದಿಲ್ಲ.
ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಯುವ ಮುಸ್ಲಿಂ ಮಹಿಳೆಯರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಮುಸ್ಲಿಂ ಮಹಿಳೆಯರನ್ನು ಅಂಧಕಾರ ಯುಗಕ್ಕೆ ತಳ್ಳಲು ಬಯಸುತ್ತವೆ. ಹೊರಗಿನವರ ಪ್ರಚೋದನೆಗೆ ಒಳಗಾಗಬೇಡಿ, ಓದಿನ ಕಡೆ ಗಮನ ಹರಿಸಿ ಎಂದು ಮಹಮದ್ ಖಾನ್ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ್ದಾರೆ.












Click it and Unblock the Notifications