ಸುಶೀಲ್ ಮೋದಿ ಪುತ್ರನ ಮದುವೆಗೆ ಹೋಗಿ ಮೋದಿಗೆ ಹೊಡೆದುಬರುತ್ತೇನೆ!
Recommended Video

ಪಾಟ್ನಾ, ನವೆಂಬರ್ 23: ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಪುತ್ರನ ಮದುವೆಗೆ ತೆರಳಿ ನಾನವರಿಗೆ ಹೊಡೆದು ಬರುತ್ತೇನೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಬುಸುಗುಟ್ಟಿದ್ದಾರೆ!
ಸುಶೀಲ್ ಕುಮಾರ್ ಮೋದಿ ತಮ್ಮ ಮಗ ಉತ್ಕರ್ಷ್ ಮದುವೆಗೆ ನನಗೆ ಫೋನ್ ನಲ್ಲಿ ಆಮಂತ್ರಣ ನೀಡಿದ್ದಾರೆ. ನನಗೆ ಗೊತ್ತು ಅವರು ನನ್ನನ್ನು ಕರೆದಿದ್ದು ನನಗೆ ಅವಮಾನ ಮಾಡಲಿಕ್ಕೇ ಅಂತ. ಆದರೆ ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ. ಅವರು ನನಗೆ ಅವಮಾನ ಮಾಡುವ ಮೊದಲೇ ನಾನವರಿಗೆ ಹೊಡೆದು, ಅವರ ಮಗನ ಮದುವೆ ಶಾಂತಿಯುತವಾಗಿ ಆಗದಂತೆ ಮಾಡುತ್ತೇನೆ ಎಂದು ಔರಂಹಾಬಾದಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಬೆದರಿಕೆ ಒಡ್ಡಿದ್ದಾರೆ!

ಈ ಕುರಿತು ಪ್ರತಿಕ್ರಿಯೆ ನೀಡಿದ ಸುಶೀಲ್ ಕುಮಾರ್ ಮೋದಿ, 'ತೇಜ್ ಪ್ರತಾಪ್ ಅವರಿಗೆ ನಾನೇ ಅವರಿಗೆ ಅಧಿಕಾರ ಸಿಗದಂತೆ ಮಾಡಿದ್ದೇನೆ ಎಂಬ ಭಾವನೆ ಇದೆ. ಅದಕ್ಕೆಂದೇ ಹೀಗೆಲ್ಲ ಮಾತನಾಡುತ್ತಾರೆ. ಇಂಥ ಪದಗಳನ್ನೆಲ್ಲ ಉಪಯೋಗಿಸಿ ಮಾತನಾಡುವುದು ತಪ್ಪು ಅಂತ ಅವರ ತಂದೆ, ಪುತ್ರನಿಗೆ ಬುದ್ಧಿ ಹೇಳಲಿ. ಲಾಲೂ ಯಾದವ್ ಮತ್ತವರ ಪತ್ನಿಯನ್ನು ನಾನು ಮದುವೆಗೆ ಕರೆದಿದ್ದೇನೆ. ಅವರು ಮದುವೆಗೆ ಬರಬೇಕು ಅನ್ನೋ ಅಪೇಕ್ಷೆ ನನ್ನದು' ಎಂದಿದ್ದಾರೆ.












Click it and Unblock the Notifications