ಬೋರ್ಡಿಂಗ್ ಶಾಲೆಗೆ ಸೇರಿದ ಮಗಳ ಜೊತೆ 15 ದಿನ ಮಾತನಾಡಲ್ಲ ಎಂದ ಉದ್ಯಮಿ: ಅಪ್ಪನ ಈ ನಿರ್ಧಾರದ ಹಿಂದಿದೆ ದೊಡ್ಡ ಕಾರಣ

ಮಕ್ಕಳಿಗೆ ಪ್ರೀತಿ ಕೊಟ್ಟು ಬೆಳೆಸುವುದು ಎಷ್ಟು ಮುಖ್ಯವೋ, ಹಾಗೆಯೇ ಅವರನ್ನ ಅವರ ಇಷ್ಟದ ಹಾಗೆ ಸ್ವತಂತ್ರವಾಗಿ ಬದುಕಲು ಬಿಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಆದರೆ, ಹೆತ್ತ ಮಕ್ಕಳನ್ನ ದೂರದ ಹಾಸ್ಟೆಲ್‌ಗೆ ಸೇರಿಸಿದಾಗ ಪೋಷಕರ ಮನಸ್ಸು ತಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ನೋಯ್ಡಾ ಮೂಲದ ಶೈಕ್ಷಣಿಕ ಸಲಹಾ ಸಂಸ್ಥೆ ಕಾಲೇಜ್ ವಿದ್ಯಾ ಸಂಸ್ಥಾಪಕ ಮತ್ತು ಸಿಒಒ ರೋಹಿತ್ ಗುಪ್ತಾ ಅವರು ತೆಗೆದುಕೊಂಡಿರುವ ಒಂದು ಕಠಿಣ ನಿರ್ಧಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹೌದು, ಇವರು ತಮ್ಮ ಬೋರ್ಡಿಂಗ್ ಶಾಲೆಗೆ ಸೇರಿಸಿದ ಮಗಳ ಜೊತೆ ಮುಂದಿನ 15 ದಿನಗಳ ಕಾಲ ಯಾವುದೇ ಕಾರಣಕ್ಕೂ ಫೋನ್‌ನಲ್ಲಿ ಮಾತನಾಡುವುದಿಲ್ಲ ಎಂದು ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

Noida Founder

ರೋಹಿತ್ ಗುಪ್ತಾ ಅವರು ಇತ್ತೀಚೆಗಷ್ಟೇ ತಮ್ಮ ಮಗಳನ್ನ ಬೋರ್ಡಿಂಗ್ ಶಾಲೆಗೆ ಬಿಟ್ಟು ಬಂದಿದ್ದಾರೆ. ಶಾಲೆಗೆ ಬಿಡುವ ಮುನ್ನ ಮಗಳನ್ನ ಹೊಸ ಸ್ಪೈಡರ್ ಮ್ಯಾನ್ ಸಿನಿಮಾಗೂ ಕರೆದುಕೊಂಡು ಹೋಗಿದ್ದರು. ಆದರೆ, ಮಗಳನ್ನ ಶಾಲೆಯ ಹಾಸ್ಟೆಲ್‌ಗೆ ಬಿಟ್ಟು ಮನೆಗೆ ಹಿಂತಿರುಗಿದ ನಂತರ, ಅವರು ಕುಟುಂಬದವರಿಗೆ ಒಂದು ಕಠಿಣ ನಿಯಮವನ್ನ ಹಾಕಿದ್ದಾರೆ. "ಮುಂದಿನ ಹದಿನೈದು ದಿನಗಳ ಕಾಲ ನಾನು ಮಗಳಿಗೆ ಫೋನ್ ಮಾಡುವುದಿಲ್ಲ" ಎಂದು ಖಡಕ್ ಆಗಿ ಹೇಳಿದರು. ಈ ನಿರ್ಧಾರಕ್ಕೆ ಮನೆಯಲ್ಲಿ ಎಲ್ಲರೂ ವಿರೋಧ ವ್ಯಕ್ತಪಡಿಸಿದರು. ಆದರೆ ರೋಹಿತ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ರೋಹಿತ್ ಗುಪ್ತಾ ವೈರಲ್ ಪೋಸ್ಟ್: ಈ ನಿರ್ಧಾರದ ಹಿಂದಿನ ಅಸಲಿ ಕಾರಣ

ತಮ್ಮ ಈ ನಿರ್ಧಾರದ ಹಿಂದಿರುವ ಕಾರಣವನ್ನ ರೋಹಿತ್ ಗುಪ್ತಾ ಲಿಂಕ್ಡ್‌ಇನ್‌ನಲ್ಲಿ ವಿವರಿಸಿದ್ದಾರೆ. "ನನ್ನನ್ನ ತಪ್ಪಾಗಿ ಅರ್ಥಮಾಡಿಕೊಳ್ಳುವ ಮೊದಲು ನನ್ನ ಮಾತನ್ನು ಪೂರ್ತಿ ಕೇಳಿ. ನಾನೂ ಕೂಡ ಬೋರ್ಡಿಂಗ್ ಶಾಲೆಯಲ್ಲೇ ಓದಿ ಬೆಳೆದವನು. ಆ ಅನುಭವ ನನಗಿದೆ. ಮನೆಯಿಂದ ಹೋಗುವ ಪ್ರತಿಯೊಂದು ಫೋನ್ ಕಾಲ್ ಕೂಡ ಮಗಳನ್ನು ಮಾನಸಿಕವಾಗಿ ಒಂದು ಹೆಜ್ಜೆ ಹಿಂದಕ್ಕೆ ಎಳೆಯುತ್ತದೆ. ಅವಳು ಅಲ್ಲಿ ತನ್ನದೇ ಆದ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕು, ಹೊಸ ದಿನಚರಿಯನ್ನ ರೂಪಿಸಿಕೊಳ್ಳಬೇಕು ಮತ್ತು ತನ್ನದೇ ಆದ ಪುಟ್ಟ ಪ್ರಪಂಚವನ್ನ ಕಟ್ಟಿಕೊಳ್ಳಬೇಕು. ನಾನು ಪದೇ ಪದೇ ಫೋನ್ ಮಾಡುತ್ತಿದ್ದರೆ, ಅವಳಿಗೆ ಮತ್ತೆ ಮನೆಗೆ ವಾಪಸ್ ಬರಬೇಕು ಎನಿಸುತ್ತಲೇ ಇರುತ್ತದೆ" ಎಂದು ವಾಸ್ತವವನ್ನ ಬಿಚ್ಚಿಟ್ಟಿದ್ದಾರೆ.

Noida Founder

ಪೋಷಕರ ಜವಾಬ್ದಾರಿ

"ಒಬ್ಬ ತಂದೆಯಾಗಿ ಮುಂದಿನ ಹದಿನೈದು ದಿನಗಳು ನನಗೆ ತುಂಬ ಕಷ್ಟವಾಗುತ್ತದೆ ಎಂಬುದು ನನಗೆ ಗೊತ್ತು. ಆದರೆ ಈ ನಿರ್ಧಾರ ಅವಳ ಉಜ್ವಲ ಭವಿಷ್ಯಕ್ಕಾಗಿ ತುಂಬ ಮುಖ್ಯ. ನಮ್ಮ ಪ್ರೀತಿಪಾತ್ರರ ಜೊತೆಗಿದ್ದು ಅವರನ್ನ ಮುದ್ದಿಸುವುದು ಬಹಳ ಸುಲಭ. ಆದರೆ, ಅವರಿಂದ ದೂರವಿದ್ದು ಅವರು ಸ್ವತಂತ್ರವಾಗಿ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು ಬಹಳ ಕಷ್ಟ. ಇಂತಹ ಕಠಿಣ ನಿರ್ಧಾರಗಳಿಗೆ ಯಾರೂ ಚಪ್ಪಾಳೆ ತಟ್ಟುವುದಿಲ್ಲ" ಎಂದು ರೋಹಿತ್ ಭಾವುಕರಾಗಿ ಬರೆದುಕೊಂಡಿದ್ದಾರೆ.

ಲಿಂಕ್ಡ್‌ಇನ್ ಪೋಸ್ಟ್‌ಗೆ ನೆಟ್ಟಿಗರ ಭಾರಿ ಮೆಚ್ಚುಗೆ

ರೋಹಿತ್ ಗುಪ್ತಾ ಅವರ ಈ ಪೋಸ್ಟ್‌ಗೆ ಸಾವಿರಾರು ಪೋಷಕರು ಮೆಚ್ಚಿಕೊಂಡಿದ್ದಾರೆ. ಅನೇಕರು ಈ ನಿರ್ಧಾರವನ್ನು ಧೈರ್ಯಶಾಲಿ ಹೆಜ್ಜೆ ಎಂದು ಬಣ್ಣಿಸಿದ್ದಾರೆ ಕೂಡ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, "ಇದು ಒಳ್ಳೆಯ ನಿರ್ಧಾರ. ಮಕ್ಕಳು ನಮ್ಮ ಜೊತೆಯಲ್ಲಿದ್ದಾಗ ನಾವು ಅತಿಯಾದ ಕಾಳಜಿ ವಹಿಸುವ ಹೆಲಿಕಾಪ್ಟರ್ ಪೇರೆಂಟ್ಸ್ ಆಗಿಬಿಡುತ್ತೇವೆ. ಅವರನ್ನು ಸ್ವತಂತ್ರವಾಗಿ ಬಿಡುವಷ್ಟು ನಂಬಿಕೆ ನಮಗಿರಬೇಕು" ಎಂದಿದ್ದಾರೆ.

ಮತ್ತೊಬ್ಬರು ತಮ್ಮ ಬಾಲ್ಯವನ್ನ ನೆನಪಿಸಿಕೊಂಡು, "ನನ್ನ ತಂದೆ ಕೂಡ ನನ್ನ ಬಾಲ್ಯದಲ್ಲಿ ಇಂತಹದ್ದೇ ಕಠಿಣ ನಿಯಮ ತೆಗೆದುಕೊಂಡಿದ್ದರು. ಅಂದು ನನಗೆ ಅವರ ಮೇಲೆ ಕೋಪವಿತ್ತು, ಆದರೆ ಇಂದು ನಾನು ನನ್ನ ತಂದೆಗೆ ತುಂಬ ಕೃತಜ್ಞನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+