1975ರಲ್ಲಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ನಿಂತಾಗ

By: ಅನುಷಾ ರವಿ
Subscribe to Oneindia Kannada

ನವದೆಹಲಿ, ನವೆಂಬರ್ 30: ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಬುಧವಾರ (ನವೆಂಬರ್ 30) ಮಹತ್ವದ ಆದೇಶ ಹೊರಡಿಸಿದ ಸುದ್ದಿಯನ್ನು ಓದಿರಬಹುದು. ಆದರೆ, ಈ ರೀತಿ ಆದೇಶ ಇದೇ ಮೊದಲ ಬಾರಿಗೆ ಕೇಳಿ ಬಂದಿದ್ದಲ್ಲ. 1975ರಲ್ಲೇ ಈ ನಿಯಮ ಪಾಲಿಸಲಾಗುತ್ತಿತ್ತು. ಆದರೆ, ನಂತರ ನಿಲ್ಲಿಸಲಾಯಿತು.

ಸುಪ್ರೀಂಕೋರ್ಟ್ ಬುಧವಾರ ನೀಡಿದ ಆದೇಶದಂತೆ ಇನ್ಮುಂದೆ ಚಿತ್ರಮಂದಿರಗಳಲ್ಲಿ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಧ್ವಜ ಪ್ರದರ್ಶಿಸಬೇಕು ಹಾಗೂ ರಾಷ್ಟ್ರಗೀತೆ ಮೊಳಗಿಸಿ ಗೌರವ ಸಲ್ಲಿಸಬೇಕಿದೆ. ರಾಷ್ಟ್ರಗೀತೆ ಜನ ಗಣ ಮನ ಮೊಳಗುವ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿರುವ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು.[ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ]

Why theatres stopped playing the National Anthem in 1975

1975ರಲ್ಲಿ ಇದೇ ರೀತಿ ಆದೇಶ ಪಾಲಿಸಬೇಕಾಗಿತ್ತು. ಆದರೆ, ಸಿನಿಮಾ ಮಂದಿರಗಳಲ್ಲಿ ಸಿನಿಮಾ ಮುಗಿದ ಮೇಲೆ ರಾಷ್ಟ್ರಗೀತೆಯನ್ನು ಮೊಟಕುಗೊಳಿಸಿ ಹಾಕಲಾಗುತ್ತಿತ್ತು. [ಭಾರತದ ರಾಷ್ಟ್ರಗೀತೆ ಇತಿಹಾಸ, ಸಾಹಿತ್ಯ, ಮಹತ್ವ...]

ಆದರೆ, ಆ ವೇಳೆಗಾಗಲೇ ಪ್ರೇಕ್ಷಕರು, ಮಂದಿರ ಖಾಲಿ ಮಾಡುವ ತರಾತುರಿಯಲ್ಲಿರುವುದರಿಂದ ರಾಷ್ಟ್ರಗೀತೆಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಲು ಆಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಈ ವ್ಯವಸ್ಥೆಯನ್ನು ನಿಷೇಧಿಸಲಾಯಿತು.

2015ರಲ್ಲಿ ಮದ್ರಾಸ್ ಹೈಕೋರ್ಟ್ ಕೂಡಾ ಅರ್ಜಿಯೊಂದರ ವಿಚಾರಣೆ ವೇಳೆ ಇದೇ ಅಂಶವನ್ನು ಉಲ್ಲೇಖಿಸಿತ್ತು. ಜನವರಿ 5, 2015ರಂದು ಈ ಬಗ್ಗೆ ಆದೇಶ ಹೊರಡಿಸಿದ ಮದ್ರಾಸ್ ಹೈಕೋರ್ಟ್, ಸಿನಿಮಾ ಹಾಲ್ ಗಳಲ್ಲಿ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲುವುದರಿಂದ ಅನಗತ್ಯ ಗೊಂದಲ ಉಂಟಾಗುತ್ತದೆ.

ಕೆಲವರು ಕುಳಿತುಕೊಂಡು ಮತ್ತೆ ಕೆಲವರು ಎದ್ದು ನಿಲ್ಲುವುದರಿಂದ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ಈ ವ್ಯವಸ್ಥೆಯನ್ನು ಪಾಲಿಸದಿರುವುದು ಒಳ್ಳೆಯದು ಎಂದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೋರ್ಟ್ ಸೂಚಿಸಿತ್ತು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court on Wednesday made it mandatory for movie theatres to play the National Anthem and display the National Flag on the screen before the start of a movie. This move however, is not new to Indian Movie halls. Tried and tested, the practice was stopped in 1975.
Please Wait while comments are loading...