Get Updates
Get notified of breaking news, exclusive insights, and must-see stories!

2020ರಲ್ಲಿ ಶ್ರದ್ಧಾ ದೂರಿನ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ: ಫಡ್ನವೀಸ್ ಪ್ರಶ್ನೆ, ತನಿಖೆಗೆ ಆಗ್ರಹ

ದೆಹಲಿ, ನವೆಂಬರ್ 23: 2020ರಲ್ಲಿ ಶ್ರದ್ಧಾ ದೂರಿನ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಫಡ್ನವೀಸ್ ಪ್ರಶ್ನೆ ಮಾಡಿದ್ದಾರೆ. ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಹೊಸ ಹೊಸ ವಿಚಾರಗಳನ್ನು ಬಯಲಿಗೆಳಿಯುತ್ತಿದ್ದಾರೆ. ಇಂದು ಶ್ರದ್ಧಾ ವಾಕರ್ ಎರಡು ವರ್ಷಗಳ ಹಿಂದೆ ಅಫ್ತಾಬ್ ವಿರುದ್ಧ ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ.

ಶ್ರದ್ಧಾ ವಾಕರ್‌ನೊಂದಿಗೆ ಸಹಜೀವನ ನಡೆಸುತ್ತಿದ್ದ ಅಫ್ತಾಬ್ ಮೇ 18 ರಂದು ಆಕೆಯನ್ನು ಕೊಲೆ ಮಾಡಿ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದನು. ಇದಾದ ಬಳಿಕ ಕೆಲ ದಿನಗಳವರೆಗೆ ಮೃತದೇಹದ ತುಂಡುಗಳನ್ನು ಮೆಹ್ರೌಲಿ ಅರಣ್ಯದಲ್ಲಿ ಎಸೆಯಲಾಯಿತು. ಈ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಮುಂದುವರೆದಂತೆ ಪ್ರತಿದಿನ ಹೊಸ ಮತ್ತು ಆಘಾತಕಾರಿ ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಇಂದು ಶ್ರದ್ಧಾ ವಾಕರ್ ಅವರ ಹಳೆಯ ದೂರಿನ ಪ್ರತಿಯೊಂದು ವೈರಲ್ ಆಗಿದೆ. ಈ ಪತ್ರದ ಮೂಲಕ ಮಹಾರಾಷ್ಟ್ರ ಪೊಲೀಸರಿಗೆ ಶ್ರದ್ಧಾ ವಾಕರ್, ಅಫ್ತಾಬ್ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಮತ್ತು ತನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರು ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಶ್ರದ್ಧಾ ದೂರಿನ ಬಗ್ಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಫಡ್ನವೀಸ್ ಪ್ರತಿಕ್ರಿಯಿಸಿದ್ದಾರೆ. ಶ್ರದ್ಧಾ ವಾಕರ್ ನೀಡಿದ ಈ ದೂರನ್ನು ಆಗ ಏಕೆ ತನಿಖೆ ನಡೆಸಲಿಲ್ಲ? ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಫಡ್ನವೀಸ್ ಅವರು ಪ್ರಶ್ನೆ ಮಾಡಿದ್ದಾರೆ. ಟಿವಿ ವಾಹಿನಿಯೊಂದರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಫಡ್ನವೀಸ್ ಮಾತನಾಡಿ, 2020 ರಲ್ಲಿ ಶ್ರದ್ಧಾ ನೀಡಿದ ದೂರು ತುಂಬಾ ಗಂಭೀರವಾಗಿದೆ. ಆ ವೇಳೆಗೆ ತನಿಖೆ ನಡೆಸಿದ್ದರೆ ಶ್ರದ್ಧಾ ಅವರ ಪ್ರಾಣ ಉಳಿಯುತ್ತಿತ್ತು. ಆ ಸಮಯದಲ್ಲಿ ಈ ಪ್ರಕರಣವನ್ನು ಏಕೆ ತನಿಖೆ ಮಾಡಲಿಲ್ಲ ಎಂಬ ಬಗ್ಗೆ ಈಗ ತನಿಖೆ ನಡೆಸುವುದಾಗಿ ಫಡ್ನವೀಸ್ ಹೇಳಿದ್ದಾರೆ.

Why no action was taken on Shraddhas complaint in 2020- Fadnavis demands investigation

2020 ರಲ್ಲಿ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಶ್ರದ್ಧಾ ವಾಕರ್ ದೂರು ದಾಖಲಿಸಿದ್ದರು. ಈ ದೂರಿನ ಮೂಲಕ, ಅಫ್ತಾಬ್ ತನ್ನನ್ನು ಥಳಿಸುತ್ತಿದ್ದರು ಮತ್ತು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಮಾತ್ರವಲ್ಲದೆ ತಮ್ಮನ್ನು ತುಂಡು ತುಂಡು ಮಾಡುವ ಬಗ್ಗೆ ಮಾತನಾಡುತ್ತಿದ್ದರು ಎಂದು ಶ್ರದ್ಧಾ ಆರೋಪಿಸಿದ್ದರು.

ಶ್ರದ್ಧಾ ಕೊಲೆ ಪ್ರಕರಣ ಬಯಲಾಗಿದ್ದು ಹೀಗೆ

ಶ್ರದ್ಧಾ ಮತ್ತು ಅಫ್ತಾಬ್ ಡೇಟಿಂಗ್ ಆಪ್ ಮೂಲಕ ಭೇಟಿಯಾಗಿದ್ದಾರೆ. ಶ್ರದ್ಧಾ ಮುಂಬೈ ನಿವಾಸಿಯಾಗಿದ್ದರು. ಅಫ್ತಾಬ್ ಕೂಡ ಇಲ್ಲಿನ ನಿವಾಸಿಯಾಗಿದ್ದರು. ಇಬ್ಬರ ನಡುವೆ ಮಾತುಕತೆ ಮುಂದುವರೆದಾಗ, ಅವರು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಈ ಸಂಬಂಧವನ್ನು ಶ್ರದ್ಧಾ ಮನೆಯವರು ವಿರೋಧಿಸಿದ್ದರು. ಅಫ್ತಾಬ್ ಜೊತೆ ಇರಲು ತಂದೆ ಶ್ರದ್ಧಾಗೆ ನಿಷೇಧ ಹೇರಿದಾಗ, ಆಕೆ ತಂದೆಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದಳು. ನಾನು ಇಂದಿನಿಂದ ನಿಮ್ಮ ಪಾಲಿಗೆ ಸತ್ತಿದ್ದೇನೆ ಎಂದು ತಂದೆಗೆ ಹೇಳಿ ಹೋಗಿದ್ದಳು. ಇಷ್ಟೆಲ್ಲ ಆದರೂ ಶ್ರದ್ಧಾ ಕುಟುಂಬಸ್ಥರು ಸ್ನೇಹಿತರ ಮೂಲಕ ಆಕೆಯ ಮೇಲೆ ಕಣ್ಣಿಟ್ಟಿದ್ದರು. ಅದೇ ಸಮಯದಲ್ಲಿ ಶ್ರದ್ಧಾ ಕೆಲವು ದಿನ ಸ್ನೇಹಿತರ ಜೊತೆ ಮಾತನಾಡದೇ ಇದ್ದಾಗ ಸ್ನೇಹಿತರು ಶ್ರದ್ಧಾ ತಂದೆಗೆ ವಿಷಯ ತಿಳಿಸಿದ್ದಾರೆ. ಇದಾದ ನಂತರ ತಂದೆ ಪಾಲ್ಘರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಆರಂಭವಾದಾಗ ಶ್ರದ್ಧಾ ಅವರ ಕೊನೆಯ ಸ್ಥಳ ದೆಹಲಿಯಲ್ಲಿ ಪತ್ತೆಯಾಗಿತ್ತು. ನಂತರ ಪಾಲ್ಘರ್ ಪೊಲೀಸರು ಪ್ರಕರಣವನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದರು. ದೆಹಲಿ ಪೊಲೀಸರು ಅಫ್ತಾಬ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಅವನು ಸತ್ಯವನ್ನು ಹೇಳಲಿಲ್ಲ. ಆತ ಶ್ರದ್ಧಾ ತನ್ನನ್ನು ಬಿಟ್ಟು ಎಲ್ಲೋ ಹೋಗಿದ್ದಾಳೆ ಎಂದು ಹೇಳುತ್ತಿದ್ದನು. ಆದರೆ, ದೆಹಲಿ ಪೊಲೀಸರು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+