ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಸಂಸತ್ ಭವನ ನಿರ್ಮಾಣವೇಕೆ? ಇಲ್ಲಿದೆ ಉತ್ತರ

|
Google Oneindia Kannada News

ನವದೆಹಲಿ, ಡಿಸೆಂಬರ್ 10:ನೂತನ ಸಂಸತ್ ಭವನದ ಅಗತ್ಯವೇನಿದೆ?, ಆರ್ಥಿಕ ಸಂಕಷ್ಟದ ಕಾಲದಲ್ಲಿ ಭವನ ಕಟ್ಟುವ ಅಗತ್ಯವೇನು ಎನ್ನುವ ಪ್ರಶ್ನೆಗಳು ಈಗ ಎದುರಾಗಿವೆ.
ಆದರೆ ನೂತನ ಸಂಸತ್ ಭವನದ ಉದ್ದೇಶ ಹಾಗೂ ಅನಿವಾರ್ಯತೆಯನ್ನು ಇಲ್ಲಿ ವಿವರಿಸಲಾಗಿದೆ.

2022ರಲ್ಲಿ ನಡೆಯಲಿರುವ 75ನೇ ಸ್ವಾತಂತ್ರ್ಯೋತ್ಸವವನ್ನು ನೂತನ ಸಂಸತ್ ಭವನದಲ್ಲಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ನೂತನ ಸಂಸತ್ ಭವನ ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸುವ ಮೊದಲು ಭಾರತೀಯ ಸಂಸತ್ ನ ಇತಿಹಾಸವನ್ನು ಒಮ್ಮೆ ಕೆದಕುವುದು ಅನಿವಾರ್ಯ. ಭಾರತದ ಸಂವಿಧಾನದ ಪ್ರಕಾರ 500ಕ್ಕೂ ಅಧಿಕ ಸಂಸದರನ್ನು ಹೊಂದಲು ಸಾಧ್ಯವಿಲ್ಲ. ಹೀಗಾಗಿ 1951ರಲ್ಲಿ ರಚನೆಯಲ್ಲಿ ಆಯ್ಕೆಯಾದ ಮೊದಲ ಸಂಸತ್ತಿನಲ್ಲಿ 481 ಸದಸ್ಯರಿದ್ದರು ಆಗ ಭಾರತದ 36 ಕೋಟಿ ಜನಸಂಖ್ಯೆಯನ್ನು ಹೊಂದಿತ್ತು.

Why New Parliament Building Is Needed ? Explained In Kannada

ಇದರರ್ಥ ಸುಮಾರು 7 ಲಕ್ಷ ಜನರಿಗೆ ಒಬ್ಬ ಸಂಸದರಿದ್ದರು, ಆದರೆ ಈಗ ಭಾರತ 543 ಸಂಸದರನ್ನು ಹೊಂದಿದ್ದು 135 ಕೋಟಿ ಜನಸಂಖ್ಯೆಗೆ ಏರಿದೆ.

ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದ ನೇರ ಪ್ರಸಾರ ವಿಡಿಯೋ :

ಇದರರ್ಥ ಸುಮಾರು 23 ಲಕ್ಷ ಜನರಿಗೆ ಒಬ್ಬ ಸಂಸದನನ್ನು ಭಾರತ ಹೊಂದಿದೆ. ಜನಸಂಖ್ಯೆಯನ್ನು ಆಧರಿಸಿ ಸಂಸದರನ್ನು ನೋಡಿದರೆ ಈಗಿರುವ ಸಂಖ್ಯೆಯೂ ಕಡಿಮೆಯೂ ಆಗಿದೆ.

ಸಂಸತ್ ಭವನ ಹಾಗೂ ಅದರೊಳಗಿನ ಆಸನದ ವ್ಯವಸ್ಥೆಯನ್ನೂ ಕೂಡ ಹಿಂದಿನ ಲೆಕ್ಕಾಚಾರಕ್ಕೆ ಅನುಗುಣವಾಗಿಯೇ ಮಾಡಲಾಗಿದೆ. ನೂತನ ಸಂಸತ್ ಭವನವನ್ನು 971 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಹೀಗಾಗಿ ಸುಮಾರು ಮೂರು ಸಂಸದರಿಗೆ ಕೂರಲು ಸೂಕ್ತ ಆಸನವೇ ಸಂಸತ್ ಭವನದಲ್ಲಿ ಇಲ್ಲದಂತಾಗಿದೆ. ಇದರಿಂದ ಅಧಿವೇಶನದಲ್ಲಿ ಕೆಲವೊಮ್ಮೆ ಸಂಸದರು ತೀವ್ರ ಇಕ್ಕಟ್ಟಿನಲ್ಲಿ ಕುಳಿತುಕೊಂಡಿರುವ ಚಿತ್ರ ಅಥವಾ ವಿಡಿಯೋವನ್ನು ನೀವು ಗಮನಿಸಿರಬಹುದು.

ಇದು ರಾಜ್ಯಸಭೆಗೂ ಅನ್ವಯವಾಗುತ್ತದೆ, ಈಗ ಇದಕ್ಕೆ ಪೂರಕವಾಗಿ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ನೂತನ ಸಂಸತ್ ಭವನ ನಿರ್ಮಾಣಕ್ಕೆ ಮುಂದಡಿ ಇಡಲಾಗಿದೆ.
ಅಂದಹಾಗೆ ಸಂಸತ್ ಭವನದ ನಿರ್ಮಾಣ ಮಾತ್ರ ಈ ನವೀಕರಣ ಪ್ರಕ್ರಿಯೆಗೆ ಸೀಮಿತವಾಗಿಲ್ಲ. ಸಂಪೂರ್ಣ ರಾಜಪಥವನ್ನೇ ನವೀಕರಣ ಮಾಡಲಾಗುತ್ತದೆ.
ಇದರಲ್ಲಿ ತ್ರಿಕೋನಾಕೃತಿಯ ಸಂಸತ್ ಭವನ, ನೂತನ ಸಂಸತ್ ಭವನ, ಸಚಿವಾಲಯ, ಹಾಗೂ ರಾಜಪಥ ನವೀಕರಣ ಸೇರಿದೆ.

ಲೋಕಸಭಾ ಚೇಂಬರ್ ಹಳೆಯದಕ್ಕಿಂತ ಮೂರು ಪಟ್ಟು ದೊಡ್ಡದಾಗಲಿದ್ದು, ರಾಜ್ಯಸಭೆ ನಾಲ್ಕು ಪಟ್ಟು ದೊಡ್ಡದಾಗಿರಲಿದೆ. ಈ ಸಂಪೂರ್ಣ ಕಾಮಗಾರಿ ಮುಗಿಸಲು 21 ತಿಂಗಳ ಅವಕಾಶ ನೀಡಲಾಗಿದ್ದು, ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಗುತ್ತಿಗೆಯನ್ನು ಪಡೆದಿದೆ.

* ವಾಸ್ತವವಾಗಿ 3,015 ಚ.ಮೀಟರ್ ವಿಸ್ತೀರ್ಣದಲ್ಲಿ ಲೋಕಸಭೆ ನಿರ್ಮಾಣಲಿದ್ದು, 1,145 ಚ.ಮೀಟರ್ ವಿಸ್ತೀರ್ಣದಲ್ಲಿ 543 ಆಸನಗಳ ಬದಲಿಗೆ 888 ಆಸನಗಳ ವ್ಯವಸ್ಥೆ ಮಾಡಲಾಗುವುದು.

* 3,220 ಚ.ಮೀಟರ್ ವಿಸ್ತೀರ್ಣದಲ್ಲಿ ರಾಜ್ಯಸಭೆ ನಿರ್ಮಾಣವಾಗಲಿದ್ದು, 1,232 ಚ.ಮೀಟರ್ ವಿಸ್ತೀರ್ಣದಲ್ಲಿ 245 ಸ್ಥಾನಗಳ ಬದಲಾಗಿ 384 ಆಸನಗಳು ಇರಲಿವೆ ಎಂದು ತಿಳಿದುಬಂದಿದೆ.

* ಪ್ರತಿ ಆಸನಗಳು 60 ಸೆಂ.ಮೀ. ಅಗಲ ಮತ್ತು 40 ಸೆಂ.ಮೀ. ಎತ್ತರ ಇರಲಿದ್ದು ಜಂಟಿ ಅಧಿವೇಶನ ನಡೆಯುವ ಸಮಯದಲ್ಲಿ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕೂರಲು ಅವಕಾಶ ಕಲ್ಪಿಸಬಹುದಾಗಿದೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

English summary
Prime Miniser Narendra Modi will lay the foundation stone for the new parliament building on December 10. The project given to Tata Projects Limited is estimated to cost Rs 971 crore and the construction would complete by 2022. But why India needs a new building for parliamentarians at this point.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X