Manmohan Singh: ತಂದೆಯ ಆಸೆಯಂತೆ ಮನಮೋಹನ್‌ ಸಿಂಗ್‌ ವೈದ್ಯನಾಗಬೇಕೆಂಬ ಕನಸು ಈಡೇರಲಿಲ್ಲ ಯಾಕೆ?

Manmohan Singh Passes Away: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರು ನಿನ್ನೆ (ಡಿಸೆಂಬರ್ 26) ನಿಧನರಾಗಿದ್ದಾರೆ. ಅವರು ದೇಶದ 13ನೇ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ, ಆರ್ಥಿಕ ತಜ್ಞರಾಗಿಯೂ ಸೇವೆ ಸಲ್ಲಿದ ಕೀರ್ತಿ ಇವರದ್ದಾಗಿದೆ. ಇನ್ನು ತಮ್ಮ ತಂದೆಯ ಆಸೆಯಂತೆ ಮನಮೋಹನ್‌ ಸಿಂಗ್‌ ವೈದ್ಯನಾಗಬೇಕೆಂಬ ಕನಸು ಈಡೇರಲಿಲ್ಲ ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮನಮೋಹನ್‌ ಸಿಂಗ್ ಅವರು ವ್ಯದ್ಯನಾಬೇಕೆಂದು ಅವರ ತಂದೆ ಕನಸು ಕಂಡಿದ್ದರು. ಅವರ ತಂದೆಯ ತಂದೆ ಬಯಸಿದ್ದರಿಂದ ಪ್ರಿ-ಮೆಡಿಕಲ್‌ ಕೋರ್ಸ್‌ಗೆ ಸೇರಿಕೊಂಡರು. ಆದರೆ. ಒಂದೆರಡು ತಿಂಗಳ ಬಳಿಕ ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡು ವಾಪಸ್‌ ಮರಳಿದರು. ಮನಮೋಹನ್‌ ಸಿಂಗ್‌ ಅವರ ಮಗಳು ದಮನ್‌ ಸಿಂಗ್‌ ತಮ್ಮ ತಂದೆಯ ಕುರಿತು ಬರೆದ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

Why is Manmohan Singh Could Not Fulfill His Father s Dream of Becoming Doctor

ದಮನ್‌ ಬರೆದಿರುವ ಸ್ಟ್ರಿಕ್ಟ್ಲಿ ಪೊಲಿಟಿಕಲ್‌ ಮನಮೋಹನ್‌ & ಗುರುಶರಣ್‌ ಎಂಬ ಪುಸ್ತಕ 2014ರಲ್ಲಿ ಪ್ರಕಟ ಆಗಿತ್ತು. ಅರ್ಥಶಾಸ್ತ್ರ ವಿಷಯದಲ್ಲಿ ಅವರು ಹೆಚ್ಚು ಆಸಕ್ತಿ ಹೊಂದಿದ್ದರು ಎಂದು ಅವರು ಪುಸ್ತಕದಲ್ಲಿ ಬರೆದಿದ್ದಾರೆ.

ಮಗನನ್ನು ವ್ಯದ್ಯನಾಗಬೇಕೆಂಬ ಕಾರಣಕ್ಕೆ ವ್ಯದ್ಯಕೀಯದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಎರಡು ವರ್ಷಗಳ ಎಫ್‌ಎಸ್‌ಸಿ ಕೋರ್ಸ್‌ಗೆ ಸೇರಿಸಿದ್ದರು. ಆದರೆ, ಒಂದೆರಡು ತಿಂಗಳ ನಂತರ ಅವರು ಕೋರ್ಸ್‌ನಲ್ಲಿ ಆಸಕ್ತಿ ಕಳೆದುಕೊಂಡರು. ವಾಸ್ತವವಾಗಿ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡುವ ಆಸಕ್ತಿ ಅವರಿಗೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮನಮೋಹನ್‌ ಸಿಂಗ್‌ ಹೇಳಿದ್ದೇನು?: ನಾನು ಅಪ್ಪನಿಗೆ ನೆರವಾಗಲು ಕಲ ಸಮಯ ಅವರ ಜೊತೆ ಅಂಗಡಿಗೆ ಹೋಗುತ್ತಿದ್ದೆ. ಆದರೆ ಅದು ಕೂಡ ನನಗೆ ಇಷ್ಟ ಆಗಲಿಲ್ಲ. ಯಾಕೆಂದರೆ ನನ್ನನ್ನು ಅಲ್ಲಿ ಕೀಳಾಗಿ ಕಂಡರು. ನೀರು, ಚಹಾ ತರುವ ಕೆಲಸವನ್ನು ನನಗೆ ನೀಡಲಾಯಿತು. ಆಗ ಶಿಕ್ಷಣ ಪಡೆಯುವುದೇ ಒಳಿತು ಎಂದು ನಿರ್ಧರಿಸಿ ಕಾಲೇಜು ಸೇರಲು ಬಯಸಿದೆ. 1948ರಲ್ಲಿ ಹಿಂದೂ ಕಾಲೇಜಿಗೆ ಪ್ರವೇಶ ಪಡೆದೆ ಎಂದು ದಮನ್‌ ಅವರು ತಮ್ಮ ತಂದೆಯ ಹೇಳಿಕೆಯನ್ನು ಪುಸ್ತಕದಲ್ಲಿ ಬರೆದಿದ್ದಾರೆ.

"ಬಡತನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾನು ಆಸಕ್ತಿ ಹೊಂದಿದ್ದೇನೆ. ಕೆಲವು ದೇಶಗಳು ಯಾಕೆ ಹಿಂದುಳಿದಿವೆ, ಇನ್ನೂ ಕೆಲ ದೇಶಗಳು ಯಾಕೆ ಶ್ರೀಮಂತ ಆಗಿವೆ ಎಂಬುದರ ಬಗ್ಗೆ ಯೋಚಿಸುತ್ತಿದೆ. ಇಂತಹ ಪ್ರಶ್ನೆಗಳನ್ನು ಅರ್ಥಶಾಸ್ತ್ರದಲ್ಲಿ ಕೇಳಲಾಗುತ್ತದೆ ಎಂದು ನನಗೆ ತಿಳಿಸಲಾಯಿತು," ಅಂತಾ ಮನಮೋಹನ್‌ ಸಿಂಗ್‌ ಹೇಳಿರುವುದನ್ನು ಅವರ ಮಗಳು ದಮನ್‌ ಅವರು ಪುಸ್ತಕದಲ್ಲಿ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+