ಚೀನಾ ಅಧ್ಯಕ್ಷರ ಭೇಟಿಯ ಮರು ದಿನವೇ ರವಾಂಡಾಕ್ಕೆ ಮೋದಿ ಹೋಗಿದ್ದೇಕೆ?

ಕಿಗಲಿ, ಜುಲೈ 25: ಪ್ರಧಾನಿ ನರೇಂದ್ರ ಮೋದಿ ಅವರ ಆಫ್ರಿಕ ದೇಶಗಳ ಪ್ರವಾಸ ಸದ್ದು ಮಾಡುತ್ತಿದೆ. ಅದರಲ್ಲಿಯೂ ಅವರ ರವಾಂಡಾ ಭೇಟಿ ಪ್ರಮುಖದ್ದು ಎನ್ನಲಾಗಿದೆ.

ಭಾರತದೊಂದಿಗೆ ಶೀಥಲ ಸಮರದಲ್ಲಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ರವಾಂಡಾಕ್ಕೆ ಭೇಟಿ ನೀಡಿದ ಮರುದಿನವೇ ನರೇಂದ್ರ ಮೋದಿ ಅವರು ರ್ವಾವಾಂಡಾದ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು.

ಜಗತ್ತಿನ ಎರಡು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನಾಯಕರು ತಾಮುಂದು-ನಾಮುಂದು ಎಂದು ಆಫ್ರಿಕಾದ ಈ ಸಣ್ಣ ದೇಶಕ್ಕೆ ಭೇಟಿ ನೀಡುತ್ತಿರುವುದೇಕೆ ಎಂಬುದು ಕುತೂಹಲದ ಪ್ರಶ್ನೆ ಅದರ ಉತ್ತರವೂ ಕುತೂಹಲಕಾರಿಯಾಗಿಯೇ ಇದೆ.

ಅಮಾನವೀಯ ಜನಾಂಗೀಯ ದಳ್ಳುರಿ

ಅಮಾನವೀಯ ಜನಾಂಗೀಯ ದಳ್ಳುರಿ

ಅಮಾನವೀಯ ಜನಾಂಗೀಯ ದಳ್ಳುರಿಯಲ್ಲಿ ಬೆಂದು, ಕ್ರೂರ ಇತಿಹಾಸ ಹೊಂದಿರುವ ರವಾಂಡಾ ಈಗ ಹೊರಳು ಹಾದಿಯಲ್ಲಿದೆ. ಈಗ ಈ ದೇಷ ಆಫ್ರಿಕಾದಲ್ಲಿಯೇ ಶಾಂತಿಯುತವಾದ ದೇಶಗಳಲ್ಲೊಂದು. ಜೊತೆಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದು.

ಚೀನಾ-ಭಾರತಕ್ಕೆ ರವಾಂಡಾ ಮೇಲೆ ಪ್ರೀತಿ ಏಕೆ?

ಚೀನಾ-ಭಾರತಕ್ಕೆ ರವಾಂಡಾ ಮೇಲೆ ಪ್ರೀತಿ ಏಕೆ?

ಆದರೆ ಚೀನಾ ಮತ್ತು ಭಾರತಕ್ಕೆ ರವಾಂಡಾ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ ಬರಲು ಕೇವಲ ಇದಷ್ಟೆ ಕಾರಣವಲ್ಲ. ರವಾಂಡಾವು ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿಕೊಂಡಿದೆ. ಅದರ ಅರ್ಥ ಅದು ಅಮೆರಿಕದಿಂದ ದೂರಾಗುವ ಚಿಂತನೆಯಲ್ಲಿದೆ. ಹಾಗಾಗಿ ಆ ಪುಟ್ಟ ದೇಶವನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಲು ಚೀನಾ ಮತ್ತು ಭಾರತ ಪೈಪೋಟಿ ನಡೆಸುತ್ತಿವೆ.

ವಿಶ್ವಸಂಸ್ಥೆಯಲ್ಲಿ ಬೆಂಬಲ ಹೆಚ್ಚಿಸಿಕೊಳ್ಳುವ ತಂತ್ರ

ವಿಶ್ವಸಂಸ್ಥೆಯಲ್ಲಿ ಬೆಂಬಲ ಹೆಚ್ಚಿಸಿಕೊಳ್ಳುವ ತಂತ್ರ

ರವಾಂಡಾವನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡರೆ ವಿಶ್ವಸಂಸ್ಥೆಯಲ್ಲಿನ ದೇಶಗಳ ಬೆಂಬಲ ಎರಡೂ ದೇಶಕ್ಕೆ ಹೆಚ್ಚಾಗಲಿದೆ. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಚೀನಾ ಮತ್ತು ಭಾರತ ಎದುರುಬದುರಾಗಿ ನಿಂತಿದ್ದು ಎರಡೂ ದೇಶಗಳಿಗೆ ಮಿತ್ರ ದೇಶಗಳ ಬೆಂಬಲ ಬೇಕಿದೆ. ವಿಶ್ವಸಂಸ್ಥೆಯಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯಲು ಎರಡೂ ದೇಶಗಳಿಗೆ ಇದು ಅವಶ್ಯಕವೂ ಆಗಿದೆ.

ಭದ್ರತಾ ಮಂಡಳಿಯ ಸದಸ್ಯತ್ವಕ್ಕಾಗಿ ಹವಣಿಕೆ

ಭದ್ರತಾ ಮಂಡಳಿಯ ಸದಸ್ಯತ್ವಕ್ಕಾಗಿ ಹವಣಿಕೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಪಡೆಯಲು ಹವಣಿಸುತ್ತಿರುವ ಭಾರತಕ್ಕೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೆಂಬಲ ಅತ್ಯಂತ ಅವಶ್ಯಕವಾಗಿದೆ. ಹಾಗಾಗಿಯೇ ಮೋದಿ ಅವರು ದೆಹಲಿಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿದರವಾಂಡಾ ದೇಶಕ್ಕೆ ಭೇಟಿ ನೀಡಿ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ.

126 ಮಿಲಿಯನ್ ಡಾಲರ್ ನೆರವು ನೀಡಿದ ಚೀನಾ

126 ಮಿಲಿಯನ್ ಡಾಲರ್ ನೆರವು ನೀಡಿದ ಚೀನಾ

ಚೀನಾ ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿದೆ ಆದರೆ ಅದು ಭಾರತಕ್ಕೆ ಈ ಗೌರವ ಹೊಂದಲು ಅಡ್ಡಗಾಲು ಹಾಕುತ್ತಿದೆ. ರವಾಂಡಾವೂ ಭಾರತದೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು ಚೀನಾಕ್ಕೆ ಇಷ್ಟವಿಲ್ಲ. ಹಾಗಾಗಿ ಚೀನಾ ಕೂಡ ರವಾಂಡಾಕ್ಕೆ ನರವಿನ ಹಸ್ತ ಚಾಚಿ ವಿಶ್ವಾಸಕ್ಕೆ ಪಡೆಯಲು ಹವಣಿಸಿದೆ ಚೀನಾವು 126 ಮಿಲಿಯನ್ ಡಾಲರ್ ನೆರವನ್ನು ರವಾಂಡಾಕ್ಕೆ ನೀಡಿದೆ. ಮೋದಿ ಅವರು ಬರೋಬ್ಬರಿ 100 ಮಿಲಿಯನ್ ಡಾಲರ್ ನೆರವು ನೀಡಿದ್ದು, ಜೊತೆಗೆ 200 ಹಸುಗಳನ್ನು ಸಹ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+