ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರು ಮನೆಯಲ್ಲೇ ಗುಣಮುಖರಾಗಲು ಹೀಗೆ ಮಾಡಿ!?

|
Google Oneindia Kannada News

ನವದೆಹಲಿ, ಏಪ್ರಿಲ್ 23: ಭಾರತದಾದ್ಯಂತ ಕೊರೊನಾವೈರಸ್ ಸೋಂಕಿತರು ಹಾಗೂ ಕುಟುಂಬ ಸದಸ್ಯರು ಆಸ್ಪತ್ರೆಗಳಲ್ಲಿ ಹಾಸಿಗೆ, ಲಸಿಕೆ, ಆಕ್ಸಿಜನಲ್, ವೆಂಟಿಲೇಟರ್ ವ್ಯವಸ್ಥೆ ಇಲ್ಲದೇ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ದೇಶಾದ್ಯಂತ ಎಲ್ಲ ಸೋಂಕಿತರಿಗೂ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಕೊವಿಡ್-19 ಸೋಂಕು ಅಂಟಿಕೊಂಡ ಪ್ರತಿಯೊಬ್ಬರು ಆಸ್ಪತ್ರೆಗಳಿಗೆ ದಾಖಲಾಗುವ ಅಗತ್ಯವಿಲ್ಲ. ನಿಮ್ಮ ನಿಮ್ಮ ಮನೆಗಳಲ್ಲೇ ಇದ್ದುಕೊಂಡು ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾಗುವ ಅವಕಾಶಗಳಿವೆ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

Recommended Video

Corona ಸೋಂಕಿತರು ಮನೆಯಲ್ಲೇ ಗುಣಮುಖರಾಗಲು ಹೀಗೆ ಮಾಡಿ!? | Oneindia Kannada

ಕೊರೊನಾವೈರಸ್ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಹೋಮ್ ಐಸೋಲೇಷನ್ ಅವಧಿಯಲ್ಲೇ ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಪ್ರತ್ಯೇಕ ಕೊಠಡಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಹಾಗೂ ಉಸಿರಾಟ ಸಮಸ್ಯೆ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗುರುವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಎಲ್ಲ ಕೊವಿಡ್ ಸೋಂಕಿತರನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ

ಎಲ್ಲ ಕೊವಿಡ್ ಸೋಂಕಿತರನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ

ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕಿತರ ಶ್ವಾಸಕೋಶದ ಮೇಲೆ ರೋಗಾಣು ಪರಿಣಾಮ ಬೀರುತ್ತಿದೆ. ರೋಗಿಗಳಲ್ಲಿ ಉಸಿರಾಟ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಆಕ್ಸಿಜನ್ ಕೊರತೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಎದುರಾಗಿದೆ. ಇಂಥ ಸ್ಥಿತಿಯಲ್ಲಿ ಎಲ್ಲ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಿಲ್ಲ. ಅದರ ಜೊತೆ ಎಲ್ಲರೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವುದಿಲ್ಲ ಎಂದು ರಿಜಾಯ್ಸ್ ಆಸ್ಪತ್ರೆಯ ಡಾ. ರುದ್ರಾ ಅವರು ತಿಳಿಸಿದ್ದಾರೆ.

ಎಲ್ಲ ಕೊವಿಡ್ ಸೋಂಕಿತರಿಗೆ ವೆಂಟಿಲೇಟರ್ ಬೇಕಾಗಿಲ್ಲ

ಎಲ್ಲ ಕೊವಿಡ್ ಸೋಂಕಿತರಿಗೆ ವೆಂಟಿಲೇಟರ್ ಬೇಕಾಗಿಲ್ಲ

ಕೊರೊನಾವೈರಸ್ ರೋಗಿಗಳಲ್ಲಿ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದಲ್ಲಿ ಅಂಥವರು ಮನೆಗಳಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ. ಎಲ್ಲ ಸೋಂಕಿತರಿಗೂ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯ ಇರುವುದಿಲ್ಲ. ಈ ರೋಗವು 15 ದಿನಗಳವರೆಗೂ ಇರುತ್ತದೆ. ಆರಂಭಿಕ 5 ದಿನಗಳವರೆಗೂ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಂತರ ಮಧ್ಯಮ ರೀತಿ ಸಮಸ್ಯೆಗಳು ಎದುರಾಗುತ್ತವೆ. ಆರೋಗ್ಯ ಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದ ಸಂದರ್ಭದಲ್ಲಿ ಅಂತಿಮವಾಗಿ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಡಾ. ರುದ್ರ ತಿಳಿಸಿದ್ದಾರೆ.

ಹೋಮ್ ಐಸೋಲೇಷನ್ ನಲ್ಲಿ ಯಾವ ನಿಯಮ ಪಾಲಿಸಬೇಕು?

ಹೋಮ್ ಐಸೋಲೇಷನ್ ನಲ್ಲಿ ಯಾವ ನಿಯಮ ಪಾಲಿಸಬೇಕು?

ಕೊರೊನಾವೈರಸ್ ಸೋಂಕಿತರಲ್ಲಿ ಸೌಮ್ಯ ಲಕ್ಷಣಗಳು ಗೋಚರಿಸಿದ ಸಂದರ್ಭದಲ್ಲಿಯೇ ಮನೆಗಳಲ್ಲಿ ಈ ನಿಯಮಗಳನ್ನು ಪಾಲಿಸಿದರೆ ಯಾವುದೇ ಅಪಾಯ ಇರುವುದಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ವೈದ್ಯಕೀಯ ತಜ್ಞರು ಉಸಿರಾಟಕ್ಕೆ ಸಂಬಂಧಿಸಿದ (Pronal Breathing) ವ್ಯಾಯಾಮದಿಂದ ದೇಹದಲ್ಲಿ ಆಮ್ಲಜನಕ ಶುದ್ಧವಾಗುತ್ತದೆ. ಇದರ ಜೊತೆಗೆ ನಾಡಿ ಮಿಡಿತದ ಮೇಲೂ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಆಮ್ಲಜನಕ ಕೊರತೆ ನೀಗಿಸುವ ಪ್ರೋನಲ್ ಬ್ರೀಥಿಂಗ್?

ಆಮ್ಲಜನಕ ಕೊರತೆ ನೀಗಿಸುವ ಪ್ರೋನಲ್ ಬ್ರೀಥಿಂಗ್?

ಪ್ರೋನೆಲ್ ಬ್ರೀಥಿಂಗ್ ಎನ್ನುವುದು ಮನುಷ್ಯನ ದೇಹದಲ್ಲಿ ಇರುವ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮಾಡುವ ಒಂದು ರೀತಿಯ ವ್ಯಾಯಾಮ ಆಗಿದೆ. ವೆಂಟಿಲೇಟರ್ ಸಮಸ್ಯೆ ಎದುರಾದ ಹಿನ್ನಲೆ ವೆಂಟಿಲೇಟರ್ ಸಹಾಯವಿಲ್ಲದೇ ಮನೆಯಲ್ಲೇ ಉಸಿರಾಟದ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಲು ಈ ವ್ಯಾಯಾಮ ಮಾಡುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಅಸಲಿಗೆ ಪ್ರೋನೆಲ್ ಬ್ರೀಥಿಂಗ್ ವಿಧಾನ ಹೇಗಿರುತ್ತದೆ.

ಪ್ರೋನೆಲ್ ಬ್ರೀಥಿಂಗ್ ವಿಧಾನ: ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಸಂದರ್ಭದಲ್ಲಿ ಕುತ್ತಿಗೆಯ ಭಾಗದಲ್ಲಿ ಒಂದು ದಿಂಬು, ಹೊಟ್ಟೆಯ ಕೆಳಗೆ ಒಂದು ದಿಂಬು ಹಾಗೂ ಕಾಲುಗಳ ಕೆಳಗೆ ಒಂದು ದಿಂಬುಗಳನ್ನು ಇಟ್ಟುಕೊಂಡು ದೀರ್ಘಾವಧಿ ಉಸಿರು ಎಳೆದುಕೊಳ್ಳುದು ಮತ್ತು ದೀರ್ಘಾವಧಿವರೆಗೂ ಉಸಿರು ಬಿಡುವುದೇ ಆಗಿದೆ. ಆದರೆ 30 ನಿಮಿಷಕ್ಕಿಂತ ಹೆಚ್ಚು ಅವಧಿ ಒಂದೇ ವಿಧಾನದಲ್ಲಿ ದಿಂಬುಗಳನ್ನು ಇಟ್ಟುಕೊಂಡು ವ್ಯಾಯಾಮ ಮಾಡುವುದೂ ಕೂಡಾ ಸೂಕ್ತವಲ್ಲ ಎಂದು ವೈದ್ಯರು ಸೂಚನೆ ನೀಡುತ್ತಾರೆ.

ಈ ನಿಯಮ ಪಾಲಿಸಿದರೆ ಮನೆಯಲ್ಲೇ ಮದ್ದು

ಈ ನಿಯಮ ಪಾಲಿಸಿದರೆ ಮನೆಯಲ್ಲೇ ಮದ್ದು

  • ಕೊರೊನಾ ಸೋಂಕು ದೃಢಪಟ್ಟ ದಿನದಿಂದ ಮುಂದಿನ 15 ದಿನಗಳವರೆಗೂ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು.
  • ನೀವೇ ಸಿದ್ಧಪಡಿಸಿದ 15 ದಿನಗಳ ಕಾಲೆಂಡರ್ ನಲ್ಲಿ ನಿಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ನಮೂದಿಸಬೇಕು. ಜ್ವರ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಪ್ರಮಾಣ, ಎಸ್ ಪಿಓ2 ಪ್ರಮಾಣ ಹಾಗೂ ಉಸಿರಾಟದಲ್ಲಿನ ಏರಿಳಿತದ ಬಗ್ಗೆ ಪರಿಶೀಲನೆ ಮಾಡಬೇಕು. ನಿಮ್ಮ ದೇಹದ ಆಮ್ಲಜನಕದ ಶುದ್ಧತೆ ಬಗ್ಗೆ ದಿನಕ್ಕೆ 3 ಬಾರಿ ಪರೀಕ್ಷೆ ಮಾಡಿಕೊಳ್ಳಬೇಕು.
  • ಒಂದು ವೇಳೆ ಆಮ್ಲಜನಕ ಪ್ರಮಾಣವು 94ಕ್ಕಿಂತ ಕಡಿಮೆಯಾಗಿರುವುದು ಕಂಡು ಬಂದ ಸಂದರ್ಭದಲ್ಲಿ ಪ್ರೋನಲ್ ಬ್ರಿಥಿಂಗ್ ವ್ಯಾಯಾಮವನ್ನು ಮಾಡಬೇಕು.
  • ದೇಹದಲ್ಲಿ ಆಮ್ಲಜನಕ ಪ್ರಮಾಣವು 88 ರಿಂದ 95ರ ಹಂತಕ್ಕೆ ಬಂದ ಸಂದರ್ಭಗಳಲ್ಲಿ ದಿನಕ್ಕೆ 30 ನಿಮಿಷಗಳ ಕಾಲ ಈ ಪ್ರೋನಲ್ ಬ್ರಿಥಿಂಗ್ ವ್ಯಾಯಾಮವನ್ನು ಮಾಡಬೇಕು.
  • ಇತರೆ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಫೋನ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಔಷದಿ ಪಡೆಯಿರಿ.

English summary
Why Doctors Recommend Home Quarantine For Mild Covid Patients. How Can Pronal Breathing Help?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X