ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ವಿಳಂಬ ಯಾಕೆ? ಇಲ್ಲಿದೆ ಕಾರಣ

ನವದೆಹಲಿ, ಮಾರ್ಚ್ 07: ಚುನಾವಣಾ ಆಯೋಗವು ಮಾರ್ಚ್ 05 ರಂದು ಲೋಕಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಬಹುದು ಎಂಬ ನಿರೀಕ್ಶಃಎ ಸುಳ್ಳಾಗಿದೆ. ಆದರೆ ದಿನಾಂಕ ಘೋಷಣೆಗೆ ವಿಳಂಬವಾಗುತ್ತಿರುದೇಕೆ ಎಂದು ಸ್ವತಃ ಚುನಾವಣಾ ಆಯೋಗವೇ ಕಾರಣಗಳನ್ನು ನೀಡಿದೆ.

'ಚುನಾವಣಾ ದಿನಾಂಕ ಘೋಷಣೆಗೆ ವಿಳಂಬವಾಗುತ್ತಿರುವುದೇಕೆ? ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯ ಹಿನ್ನೆಲೆಯಲ್ಲಿ ಘೋಷಿಸುತ್ತಿರುವ ವಿವಿಧ ಯೋಜನೆಗಳು ಮತ್ತು ಅವರ ಆಫೀಶಿಯಲ್ ಟೂರ್ ಗಳು ಮುಗಿದ ಮೇಲೆ ದಿನಾಂಕ ಘೋಷಿಸುತ್ತೀರೇ?' ಎಂದು ವಿಪಕ್ಷಗಳು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದವು.

Why delay in lok sabha elections date announcement: election commission explains

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚುನಾವಣಾ ಆಯೋಗ, "ನಾವು ಪ್ರಧಾನಿಯವರ ವೇಳಾಪಟ್ಟಿಗೆ ತಕ್ಕಂತೆ ಕೆಲಸ ಮಾಡುವುದಿಲ್ಲ. ನಮಗೆ ನಮ್ಮದೇ ಆದ ವೇಳಾಪಟ್ಟಿ ಇದೆ" ಎಂದು ಪ್ರತ್ಯುತ್ತರ ನೀಡಿದೆ.

'ನಾವು ಮಾರ್ಚ್ 5 ಕ್ಕೇ ಚುನಾವಣಾ ದಿನಾಂಕ ಘೋಷಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. 2014 ರ ಚುನಾವಣೆಯ ಸಂದರ್ಭದಲ್ಲಿ ಮಾರ್ಚ್ 5 ಕ್ಕೆ ಚುನಾವಣಾ ದಿನಾಂಕ ಘೋಷಿಸಿದ್ದೆವು. ಅದೇ ಆಧಾರದ ಮೇಲೆ ಈಗಲೂ ದಿನಾಂಕ ಘೋಷಿಸುವಂತೆ ಒತ್ತಾಯಿಸಲಾಗುತ್ತಿದೆ' ಎಂದು ಅದು ಹೇಳಿದೆ.

2014 ರ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಮೇ 31 ರ ಒಳಗೆ ಆಗಬೇಕಿತ್ತು. ಆದ್ದರಿಂದ ಆಗ ಮಾರ್ಚ್ 05 ಕ್ಕೆ ವೇಳಾಪಟ್ಟಿ ಘೋಷಿಸಿದ್ದೆವು. ಆದರೆ ಈ ಬಾರಿಯ ಚುನಾವಣೆಯ ಫಲಿತಾಂಶವನ್ನು ಜೂನ್ 3 ರವೊಳಗೆ ಘೋಷಿಸಬೇಕಿದೆ. ಆದ್ದ್ರಿಂದ ಸಮಯವಿದೆ ಎಂದು ಆಯೋಗ ಹೇಳಿದೆ.

"ಹಲವು ರಾಜ್ಯಗಳಲ್ಲಿ ಚುನಾವಣೆಯ ಸಿದ್ಧತೆ ನಡೆಯುತ್ತಿದೆ. ಅವೆಲ್ಲವೂ ಆದ ನಂತರ ಘೋಷಿಸುತ್ತೇವೆ" ಎಂದು ಆಯೋಗ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+