• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದ್ರಸಾ ಎಂದರೇನು? #banmadrasa ಏಕೆ?

By Mahesh
|

ಮದ್ರಸಾಗಳಲ್ಲಿ ಕುರಾನ್ ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಆಧುನಿಕ ಶಿಕ್ಷಣ ಪದ್ಧತಿಯ ಯಾವುದೇ ಮಾನದಂಡವನ್ನು ಮದ್ರಸಾಗಳು ಅನುಸರಿಸುತ್ತಿಲ್ಲ ಗಣಿತ, ವಿಜ್ಞಾನದ ಪರಿಚಯವಿಲ್ಲ. ಉರ್ದು ಮತ್ತು ಅರೇಬಿಕ್ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತದೆ.

ವೈದಿಕ ಪಾಠಶಾಲೆಗಳಂತೆ ಮದ್ರಸಾಗಳು ಕಾಡಾ ಆರ್ ಟಿಇ ಕಾಯ್ದೆ ವ್ಯಾಪ್ತಿಯಿಂದ ಹೊರಗುಳಿದಿವೆ. ಹಲವೆಡೆ ಮದ್ರಸಾಗಳಿಗೆ ಸ್ವಂತ ಕಟ್ಟಡಗಳಿಲ್ಲ, ಮೈದಾನಗಳಿಲ್ಲ, ಗ್ರಂಥಾಲಯಗಳಿಲ್ಲ, ಶಿಕ್ಷಕರು ಮೌಲ್ವಿಗಳ ಕೊರತೆ ಇದ್ದೇ ಇದೆ, ವಿದ್ಯಾರ್ಥಿಗಳಿಗೆ ವೈದ್ಯಕೀಯ ನೆರವು ತಕ್ಷಣವೇ ನೀಡಲಾಗುವುದಿಲ್ಲ, ಇಂಗ್ಲೀಷ್, ಕನ್ನಡ ಭಾಷೆ, ಕಂಪ್ಯೂಟರ್ ಶಿಕ್ಷಣ ಇನ್ನೂ ಒಗ್ಗಿಕೊಂಡಿಲ್ಲ.

ಏನಿದು #banmadrasa ಏಕೆ ಇದು ಟ್ವಿಟ್ಟರ್ ನಲ್ಲಿ ಚಾಲ್ತಿಯಲ್ಲಿತ್ತು. ಇತ್ತೀಚೆಗೆ ಮೀರತ್ ನಲ್ಲಿ 20 ವರ್ಷದ ಬಿಎ ಪದವೀಧರೆಯೊಬ್ಬಳನ್ನು ಅಪಹರಣ ಮಾಡಿದ ಕೆಲ ದುಷ್ಕರ್ಮಿಗಳ ಗುಂಪು, ಹಾಪುರ್ ನ ಮದರಸಾ ಹೊತ್ತೊಯ್ದು ಬಂಧನದಲ್ಲಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿತ್ತು. ಮದ್ರಸಾದ ನವಾಬ್ ಹಾಗೂ ನಾಲ್ವರ ಈ ನೀಚ ಕೃತ್ಯ ಎಸಗಿದ ಆರೋಪ ಹೊತ್ತಿದ್ದರು ಇದನ್ನು ಖಂಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ, ಟೀಕೆ, ನಿಷೇಧ ಹೇರಿಕೆ ಆಗ್ರಹ ಕಂಡು ಬಂದಿತ್ತು.[ಯುವತಿ ಅಪರಹಣ, ಸಾಮೂಹಿಕ ಅತ್ಯಾಚಾರ, ಮತಾಂತರ ]

ಮದ್ರಸಾಎಂದರೇನು? ಮದ್ರಸಾದಲ್ಲಿ ಏನು ಹೇಳಿಕೊಡಲಾಗುತ್ತದೆ? ಭಾರತದಲ್ಲಿ ಎಷ್ಟು ಮದ್ರಸಾಗಳಿವೆ?#banmadrasa ಕಾರಣವೇನು? ಮದ್ರಸಾದಲ್ಲಿ ಕಲಿಕೆ ನಂತರ ಮುಂದೇನು? ಎಂಬುದರ ಬಗ್ಗೆ ಮುಂದೆ ಓದಿ...

ಮದ್ರಸಾ ಎಂದರೇನು?

ಮದ್ರಸಾ ಎಂದರೇನು?

ಮದ್ರಸಾಗಳಲ್ಲಿ ಕುರಾನ್ ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಅರೇಬಿಕ್ ನಲ್ಲಿ ಮದ್ರಸಾ ಎಂದರೆ ಶಿಕ್ಷಣ ಸಂಸ್ಥೆ ಎಂಬರ್ಥ ಬರುತ್ತದೆ.

ಈ ಕಾಲದ ಮದ್ರಾಗಳಲ್ಲಿ ಬಡ ಮುಸ್ಲಿಂ ವಿದ್ಯಾರ್ಥಿಗಳು ಮಾತ್ರ ಕಲಿಕೆ ಮೀಸಲಾಗಿಬಿಟ್ಟಿದೆ. ಮೆರಿ ವೆಬ್ ಸ್ಟರ್ ಶಬ್ದಕೋಶದ ಪ್ರಕಾರ ಮುಸ್ಲಿಂ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೂ ಈ ಪದ ಬಳಸಬಹುದಾಗಿದೆ. ಬಹುತೇಕ ಮಸೀದಿಗೆ ಹೊಂದಿಕೊಂಡಂತೆ ಇರುತ್ತದೆ. ಹೀಗಾಗಿ ಧಾರ್ಮಿಕ ವಿಧಿ ಕಲಿಕೆಗೆ ಅನುಕೂಲಕರ

ಮದ್ರಸಾದಲ್ಲಿ ಏನು ಹೇಳಿಕೊಡಲಾಗುತ್ತದೆ?

ಮದ್ರಸಾದಲ್ಲಿ ಏನು ಹೇಳಿಕೊಡಲಾಗುತ್ತದೆ?

* ಧಾರ್ಮಿಕ ಸಾಂಸ್ಕೃತಿಕ ಸಂಸ್ಥೆಗಳಾಗಿ ಇಸ್ಲಾಂ ಧರ್ಮದ ಮೂಲ ಉದ್ದೇಶಗಳನ್ನು ಹೇಳಿಕೊಡುವ ಸಂಸ್ಥೆಯಾಗಿ ಮದ್ರಸಾ ಉಳಿದುಕೊಳ್ಳಬೇಕಿದೆ ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಉದ್ದೇಶಗಳ ಪರ ವಾಲಬಾರದು ಎಂದು ದೆಹಲಿ ಮೂಲದ ಶಾಂತಿ ಸೌಹಾರ್ದ ಸಂಸ್ಥೆ ವರದಿ ಹೇಳುತ್ತದೆ.

* ಕುರಾನಿನ ಪಠಣದ ಜತೆಗೆ ವಿದ್ಯಾರ್ಥಿಗಳಿಗೆ ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಆಧುನಿಕ ಶಿಕ್ಷಣ ಪದ್ಧತಿಯ ಯಾವುದೇ ಮಾನದಂಡವನ್ನು ಮದ್ರಸಾಗಳು ಅನುಸರಿಸುತ್ತಿಲ್ಲ ಗಣಿತ, ವಿಜ್ಞಾನದ ಪರಿಚಯವಿಲ್ಲ. ಉರ್ದು ಮತ್ತು ಅರೇಬಿಕ್ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತದೆ.

* ಇಂಗ್ಲೀಷ್, ಕನ್ನಡ ಭಾಷೆ, ಕಂಪ್ಯೂಟರ್ ಶಿಕ್ಷಣ ಇನ್ನೂ ಒಗ್ಗಿಕೊಂಡಿಲ್ಲ. ಈ ಪಠ್ಯ ಅಳವಡಿಕೆ ಯತ್ನ ನಡೆಯುತ್ತಲೇ ಇದೆ.

* ಬ್ರಿಟಿಷರ ಕಾಲದಲ್ಲಿ 1866ರಲ್ಲಿ ಆರಂಭಗೊಂಡ ದರೂಲ್ ಉಲೂಮ್ ಮದ್ರಸಾದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿತು. ಇಸ್ಲಾಂ ಜ್ಞಾನವನ್ನು ಹರಡುವುದರ ಜೊತೆಗೆ ಭಾರತೀಯ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರಚೋದಿಸಿತ್ತು.

ಭಾರತದಲ್ಲಿ ಎಷ್ಟು ಮದ್ರಸಾಗಳಿವೆ?

ಭಾರತದಲ್ಲಿ ಎಷ್ಟು ಮದ್ರಸಾಗಳಿವೆ?

* ಐಪಿಸಿಎಸ್ ಪ್ರಕಾರ ಸುಮಾರು 35,000 ಮದ್ರಸಾಗಳನ್ನು ಭಾರತದೆಲ್ಲೆಡೆ ಗುರುತಿಸಲಾಗಿದೆ. ಸುಮಾರು 1.5 ಮಿಲಿಯನ್ ವಿದ್ಯಾರ್ಥಿಗಳು ಇದ್ದಾರೆ. ಮುಸ್ಲಿಮ್ ಹಾಗೂ ಹಿಂದೂ ವಿದ್ಯಾರ್ಥಿಗಳು ಇದರಲ್ಲಿ ಸೇರಿದ್ದಾರೆ.

* ಅಲ್ ಜಮೈತುಲ್ ಅಶ್ರಫಿಯಾ, ಮುಬರಾಕ್ಪುರ್, ಮಂಜರ್ ಇಸ್ಲಾಂ ಬರೇಲಿ, ಜಮೀಯಾ ನಿಜಾಮಾದಿನ, ನವದೆಹಲಿ, ಜಮೀಯಾ ನಯೀಮಿಯಾ, ಮುರಾದಾಬಾದ್ ಪ್ರಮುಖ ಮದ್ರಸಾಗಳು.

* 13ನೇ ಶತಮಾನದಿಂದಲೂ ಭಾರತದಲ್ಲಿ ಮದ್ರಸಾಗಳು ಇವೆ.

* ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಉತ್ತಮ ಅಧಿಕಾರಿಗಳು, ಆಡಳಿತಗಾರರು, ನ್ಯಾಯಾಧೀಶರನ್ನು ನೀಡಿದ ಕೀರ್ತಿ ಮದ್ರಸಾಗಳಿಗೆ ಸಲ್ಲುತ್ತದೆ

ಮೋದಿ ಸರ್ಕಾರದಿಂದ ನೆರವು

ಮೋದಿ ಸರ್ಕಾರದಿಂದ ನೆರವು

* ನರೇಂದ್ರ ಮೋದಿ ಸರ್ಕಾರ ಕೇಂದ್ರ ಬಜೆಟ್ ನಲ್ಲಿ ಮದ್ರಸಾಗಳ ಅಭಿವೃದ್ಧಿಗೆ, ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ 100 ಕೋಟಿ ರು ಮೀಸಲಿಟ್ಟಿದೆ.

* ಆದರೆ, ಅನೇಕ ಮೂಲಭೂತವಾದಿಗಳು ಮದ್ರಸಾಗಳನ್ನು ಉಗ್ರರ ಅಡಗುತಾಣಗಳನ್ನಾಗಿಸಿಕೊಂಡಿರುವುದು ದುರಂತವಾಗಿದ್ದು, ಅಮಾಯಕ ಯುವಕರನ್ನು ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಗೆ ತಳ್ಳುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮೋದಿ ಸರ್ಕಾರ ಎಚ್ಚರವಹಿಸಿದೆ.

*ಮದ್ರಸಾಗಳಿಗೂ ಸಮಾಜ ಘಾತುಕ ಶಕ್ತಿಗಳಿಗೂ ಸಂಬಂಧವಿಲ್ಲ ಎಂಬುದನ್ನು ಪ್ರತ್ಯೇಕಿಸಿ ಹೇಳಬೇಕಾಗಿಲ್ಲ. ಉಗ್ರರು ಮದ್ರಸಾಗಳನ್ನು ದುರುಪಯೋಗಪಡಿಸಿಕೊಳ್ಳಲು ಸತತ ಯತ್ನ ನಡೆಸುತ್ತಲೆ ಇದ್ದಾರೆ.

ಮೀರತ್ ಬಿಜೆಪಿ ಘಟಕದ ಟ್ವೀಟ್

ಮೀರತ್ ಬಿಜೆಪಿ ಘಟಕದ ಟ್ವೀಟ್

 #banmadrasa ಏಕೆ?

#banmadrasa ಏಕೆ?

ಇತ್ತೀಚೆಗೆ ಮೀರತ್ ನಲ್ಲಿ 20 ವರ್ಷದ ಬಿಎ ಪದವೀಧರೆಯೊಬ್ಬಳನ್ನು ಅಪಹರಣ ಮಾಡಿದ ಕೆಲ ದುಷ್ಕರ್ಮಿಗಳ ಗುಂಪು, ಹಾಪುರ್ ನ ಮದರಸಾ ಹೊತ್ತೊಯ್ದು ಬಂಧನದಲ್ಲಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿತ್ತು.

ಈಕೆ ಮದ್ರಸಾದಲ್ಲಿ ಅರೆ ಕಾಲಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು.ಮದ್ರಸಾದ ನವಾಬ್ ಹಾಗೂ ನಾಲ್ವರ ಈ ನೀಚ ಕೃತ್ಯ ಎಸಗಿದ ಆರೋಪ ಹೊತ್ತಿದ್ದರು ಇದನ್ನು ಖಂಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ, ಟೀಕೆ, ನಿಷೇಧ ಹೇರಿಕೆ ಆಗ್ರಹ ಕಂಡು ಬಂದಿತ್ತು.

English summary
The #banmadrasa campaign started trending on social micro-blogging website Twitter where twiterratis are venting their anger over alleged anti-social activities being practiced in madrasas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X