ಸಿಆರ್ ಪಿಎಫ್ ಮುಖ್ಯಸ್ಥರ ನೇಮಕ ಸರಕಾರದ ಆದ್ಯತೆ ಆಗಬೇಕು ಏಕೆ?
ಎರಡು ತಿಂಗಳಿಂದ ಸಿಆರ್ ಪಿಎಫ್ ಗೆ ಮುಖ್ಯಸ್ಥರು ಇಲ್ಲದಂತಾಗಿದೆ. ಈ ಅವಧಿಯಲ್ಲಿ ಎರಡು ಪ್ರಮುಖ ದಾಳಿಗಳು ಆಗಿವೆ. ಸರಕಾರ ಕೂಡಲೇ ಸಿಆರ್ ಪಿಎಫ್ ಗೆ ತುರ್ತಾಗಿ ಮುಖ್ಯಸ್ಥರ ನೇಮಕ ಮಾಡಬೇಕಾಗಿದೆ
ಬೆಂಗಳೂರು, ಏಪ್ರಿಲ್ 25: ಸಿಆರ್ ಪಿಎಫ್ ನ ಇಪ್ಪತ್ತಾರು ಮಂದಿ ನಕ್ಸಲರ ದಾಳಿಯಿಂದ ಛತ್ತೀಸ್ ಗಢದಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಸಿಆರ್ ಪಿಎಫ್ ಗೆ ಮುಖ್ಯಸ್ಥರೇ ಇಲ್ಲದೆ ಎರಡು ತಿಂಗಳು ಕಳೆದಿದ್ದು, ಈ ಬಗ್ಗೆ ಸರಕಾರ ತುಟಿ ಬಿಚ್ಚಿಲ್ಲ. ಗೃಹ ಸಚಿವಾಲಯದ ಮೂಲದ ಪ್ರಕಾರ ಹೊಸ ಡೈರೆಕ್ಟರ್ ಜನರಲ್ (ಡಿಜಿ) ನೇಮಕ ಶೀಘ್ರದಲ್ಲೇ ಆಗಲಿದೆ.
ಆದರೆ, ಸಿಆರ್ ಪಿಎಫ್ ಅಧಿಕಾರಿಗಳೇ ಹೇಳುವ ಪ್ರಕಾರ ನೇಮಕದ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಇಲ್ಲ. ಮುಖ್ಯಸ್ಥರೇ ಇಲ್ಲದ ಈ ಅವಧಿಯಲ್ಲಿ ಸಿಆರ್ ಪಿಎಫ್ ಮೇಲೆ ಎರಡು ಪ್ರಮುಖ ದಾಳಿಗಳಾಗಿವೆ. ಇವುಗಳಲ್ಲಿ ನಲವತ್ತರಷ್ಟು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.[ಛತ್ತೀಸ್ ಗಢ ನಕ್ಸಲರ ದಾಳಿ, ಗುರುತೇ ಸಿಗದಂತಾಗಿದ್ದ ಯೋಧರ ದೇಹ]

ಕೆ ದುರ್ಗಾಪ್ರಸಾದ್ ಸಿಆರ್ ಪಿಎಫ್ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ನಂತರ ಗೃಹ ಸಚಿವಾಲಯವು ಸುದೀಪ್ ಲಕ್ಟಕಿ ಅವರಿಗೆ ಹೆಚ್ಚುವರಿ ಹೊಣೆ ಹೊರಿಸಿತು. ಸದ್ಯಕ್ಕೆ ಹೊಸ ಮುಖ್ಯಸ್ಥರ ಆಯ್ಕೆಗೆ ಮುಂದಾಗಿದೆ. ಒಂದು ಪಟ್ಟಿಯನ್ನೇನೋ ಸಿದ್ಧಪಡಿಸಿದರೂ ಯಾವುದೇ ಅಂತಿಮ ಆಯ್ಕೆ ಆಗಿಲ್ಲ.[ಅಪನಗದೀಕರಣದಿಂದ ನಕ್ಸಲರಿಗೆ ಸಮಸ್ಯೆಯಾಗಿದೆಯಾ? ಖಂಡಿತಾ ಹಾಗನಿಸಲ್ಲ]
ಮುಖ್ಯಸ್ಥರಿಲ್ಲದ ಸಿಆರ್ ಪಿಎಫ್ ಮೇಲೆ ತೀರಾ ಗಂಭೀರ ದಾಳಿಗಳಾಗಿವೆ. ದೈನಂದಿನ ವ್ಯವಹಾರಗಳಾನ್ನು ಆಯಾ ಬೆಟಾಲಿಯನ್ ಮುಖ್ಯಸ್ಥರು ನೋಡಿಕೊಳ್ಳುತ್ತಿದ್ದಾರೆ. ಆದರೆ ನಿರ್ಧಾರದ ವಿಷಯ ಬಂದಾಗ ಸಮಸ್ಯೆ ಎದುರಾಗುತ್ತದೆ. ಪೂರ್ಣಕಾಲಿಕ ಮುಖ್ಯಸ್ಥರು ಮಾತ್ರ ಮುಖ್ಯವಾಗಿ ನೀತಿ ನಿರೂಪಣೆ ವಿಚಾರವಾಗಿ ನಿರ್ಧಾರ ಮಾಡಲು ಸಾಧ್ಯ. ಮತ್ತು ಇಂಥ ಸವಾಲಿನ ಸನ್ನಿವೇಶದಲ್ಲಿ ಸಹಾಯ ಮಾಡಲು ಸಾಧ್ಯ











Click it and Unblock the Notifications