ಹರ್ಯಾಣದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ
ಚಂದೀಗಢ, ಅ.19: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರಣ ತಂತ್ರ ಭರ್ಜರಿಯಾಗಿ ಕೆಲಸ ಮಾಡಿದ್ದು, ಹರ್ಯಾಣದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಬಿಜೆಪಿ ಪಾಲಿಗೆ ಕನಸಾಗಿದ್ದ ಹರ್ಯಾಣ ಸಿಎಂ ಸ್ಥಾನ ಈಗ ನನಸಾಗಿದೆ. ಭಾರತದ ಪುರಾತನ ಪಕ್ಷ ಕಾಂಗ್ರೆಸ್ ಕೊನೆಗೂ ತನ್ನ ಅಧಿಕಾರವನ್ನು ಕಳೆದುಕೊಂಡು ಹರ್ಯಾಣವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದಲ್ಲದೆ ಮೂರನೇ ಸ್ಥಾನಕ್ಕೆ ಕುಸಿದಿದೆ.
2014ರ ವಿಧಾನಸಭೆ ಚುನಾವಣೆಯಲ್ಲಿ ಹೊಸ ಹುರುಪಿನೊಂದಿಗೆ ಬಿಜೆಪಿ ನಾಯಕರು ಹರ್ಯಾಣದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲು ಮುಂದಾದಾಗ ಯಾರೂ ಈ ರೀತಿ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಅದರೆ, ಮತದಾನದ ನಂತರ ಬಂದ ಸಮೀಕ್ಷೆಯಲ್ಲಿ ಬಿಜೆಪಿಗೆ ಜಯ ಕಾಂಗ್ರೆಸ್ಸಿಗೆ ಸೋಲು ಎಂಬ ನಿರ್ಣಯ ನಿಜವಾಗಿದೆ.[ಮತದಾನೋತ್ತರ ಸಮೀಕ್ಷೆ ವಿವರ ಇಲ್ಲಿದೆ]
ಭಾನುವಾರ ಹೊರ ಬಿದ್ದಿರುವ ಫಲಿತಾಂಶ ಇಂತಿದೆ: 90 ಸ್ಥಾನಗಳಲ್ಲಿ ಬಿಜೆಪಿ 47, ಕಾಂಗ್ರೆಸ್ 15 , ಐಎನ್ಎಲ್ ಡಿ 20, ಎಚ್ ಜೆಸಿ 2, ಇತರೆ 7 [ಅಂತಿಮ ಫಲಿತಾಂಶ ಇನ್ನೂ ಹೊರಬಂದಿಲ್ಲ] 2009ರಲ್ಲಿ ಬಿಜೆಪಿ ಕೇವಲ 4 ಸೀಟುಗಳನ್ನು ಗೆದ್ದಿತ್ತು ಎಂಬುದನ್ನು ಮರೆಯುವಂತಿಲ್ಲ.
1967ರಿಂದ ಇದೇ ಮೊದಲ ಬಾರಿಗೆ ಹರ್ಯಾಣದಲ್ಲಿ ಅ.15ರಂದು ಶೇಕಡಾವಾರು ಮತದಾನದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. 1967ರಲ್ಲಿ 72.65% ಮತದಾನವಾಗಿತ್ತು. ಈ ದಾಖಲೆಯನ್ನು 2014ರಲ್ಲಿ 76.54% ಮತದಾನ ಮುರಿದಿದೆ. 116 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 1351 ಅಭ್ಯರ್ಥಿಗಳು ಕಣದಲ್ಲಿದ್ದರು.

2009ರ ಫಲಿತಾಂಶ : ಕಾಂಗ್ರೆಸ್ 40, ಐಎನ್ ಎಲ್ ಡಿ 31, ಬಿಜೆಪಿ 4, ಎಚ್ ಜೆ ಸಿ-ಬಿಎಲ್ 6, ಇತರೆ 9
ಇದಕ್ಕೂ ಮುನ್ನ 1966ರಿಂದ ಇಲ್ಲಿತನಕ ಆಳ್ವಿಕೆ ಮಾಡಿದ ಪಕ್ಷಗಳ ವಿವರ ಹೀಗಿದೆ:
* 1966-67: ಕಾಂಗ್ರೆಸ್ (ಭಗವತ್ ದಯಾಳ್ ಶರ್ಮ ಸಿಎಂ)
* 1967: ವಿಶಾಲ್ ಹರ್ಯಾಣ ಪಾರ್ಟಿ (ರಾವ್ ಬೀರೇಂದರ್ ಸಿಂಗ್)
* 1968-1975: ಕಾಂಗ್ರೆಸ್ (ಬನ್ಸಿಲಾಲ್)
* 1975-77: ಕಾಂಗ್ರೆಸ್ (ಬನರಾಸಿ ದಾಸ್ ಗುಪ್ತ)
* 1977-79: ಜನತಾ ಪಾರ್ಟಿ (ದೇವಿಲಾಲ್)
* 1979-1985: ಕಾಂಗ್ರೆಸ್ (ಭಜನ್ ಲಾಲ್)
* 1985-87: ಕಾಂಗ್ರೆಸ್ (ಬನ್ಸಿಲಾಲ್)
* 1987-1991 ಜನತಾದಳ(ದೇವಿಲಾಲ್, ಓಂ ಪ್ರಕಾಶ್ ಚೌಟಾಲ, ಬಿ.ಡಿ ಗುಪ್ತ, ಹುಕುಂ ಸಿಂಗ್)
* 1991-96: ಕಾಂಗ್ರೆಸ್ (ಭಜನ್ ಲಾಲ್)
* 1996-99 : ಹರ್ಯಾಣ ವಿಕಾಸ್ ಪಾರ್ಟಿ(+ ಬಿಜೆಪಿ) (ಬನ್ಸಿಲಾಲ್)
* 1999-2005: ಇಂಡಿಯನ್ ನ್ಯಾಷನಲ್ ಲೋಕದಳ(INLD) (ಓಂ ಪ್ರಕಾಶ್ ಚೌಟಾಲ)
* 2005-2014: ಕಾಂಗ್ರೆಸ್ (ಭೂಪಿಂದರ್ ಸಿಂಗ್ ಹೂಡಾ)
* 2014: ಬಿಜೆಪಿ












Click it and Unblock the Notifications