ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತಂಕ ಬೇಡ: ವೈಟ್ ಫಂಗಸ್ ಬ್ಲ್ಯಾಕ್ ಫಂಗಸ್ ಅಷ್ಟು ಅಪಾಯಕಾರಿಯಲ್ಲ

|
Google Oneindia Kannada News

ನವದೆಹಲಿ, ಮೇ 22: ಭಯ ಬೇಡ, ವೈಟ್ ಫಂಗಸ್, ಬ್ಲ್ಯಾಕ್ ಫಂಗಸ್‌ನಷ್ಟು ಅಪಾಯಕಾರಿಯಲ್ಲ ಎಂದು ವೈದ್ಯರು ಹೇಳಿದ್ದಾರೆ.

ಈ ಕುರಿತು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ವೈಟ್ ಫಂಗಸ್ ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿಲ್ಲ: ವೈದ್ಯರುವೈಟ್ ಫಂಗಸ್ ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿಲ್ಲ: ವೈದ್ಯರು

'ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ಸೋಂಕಿನಷ್ಟು ಅಪಾಯಕಾರಿ ಅಲ್ಲ. ಆದರೆ ಸ್ಟಿರಾಯ್ಡ್ ಗಳ ಅನಗತ್ಯ ಬಳಕೆ ಅಥವಾ ವೈದ್ಯರನ್ನು ಸಂಪರ್ಕಿಸದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

 ತಣ್ಣನೆಯ ಪದಾರ್ಥವನ್ನು ಬಿಟ್ಟುಬಿಡಿ

ತಣ್ಣನೆಯ ಪದಾರ್ಥವನ್ನು ಬಿಟ್ಟುಬಿಡಿ

ದಿನಗಳವರೆಗೆ ಶೈತ್ಯೀಕರಿಸಿದ ತಿನ್ನಬಹುದಾದ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ, ತಾಜಾ ಹಣ್ಣುಗಳನ್ನು ಸೇವಿಸಿ, ನಿಮ್ಮ ಮನೆಯೊಳಗೆ ಸೂರ್ಯನ ಬೆಳಕು ಹೆಚ್ಚಾಗಿ ಬರುವಂತೆ ನೋಡಿಕೊಳ್ಳಿ. ನಿಮ್ಮ ಮಾಸ್ಕ್ ಗಳನ್ನು ಪ್ರತಿದಿನ ಬಿಸಿ ನೀರಲ್ಲಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಅಥವಾ ಒಗೆದ ಬಳಿಕ ಒವೆನ್‌ನಲ್ಲಿ ಕೆಲಕಾಲ ಇಟ್ಟು ಒಣಗಿಸಿ. ಇದರಿಂದ ಮಾಸ್ಕ್ ನಲ್ಲಿರಬಹುದಾದ ಸೋಂಕಿನ ಅಂಶಗಳು ಅಥವಾ ವೈರಸ್‌ಗಳು ಸಾಯುತ್ತವೆ ಎಂದು ಹೇಳಿದ್ದಾರೆ.

ಮಧುಮೇಹಿ,ಸೌಮ್ಯ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಏಮ್ಸ್ ಸಲಹೆಮಧುಮೇಹಿ,ಸೌಮ್ಯ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಏಮ್ಸ್ ಸಲಹೆ

 ವೈಟ್‌ ಫಂಗಸ್‌ನಿಂದ ಆತಂಕ

ವೈಟ್‌ ಫಂಗಸ್‌ನಿಂದ ಆತಂಕ

ಒಂದೆಡೆ ಬ್ಲಾಕ್ ಫಂಗಸ್ ಸೋಂಕು ರೋಗಿಗಳನ್ನು ಹೈರಾಣಾಗಿಸುತ್ತಿದ್ದರೆ ಇತ್ತ ಮತ್ತೊಂದೆಡೆ ವೈಟ್ ಫಂಗಸ್ ಸೋಂಕು ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಇದರ ನಡುವೆಯೇ ದೇಶದ ನುರಿತ ವೈದ್ಯರು ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ಸೋಂಕಿನಷ್ಟು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಅವರು, 'ಬಿಳಿ ಶಿಲೀಂಧ್ರ (ಆಸ್ಪರ್ಜಿಲೊಸಿಸ್) ಕಪ್ಪು ಶಿಲೀಂಧ್ರದಷ್ಟು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ.

 ಆರಂಭದಲ್ಲೇ ಸೂಕ್ತ ಚಿಕಿತ್ಸೆ

ಆರಂಭದಲ್ಲೇ ಸೂಕ್ತ ಚಿಕಿತ್ಸೆ

ಈ ವೈಟ್ ಫಂಗಸ್ ಸೋಂಕನ್ನು ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿದರೆ 1 ರಿಂದ 1.5 ತಿಂಗಳೊಳಗೆ ಗುಣಪಡಿಸಬಹುದು. ಆರಂಭಿಕ ರೋಗನಿರ್ಣಯವು ನಿರ್ಣಾಯಕವಾಗಿರುತ್ತದೆ. ಹೀಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಕೋವಿಡ್-19 ಗೆ ಚಿಕಿತ್ಸೆ ಪಡೆಯದಂತೆ ಡಾ.ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

 ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಇದೇ ವೇಳೆ ವೈಟ್ ಫಂಗಸ್ ಕುರಿತು ಒಂದಷ್ಟು ಸಲಹೆ ನೀಡಿರುವ ವೈದ್ಯರು, ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ.. ತುಂಬಾ ದಿನಗಳ ವರೆಗೆ ಶೈತ್ಯೀಕರಿಸಿದ ಅಥವಾ ಫ್ರಿಡ್ಜ್ ನಲ್ಲಿಟ್ಟ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಬೇಡ....ಎಂದು ಹೇಳಿದ್ದಾರೆ. ಈ ಶಿಲೀಂದ್ರಗಳು ಇಕ್ಕಟ್ಟಾದ ಮತ್ತು ಆರ್ದ್ರ ಸ್ಥಳಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

English summary
Lok Nayak Jai Prakash Narayan Hospital's (LNJP) MD, Dr Suresh Kumar, has said that white fungus infection or Aspergillosis is not as dangerous as black fungus or Mucormycosis. Delhi government-run LNJP is one of the country's largest Covid facilities with around 1,500 beds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X