ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್
ನವದೆಹಲಿ, ಫೆಬ್ರವರಿ 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್ ಅನ್ನು ಇಂದು ಮಂಡಿಸಿದ್ದು, ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಲವು ಹೊಸ ಯೋಜನೆಗಳು, ನಿರ್ಮಾಣ ಕಾಮಗಾರಿಗಳಿಗೆ ಭಾರಿ ಮೊತ್ತದ ಅನುದಾನ ನೀಡಲಾಗಿದೆ. ಜೊತೆಗೆ ಕೇಂದ್ರದ ಇಲಾಖೆಗಳಿಗೂ ಅನುದಾನಗಳನ್ನು ನೀಡಲಾಗಿದೆ.

ಯಾವ ಇಲಾಖೆಗೆ ಎಷ್ಟು ಅನುದಾನವನ್ನು ಈ ಹಣಕಾಸು ವರ್ಷದಲ್ಲಿ ನೀಡಲಾಗಿದೆ ಎಂಬ ಅಂಕಿ-ಅಂಶ ಇಲ್ಲಿದೆ.
| ಇಲಾಖೆ | 2020-21 |
| ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ | 50,040 ಕೋಟಿ |
| ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 67,112 ಕೋಟಿ |
| ರೈಲ್ವೆ ಇಲಾಖೆ | 72216 ಕೋಟಿ |
| ರಸ್ತೆ ಸಾರಿಗೆ ಮತ್ತು ಹೆದ್ದಾರಿ | 91,823 ಕೋಟಿ |
| ಮಾನವ ಸಂಪನ್ಮೂಲ ಅಭಿವೃದ್ಧಿ | 99312 ಕೋಟಿ |
| ಗ್ರಾಮೀಣಾಭಿವೃದ್ಧಿ | 1,22,398 ಕೋಟಿ |
| ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ | 1,24,535 ಕೋಟಿ |
| ಕೃಷಿ ಮತ್ತು ರೈತ ಕಲ್ಯಾಣ | 1,42,762 ಕೋಟಿ |
| ಗೃಹ ಇಲಾಖೆ | 1,67,250 ಕೋಟಿ |
| ರಕ್ಷಣಾ ಇಲಾಖೆ | 4,71,378 ಕೋಟಿ |












Click it and Unblock the Notifications