ಕೋರ್ಟ್ ಕಟೆಕಟೆಗೆ ಏರಿದ 'ಪಾದರಕ್ಷೆ' ವಿವಾದ!

By: ವಿಕಾಸ್ ನಂಜಪ್ಪ
Subscribe to Oneindia Kannada

ದೆಹಲಿ, ಜನವರಿ 30: ಚಪ್ಪಲಿ ಯಾವುದು? ಸ್ಯಾಂಡಲ್ ಯಾವುದು? ಹೀಗೊಂದು ವಿವಾದದ ಬಗ್ಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಬೇಕಾಗಿ ಬಂದ ವಿಚಿತ್ರ ಪ್ರಕರಣವೊಂದು ನಡೆದಿದೆ.

ಪಾದದ ಹಿಂದೆ ಪಟ್ಟಿ ಇದ್ದರೆ ಅದು ಸ್ಯಾಂಡಲ್. ಇಲ್ಲದಿದ್ದರೆ ಅದು ಚಪ್ಪಲ್ ಅಂತ ದೆಹಲಿ ಹೈಕೋರ್ಟ್ ಈ ವಿವಾದವನ್ನು ಅಷ್ಟೆ ಸರಳವಾಗಿ ಬಗೆಹರಿಸಿದೆ.[ಕಂಬಳ ನಿಷೇಧ ತೆರವು; ಎರಡು ವಾರ ವಿಚಾರಣೆ ಮುಂದೂಡಿದ ಹೈಕೋರ್ಟ್]

When the Delhi HC decided to define what a sandal is

ಚಪ್ಪಲಿ ಕೋರ್ಟ್ ಮೆಟ್ಟಿಲೇರಿದ್ದೇಕೆ?

ಕೇಂದ್ರ ಸರಕಾರ ರಫ್ತು ಮಾಡುವ ಚಪ್ಪಲಿಗಳ ಮೇಲೆ ಶೇಕಡಾ 5 ಅಬಕಾರಿ ಸುಂಕ ಹಾಕಿತ್ತು. ಅದೇ ಸ್ಯಾಂಡಲ್ಗಳ ಮೇಲೆ ಶೇಕಡಾ 10 ಅಬಕಾರಿ ಸುಂಕ ನಿಗದಿಪಡಿಸದ್ದು ವಿವಾದಕ್ಕೆ ಮೂಲ ಕಾರಣವಾಗಿತ್ತು.

ಸರಕಾರ ಪಾದದ ಹಿಂದೆ ಪಟ್ಟಿ ಇಲ್ಲದಿದ್ದರೆ ಅದು ಚಪ್ಪಲಿ, ಸ್ಯಾಂಡಲ್ ಅಲ್ಲ ಎಂಬ ಆಧಾರದಲ್ಲಿ ಈ ಸುಖ ನಿಗದಿ ಪಡಿಸಿತ್ತು. ಆದರೆ ಈ ನಿಯಮಕ್ಕೆ ಚೆನ್ನೈ ಮೂಲದ ವಿಶಾಲ್ ಇಂಟರ್ನ್ಯಾನಲ್ ಕಂಪೆನಿ ತಗಾದೆ ತೆಗೆದಿತ್ತು.[ಬಾಳಿಗಾ ಹತ್ಯೆ: ನರೇಶ್ ಶೆಣೈಗೆ ಮಂಪರು ಪರೀಕ್ಷೆ ಬೇಡ: ಕೋರ್ಟ್]

ಈ ಹಿಂದೆ 2003ರಲ್ಲಿ 'ಮಹಿಳೆಯರ ಚರ್ಮದ ಸ್ಯಾಂಡಲ್ಸ್' ಎಂದು ಹೇಳಿ ಕಂಪೆನಿಯ ಉತ್ಪನ್ನಗಳಿಗೆ ಶೇಕಡಾ 10ರಷ್ಟು ಅಬಕಾರಿ ಸುಂಕ ವಿಧಿಸಲಾಗಿತ್ತು. ಆದರೆ ಅದು ಚಪ್ಪಲಿ, ಸ್ಯಾಂಡಲ್ ಅಲ್ಲ ಎಂದು ಕಂಪೆನಿ ವಾದಿಸಿತ್ತು.

ಕೊನೆಗೆ ಸರಕಾರ ಮತ್ತು ಕಂಪೆನಿ ನಡುವಿನ ಗಲಾಟೆ ಕೋರ್ಟ್ ಮೆಟ್ಟಿಲೇರಿ ಸರಕಾರಕ್ಕೆ ಜಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Delhi High Court has passed a unique order in which it chose to clarify that a woman's footwear without a back strap is a sandal and not a chappal.
Please Wait while comments are loading...