ವಿಜಯ ಪ್ರತಿ ಯಜ್ಞದ ಫಲ, ಡೊನಾಲ್ಡ್ ಟ್ರಂಪ್ ಜಯಭೇರಿ

Posted By:
Subscribe to Oneindia Kannada

ಮುಂಬೈ, ನವೆಂಬರ್ 09: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಅವರನ್ನು ಸೋಲಿಸಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಜಯಭೇರಿ ಬಾರಿಸಿದ್ದಾರೆ. ಟ್ರಂಪ್ ಜಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ ಎನ್ನಾರೈಗಳು ಇದು ವಿಜಯಪ್ರತಿ ಯಜ್ಞದ ಫಲ ಎಂದು ಸಂಭ್ರಮಿಸಿದ್ದಾರೆ.

ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಗೆಲುವಿಗಾಗಿ ಮುಂಬೈನಲ್ಲಷ್ಟೇ ಅಲ್ಲದೆ ದೇಶದ ವಿವಿಧೆಡೆ ಪೂಜೆ, ಪ್ರಾರ್ಥನೆ, ಯಾಗಗಳನ್ನು ಹಮ್ಮಿಕೊಳ್ಳಲಾಗಿತ್ತು.[ಚಾಣಕ್ಯನ ಭವಿಷ್ಯ: ಅಮೆರಿಕದ ಮುಂದಿನ ಅಧ್ಯಕ್ಷ ಹೆಸರು ಬಹಿರಂಗ]

ಮೀರತ್ ನ ಅಖಿಲ ಭಾರತೀಯ ಹಿಂದೂ ಮಹಾಸಭಾ ವತಿಯಿಂದ ಟ್ರಂಪ್ ವಿಜಯಕ್ಕಾಗಿ ಸೋಮವಾರ ವಿಶೇಷ ಹೋಮ ಹವನವನ್ನು ಹಮ್ಮಿಕೊಳ್ಳಲಾಗಿತ್ತು. [ಟ್ರಂಪ್ ಗೆಲುವಿಗಾಗಿ ಎನ್ನಾರೈಗಳಿಂದ ವಿಶೇಷ ಪೂಜೆ!]

ಗೋಡ್ಸೆಯಂತೆ ಡೊನಾಲ್ಡ್ ಟ್ರಂಪ್: ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಸಿದ್ಧಾಂತಗಳು, ದೂರದೃಷ್ಟಿ ಎಲ್ಲವೂ ನಮ್ಮ ನಾಥುರಾಮ್ ಗೋಡ್ಸೆಯನ್ನು ಹೋಲುತ್ತದೆ. ಇಸ್ಲಾಮ್ ಭಯೋತ್ಪಾದಕರಿಂದ ವಿಶ್ವಕ್ಕೆ ಮುಕ್ತಿ ನೀಡಲು ಟ್ರಂಪ್ ರಿಂದ ಸಾಧ್ಯ. ವಿಶ್ವಶಾಂತಿ ಸ್ಥಾಪಕರಾಗಲು ಟ್ರಂಪ್ ಅಧಿಕಾರಕ್ಕೆ ಬಂದಿರುವುದು ಖುಷಿ ಕೊಟ್ಟಿದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಶರ್ಮ ಹೇಳಿದ್ದಾರೆ.[ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ]

ಮೇ ತಿಂಗಳಿನಿಂದಲೇ ಟ್ರಂಪ್ ಪರ ಪೂಜೆಗಳು ಭಾರತದಲ್ಲಿ ಆರಂಭವಾಗಿತ್ತು. ಹಿಂದೂ ಸೇನಾ ಎಂಬ ಸಂಘಟನೆಯೊಂದು ನಿರಂತರವಾಗಿ ಟ್ರಂಪ್ ಪರ ಪೂಜೆ ಸಲ್ಲಿಸುತ್ತಾ ಬಂದಿತ್ತು.

ಹಿಂದೂಸೇನಾದ ಸ್ಥಾಪಕ ವಿಷ್ಣು ಗುಪ್ತಾ

ಹಿಂದೂಸೇನಾದ ಸ್ಥಾಪಕ ವಿಷ್ಣು ಗುಪ್ತಾ

ಜಗತ್ತನ್ನು ಭಯೋತ್ಪಾದನೆಯಿಂದ ಮುಕ್ತಿಗೊಳಿಸಲು ಟ್ರಂಪ್ ರಿಂದ ಮಾತ್ರ ಸಾಧ್ಯ, ಇಸ್ಲಾಮಿಕ್ ಉಗ್ರರನ್ನು ಟ್ರಂಪ್ ಸದೆಬಡಿಯಲಿದ್ದಾರೆ ಎಂದು ಹಿಂದೂಸೇನಾದ ಸ್ಥಾಪಕ ವಿಷ್ಣು ಗುಪ್ತಾ ಅವರು ಎಪಿ ನ್ಯೂಸ್ ಏಜೆನ್ಸಿಗೆ ಹೇಳಿದ್ದರು.

ಟ್ರಂಪ್ ಅವರಿಗೂ ವಿಷ್ಯ ಮುಟ್ಟಿಸಿ

ಟ್ರಂಪ್ ಅವರಿಗೂ ವಿಷ್ಯ ಮುಟ್ಟಿಸಿ

ಈಗ ಟ್ರಂಪ್ ವಿಜಯಕ್ಕೆ ನಾವು ಮಾಡಿದ ಯಾಗದ ಫಲವೇ ಕಾರಣ ಎಂದು ಅನೇಕ ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ಆಚರಣೆಗೆ ಮುಂದಾಗಿವೆ. ಈ ಬಗ್ಗೆ ಟ್ರಂಪ್ ಅವರಿಗೂ ವಿಷ್ಯ ಮುಟ್ಟಿಸಲು ಎನ್ನಾರೈಗಳಿಗೆ ಕೋರಲಾಗಿದೆ.

ಟ್ರಂಪ್ ಗೆಲುವಿಗಾಗಿ ನಡೆಸಲಾದ ಯಾಗ

ಟ್ರಂಪ್ ಗೆಲುವಿಗಾಗಿ ನಡೆಸಲಾದ ಯಾಗ

ಮುಂಬೈನ ಉತ್ತರ ಭಾಗದ ಕಂಡಿವ್ಲಿಯ ಹೊರ ವಲಯದಲ್ಲಿರುವ ಈ ದೇಗುಲದಲ್ಲಿ ಮೂರು ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಯಾಗದಲ್ಲಿ ಎನ್ನಾರೈಗಳ ಪರವಾಗಿ ಪೂಜೆ ಸಲ್ಲಿಸಲಾಗಿದೆ. ಟ್ರಂಪ್ ಗೆಲುವಿಗಾಗಿ ನಡೆಸಲಾದ ಯಾಗವನ್ನು 'ವಿಜಯ ಪ್ರತಿ ಯಜ್ಞ' ಎಂದು ಕರೆಯಲಾಗಿದೆ. ಶಾಸನ ಪ್ರತಿ ಯಜ್ಞ ನಡೆಸಿ ಟ್ರಂಪ್ ಅಧಿಕಾರ ನಡೆಸಲು ಅನುಕೂಲವಾಗಲಿ ಎಂದು ಹಾರೈಸಲಾಗಿತ್ತು

ಭಯೋತ್ಪಾದನೆ ಸಮಸ್ಯೆಗೆ ಟ್ರಂಪ್ ಉತ್ತರ ನೀಡಲಿದ್ದಾರೆ

ಭಯೋತ್ಪಾದನೆ ಸಮಸ್ಯೆಗೆ ಟ್ರಂಪ್ ಉತ್ತರ ನೀಡಲಿದ್ದಾರೆ

ಭಾರತದಲ್ಲಿರುವ ಭಯೋತ್ಪಾದನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ಅನಿವಾಸಿ ಭಾರತೀಯರಿಗೆ ಟ್ರಂಪ್ ನೀಡಿದ್ದಾರೆ ಹೀಗಾಗಿ ಅವರ ಪರ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ದೇಗುಲದ ಟ್ರಸ್ಟಿ ಹೇಳಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It appears as though the prayers were India for Donald Trump were heard. Several persons over the past couple of months have openly offered prayers for Trump to become the President of the United States of America.
Please Wait while comments are loading...