ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದಿದ್ದ ಚೋ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06 : ಪ್ರಧಾನಿ ನರೇಂದ್ರ ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದು ಪತ್ರಕರ್ತ ಚೋ ರಾಮಸ್ವಾಮಿ ತಮ್ಮ ಕಂಚಿನ ಕಂಠದಲ್ಲಿ ಸಂಬೋಧಿಸಿದಾಗ ಆ ಸಭೆಯಲ್ಲಿ ಟೀಕೆಯ ಬದಲು ಕಿವಿಗಡಚಿಕ್ಕುವ ಚಪ್ಪಾಳೆ, ಎಲ್ಲರ ಮೊಗದಲ್ಲೂ ನಿರಂತರ ನಗು ಮತ್ತು ಸಂತಸದ ಭಾವ.

ಅದು, ಡಿಸೆಂಬರ್ 7ರಂದು ಗತಿಸಿದ ಖ್ಯಾತ ಪತ್ರಕರ್ತ, ವಿಡಂಬನಕಾರ, ರಾಜಕೀಯ ವಿಶ್ಲೇಷಣಕಾರ, ಹಾಸ್ಯ ನಟ, ತುಘಲಕ್ ಪತ್ರಿಕೆಯ ಸಂಪಾದಕ, ಸಿನೆಮಾ ನಿರ್ದೇಶಕ, 82 ವರ್ಷದ ಚೋ ರಾಮಸ್ವಾಮಿ ಅವರ ಸ್ಪೆಷಾಲಿಟಿ. ಅವರು ಏನು ಹೇಳಿದ್ದರೆಂದರೆ...

When Cho called Modi 'The Merchant of death'

ನರೇಂದ್ರ ಮೋದಿ ಅವರು ಭಯೋತ್ಪಾದನೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರಿಗಳ ಅದಕ್ಷತೆ, ಅಧಿಕಾರಿಗಳ ಕರ್ತವ್ಯಲೋಪ, ಬಡತನ, ಕತ್ತಲೆ, ಹತಾಶೆಯನ್ನು ಕೊಲ್ಲುವಂಥ 'ಮರ್ಚಂಟ್ ಆಫ್ ಡೆತ್' ಎಂದು ತಮ್ಮ ಹಾಸ್ಯಪ್ರಜ್ಞೆಯನ್ನು ಮೆರೆದಿದ್ದರು ಚೋ ರಾಮಸ್ವಾಮಿ.

ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದ ಚೋ ರಾಮಸ್ವಾಮಿಯವರನ್ನು ನೆನಪಿಸಿಕೊಂಡಿರುವ ನರೇಂದ್ರ ಮೋದಿ ಅವರು, ಚೋ ರಾಮಸ್ವಾಮಿ ಅವರು ಆಡಿದ್ದ ಮಾತುಗಳ ವಿಡಿಯೋ ಮತ್ತು ಅದಕ್ಕೆ ಪ್ರತಿಯಾಗಿ ತಾವು ನೀಡಿದ್ದ ಪ್ರತಿಕ್ರಿಯೆಯುಳ್ಳ ಎರಡು ವಿಡಿಯೋಗಳನ್ನು ಟ್ವಿಟ್ಟರಲ್ಲಿ ಹಂಚಿಕೊಂಡಿದ್ದಾರೆ. ಚೋ ಅವರ ಮಾತಿನ ಜಾಣ್ಮೆಗೆ ಸರಿಸಾಟಿಯಾಗಿ ಮಾತಾಡಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. [ಖ್ಯಾತ ಅಂಕಣಕಾರ, ಜಯಾ ಹಿತೈಷಿ ಚೋ ರಾಮಸ್ವಾಮಿ ಇನ್ನಿಲ್ಲ]

ಚೋ ರಾಮಸ್ವಾಮಿ ಅವರ 'ತುಘಲಕ್' ಪತ್ರಿಕೆಯ 38ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ 2008ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಭಾಗವಹಿಸಿದ ಸಮಾರಂಭವದು. ಗೋಧ್ರಾ ಹತ್ಯೆ ನಡೆದ ನಂತರ ಮೋದಿ ಅವರನ್ನು ಸೋನಿಯಾ ಗಾಂಧಿ ಅವರು 'ಮೌತ್ ಕಾ ಸೌದಾಗರ್' (ಮರ್ಚಂಟ್ ಆಫ್ ಡೆತ್) ಎಂದು ಕಟುವಾಗಿ ಟೀಕಿಸಿದ್ದರು.

ಆ ಟೀಕೆಗೆ ಪ್ರತಿಯಾಗಿ ಚೋ ರಾಮಸ್ವಾಮಿ ಅವರು, ನರೇಂದ್ರ ಮೋದಿ ಯಾವ ರೀತಿ 'ಮರ್ಚಂಟ್ ಆಫ್ ಡೆತ್' ಆಗಿದ್ದಾರೆ ಎಂದು ತಮ್ಮ ಮಾತಿನ ಮೋಡಿಯಲ್ಲಿ ಪ್ರಚುರಪಡಿಸಿದ್ದರು, ಸೋನಿಯಾ ಗಾಂಧಿ ಅವರಿಗೆ ವ್ಯಂಗ್ಯವಾಗಿಯೇ ಮಾತಿನ ಈಟಿ ಚುಚ್ಚಿದ್ದರು. [ಉತ್ತಮ ಪತ್ರಕರ್ತನಿಗೆ ಸುದ್ದಿಮನೆಯಲ್ಲಿ ಸ್ಥಾನವೊಂದು ಸದಾ ಕಾದಿರುತ್ತದೆ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Modi on Wednesday shared a video on Twitter in memory of renowned journalist Cho Ramaswamy. Cho introduced him as 'Merchant of death', but Prime Minister Modi didn't complain. The video was one inkling of why Cho Ramaswamy was of the best Satirist that the country has seen.
Please Wait while comments are loading...