ಲಷ್ಕರ್ ಇ ತೊಯ್ಬಾ ಹೆಸರಲ್ಲಿ whatsapp ಗ್ರೂಪ್: ವಿದ್ಯಾರ್ಥಿ ಬಂಧನ
ಲಕ್ನೋ, ಫೆಬ್ರವರಿ 26: ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ whatsapp ಗ್ರೂಪ್ ನಿರ್ಮಿಸಿ, ಆ ಗ್ರೂಪಿಗೆ ಹಲವರನ್ನು ಆಮಂತ್ರಿಸಿದ ವಿದ್ಯಾರ್ಥಿಯೋರ್ವನನ್ನು ವಿರುದ್ಧ ಉತ್ತರ ಪ್ರದೇಶದ ಲಕ್ನೋದ ಸೈಬರ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಈ whatsapp ಗ್ರೂಪ್ ಅನ್ನು 9 ನೇ ತರಗತಿಯ ವಿದ್ಯಾರ್ಥಿಯೋರ್ವ ರಚಿಸಿದ್ದು, ಈತ ರಾಜಸ್ಥಾನದ ಭಿಲ್ವಾಡದವನು ಎಂದು ಪೊಲೀಸರು ಗುರುತಿಸಿದ್ದಾರೆ.

ಲಷ್ಕರ್ ಇ ತೊಯ್ಬಾ ಎಂದು whatsapp ಗುಂಪಿಗೆ ಸೇರಲು ತನಗೆ ಆಮಂತ್ರಣ ಬಂದಾಗ ಹೆಸರಿದ ವ್ಯಕ್ತಿಯೊಬ್ಬರು ಪೊಲಿಸರಿಗೆ ದೂರು ನೀಡಿದ್ದರು. ಈ ಮೆಸೇಜಿನ ಜಾಡು ಹಿಡಿದು ಹೊರಟ ಪೊಲೀರಿಗೆ ಈ ಹುಡುಗನೇ whatsapp ಗ್ರೂಪ್ ಸೃಷ್ಟಿಸಿದ್ದು ತಿಳಿದಿದೆ. ಈ ನಿಮಿತ್ತ ಸೈಬರ್ ಕ್ರೈಂ ಪೊಲಿಸರು ದೂರು ದಾಖಲಿಸಿದ್ದಾರೆ.












Click it and Unblock the Notifications