ಹೊಸವರ್ಷದಂದು ಕೈಕೊಟ್ಟ whatsapp: ಶುಭಾಶಯ ರವಾನೆಗೆ ಪರದಾಟ
ನವದೆಹಲಿ, ಜನವರಿ 1: ಹೊಸ ವರ್ಷ (2018) ಕಾಲಿಡುತ್ತಿದ್ದಂತೆಯೇ ಬಹುನೆಚ್ಚಿನ ಮೆಸೆಂಜರ್ app ಆದ ವ್ಹಾಟ್ಸ್ ಆಪ್ ಇದ್ದಕ್ಕಿದ್ದಂತೆ ಕೈಕೊಟ್ಟ ಕೆಲಕಾಲ ಗಾಬರಿ ಮೂಡಿಸಿತ್ತು. ಮಧ್ಯರಾತ್ರಿ 12:10 ರಿಂದ 1:00 ಗಂಟೆಯವರೆಗೆ ವ್ಹಾಟ್ಸ್ ಆಪ್ ನಲ್ಲಿ ಯಾವುದೇ ಮೆಸೇಜ್ ಗಳನ್ನು ಕಳಿಸುವುದಕ್ಕೆ ಸಾಧ್ಯವಾಗದ ಜನರು ಪರಿತಪಿಸುವಂತಾಯಿತು.

ಹೊಸ ವರ್ಷದಂದು ಅತಿಯಾಗಿ ಸಂದೇಶಗಳ ವಿನಿಮಯವಾಗುತ್ತಿದ್ದರಿಂದ ವ್ಹಾಟ್ಸ್ ಆಪ್ ಕ್ರಾಶ್ ಆಗಿತ್ತು ಎಂಬುದು ನಂತರ ತಿಳಿದುಬಂದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಕುರಿತು ಹಲವರು ಟ್ವೀಟ್ ಸಹ ಮಾಡಿದ್ದಾರೆ.
ಸದ್ಯಕ್ಕೆ ವಿಶ್ವದ ಅತ್ಯಂತ ಪ್ರಭಾವಶಾಲಿ ಸಂವಹನ ಮಾಧ್ಯಮ ಎನ್ನಿಸಿರುವ ವ್ಹಾಟ್ಸ್ ಆಪ್, ಹೊಸ ವರ್ಷದಂದೇ ಕೈಕೊಟ್ಟಿದ್ದರಿಂದ ಕೆಲಕಾಲ ಆತಂಕ ತಲೆದೂರಿತ್ತು. ಹಲವರು ತಮ್ಮ ಆಪ್ತರಿಗೆ ಸಂದೇಶ ಕಳಿಸಲಾಗದೆ ಪರದಾಡಬೇಕಾಯ್ತು.












Click it and Unblock the Notifications