ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇನಾಮಿ ಆಸ್ತಿಯೆಂದರೇನು? ಇದ್ದವರ ಗತಿ ಏನಾಗುತ್ತದೆ?

By ವಿಕಾಸ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 26 : ಕಾಳಧನಿಕರನ್ನು ಮಟ್ಟಹಾಕುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರ ಹಳೆ 500 ರುಪಾಯಿ ಮತ್ತು 1000 ರುಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಸರಿಯಾಗಿ ಒಂದು ವಾರದ ಹಿಂದೆ ಮತ್ತೊಂದು ಮಹತ್ವದ ಕಾನೂನನ್ನು ಜಾರಿಗೆ ತಂದಿದೆ.

ಅದು ಬೇನಾಮಿ ಆಸ್ತಿಗಳಿಗೆ ಕಡಿವಾಣ ಹಾಕುವಂಥ ಬೇನಾಮಿ ವಹಿವಾಟು (ತಡೆ) ತಿದ್ದುಪಡಿ ಕಾಯ್ದೆಯನ್ನು ನವೆಂಬರ್ 1ರಿಂದ ಜಾರಿಗೆ ತರಲಾಗಿದೆ. ಕಾಳಧನಿಕರನ್ನು ಹೆಡೆಮುರಿ ಕಟ್ಟುವ ಉದ್ದೇಶದಿಂದ ಮೋದಿ ಸರಕಾರ ಜಾರಿಗೆ ತಂದಿರುವ ಮತ್ತೊಂದು ಮಹತ್ವದ ಹೆಜ್ಜೆಯಿದು. ಬೇನಾಮಿ ಆಸ್ತಿಯನ್ನು ವಶಕ್ಕೆ ಪಡೆಯಬೇಕು ಮತ್ತು ಮುಂದೆ ಆಗದಂತೆ ನೋಡಿಕೊಳ್ಳುವುದು ಇದರ ಹಿಂದಿನ ಉದ್ದೇಶ. [ನಗದು ಅಪಮೌಲ್ಯ : ಒನ್ಇಂಡಿಯಾ ಜನ-ಗಣ-ಮನ ದರ್ಪಣ]

What is the Benami Property Act? Oneindia explainer

ಆಸ್ತಿ ಮಾರುವ ಮತ್ತು ಕೊಳ್ಳುವಿಕೆಯ ಹಿಂದೆ ಭಾಗಿಯಾಗಿರುವವರ ಎಲ್ಲ ವಹಿವಾಟುಗಳು ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೊತೆ ತಳಕುಹಾಕಿರಬೇಕು. ಅಲ್ಲದೆ, ಯಾವುದೇ ಆಸ್ತಿ ಕೊಳ್ಳುವ ಮುನ್ನ ಸಬ್ ರಿಜಿಸ್ಟ್ರಾರ್ ಗಳು ಆದಾಯ ತೆರಿಗೆ ಇಲಾಖೆಗೆ ಮೊದಲೇ ಮಾಹಿತಿ ನೀಡಿರಬೇಕು ಮತ್ತು ಎಲ್ಲ ದಾಖಲೆಗಳು ಡಿಜಿಟಲೈಸ್ ಆಗಿರಬೇಕು.

ಈ ಕಾಯ್ದೆಯಲ್ಲಿ ಇನ್ನೂ ಏನೇನಿದೆ?

ಲೋಕಸಭೆಯಲ್ಲಿ 2015ರ ಮೇ 13ರಂದು ಬೇನಾಮಿ ವಹಿವಾಟು ಮಸೂದೆಯನ್ನು ಮಂಡಿಸಲಾಯಿತು. ಈ ಮಸೂದೆ, ಬೇನಾಮಿ ವಹಿವಾಟಿನ ಅರ್ಥವನ್ನು ತಿದ್ದುಪಡಿ ಮಾಡುವ, ಬೇನಾಮಿ ಆಸ್ತಿಗಳನ್ನು ವಶಕ್ಕೆ ಪಡೆಯುವ ಮತ್ತು ಆಸ್ತಿಗಳಿಗೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ ಮಾಡುವ ಉದ್ದೇಶದಿಂದ ಮಂಡಿಸಲಾಯಿತು.

ಬೇನಾಮಿ ಆಸ್ತಿ ವಹಿವಾಟಿನಲ್ಲಿ, ಆಸ್ತಿ ಕೊಳ್ಳುವ ವಹಿವಾಟಿನಲ್ಲಿ ಭಾಗಿಯಾಗುವ ವ್ಯಕ್ತಿಯೇ ಬೇರೆ, ಅದಕ್ಕೆ ದುಡ್ಡು ಹಾಕುವ ವ್ಯಕ್ತಿಯೇ ಬೇರೆ. ತಿದ್ದುಪಡಿಯ ಪ್ರಕಾರ, ಬೇನಾಮಿ ವಹಿವಾಟಿಗೆ ಈ ಎಲ್ಲ ಅಂಶಗಳು ಸೇರಿಕೊಳ್ಳುತ್ತವೆ ; 1) ವಹಿವಾಟನ್ನು ಕಾಲ್ಪನಿಕ ವ್ಯಕ್ತಿಯ ನಡೆಸುವುದು, 2) ಆಸ್ತಿಯ ಮಾಲಿಕತ್ವ ನಿರಾಕರಣೆಯ ಬಗ್ಗೆ ಮಾಲಿಕನಿಗೆ ಅರಿವಿರುವುದಿಲ್ಲ, 3) ಆಸ್ತಿಗೆ ದುಡ್ಡು ಹಾಕುವವನ ಸುಳಿವು ಎಲ್ಲೂ ಸಿಗುವುದಿಲ್ಲ. [ನ. 28 ಆಕ್ರೋಶ್ ದಿವಸ್ : ನಾಲ್ಕು ಜನ ಏನಂತಾರೆ?]

ಬೇನಾಮಿ ಆಸ್ತಿಯೆಂದರೇನು?

ಬೇನಾಮಿ ಆಸ್ತಿಯೆಂದರೆ ಮತ್ತೊಬ್ಬರ ಹೆಸರಿನಲ್ಲಿ ಕೊಳ್ಳಲಾದ ಆಸ್ತಿ. ಅಂದರೆ, ಆಸ್ತಿಯನ್ನು ಕೊಂಡಿರುವುದು ಒಬ್ಬ, ಆದರೆ ಹೆಸರು ನಮೂದಾಗಿರುವುದು ಮತ್ತೊಬ್ಬರದು. ಆ ಆಸ್ತಿ ಸ್ಥಿರಾಸ್ತಿಯಾಗಿರಬಹುದು, ಬ್ಯಾಂಕ್ ನಲ್ಲಿ ಇಟ್ಟಿರುವ ಫಿಕ್ಸಡ್ ಠೇವಣಿಯೂ ಆಗಿರಬಹುದು. ತಮ್ಮ ಹೆಸರು ಬೆಳಕಿಗೆ ಬರಬಾರದೆಂದು ಇಚ್ಛಿಸುವವರು ಬೇರೆಯವರ ಹೆಸರಿನಲ್ಲಿ ಆಸ್ತಿ ಕೊಂಡಿರುತ್ತಾರೆ.

ಇದು ಇಂದಿನ ವಿದ್ಯಮಾನವಲ್ಲ, ಕಳೆದ 200ಕ್ಕೂ ಹೆಚ್ಚು ವರ್ಷಗಳಿಂದ ಬೇನಾಮಿ ಆಸ್ತಿ ಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಿಂದೆ ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡುವ ಸಂದರ್ಭದಲ್ಲಿ ಇವೆಲ್ಲ ಬೆಳಕಿಗೆ ಬಂದಿದ್ದವು. ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು, ವೈಯಕ್ತಿಯ ಮಣಭಾರವನ್ನು ತಗ್ಗಿಸಿಕೊಳ್ಳಲು ಇಂಥ ದಾರಿ ಹಿಡಿಯುತ್ತಾರೆ. [ನಿಮ್ಮ ಕನಸಿನ ಮನೆ ಹುಡುಕ್ತಿದ್ದೀರಾ, ಅದೀಗ ಇನ್ನೂ ಸುಲಭ!]

ಈಗ ಬೇನಾಮಿ ಆಸ್ತಿಗೆ ಏನಾಗುತ್ತದೆ?

ಕಾಯ್ದೆಯ ಪ್ರಕಾರ, ಬೇನಾಮಿ ಆಸ್ತಿಯ ಮರುನೋಂದಣಿ ಸಾಧ್ಯವಿಲ್ಲ. ಆದಾಯ ಘೋಷಣಾ ಸ್ಕೀಂ ಅಡಿಯಲ್ಲಿ ಬೇನಾಮಿ ಆಸ್ತಿಯನ್ನು ಘೋಷಿಸಿಕೊಳ್ಳುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಆದರೆ, ಕೇಂದ್ರ ಸರಕಾರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.

ಬೇನಾಮಿ ಆಸ್ತಿ ಕೊಂಡು ಸಿಕ್ಕಿಬಿದ್ದವರನ್ನು 1 ವರ್ಷದಿಂದ 7 ವರ್ಷಗಳ ವರೆಗೆ ಜೈಲಿಗಟ್ಟಬಹುದು. ಆಸ್ತಿಯ ಈಗಿನ ಬೆಲೆಯ ಶೇ.25ರಷ್ಟು ದಂಡವನ್ನೂ ಕಟ್ಟಿಸಿಕೊಳ್ಳಬಹುದು. ನಕಲಿ ಮಾಹಿತಿ ಅಥವಾ ದಾಖಲೆ ನೀಡುವವರನ್ನು 6 ತಿಂಗಳಿನಿಂದ 5 ವರ್ಷದವರೆಗೆ ಜೈಲಿಗೆ ಕಳಿಸುವ ಅವಕಾಶ ಈ ಕಾಯ್ದೆಯಲ್ಲಿದೆ. ಅವರಿಗೆ ಆಸ್ತಿಯ ಮೌಲ್ಯದ ಶೇ.10ರಷ್ಟು ದಂಡವನ್ನೂ ವಿಧಿಸುವ ಸಾಧ್ಯತೆ ಇರುತ್ತದೆ.

English summary
What is a Benami property? What does the Benami Transactions (Prohibition) Amendment Act state? What happens to benami property now? Everything explaied in this explainer. Narendra Modi govt brought this act into force just one week before demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X