ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

ಬೆಂಗಳೂರು, ಸೆಪ್ಟೆಂಬರ್ 06 : ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 377ರ ಮೇಲೆ ಮತ್ತು 158 ವರ್ಷಗಳ ಹಿಂದೆ ರೂಪಿಸಲಾದ ಕಾನೂನನ್ನು ಪ್ರಶ್ನಿಸಿ ಹೂಡಲಾದ ಅರ್ಜಿಗೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯ ಏನು ತೀರ್ಪು ನೀಡಲಿದೆ ಎಂಬುದರ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ.

ಭಾರತದಲ್ಲಿ ಇನ್ನೂ ಬ್ರಿಟಿಷರ ಆಡಳಿತ ನಡೆಯುತ್ತಿದ್ದಾಗಲೇ 1861ರಲ್ಲಿ ಲಾರ್ಡ್ ಮೆಕಾಲೆ ನೇತೃತ್ವದಲ್ಲಿ, ಭಾರತದ ಕಾನೂನು ಪ್ರಾಧಿಕಾರ ನೀಡಿದ ಶಿಫಾರಸಿನ ಮೇರೆಗೆ, ಭಾರತೀಯ ದಂಡ ಸಂಹಿತೆಯನ್ನು ಡ್ರಾಫ್ಟ್ ಮಾಡಲಾಯಿತು. ಅದರಲ್ಲಿನ ಸೆಕ್ಷನ್ 377 ಅಸ್ವಾಭಾವಿಕ ಲೈಂಗಿಕತೆಯ ಅಪರಾಧಕ್ಕೆ ಯಾವ ಶಿಕ್ಷೆಯನ್ನು ನೀಡಬೇಕೆಂದು ವಿವರಿಸುತ್ತದೆ.

ಸೆಕ್ಷನ್ 377 ಏನು ಹೇಳುತ್ತದೆ?

ಅಸಹಜ ಅಪರಾಧಗಳು - ಯಾರಾದರೂ ಸ್ವಇಚ್ಛೆಯಿಂದ ನೈಸರ್ಗಿಕ ಕ್ರಿಯೆಗೆ ವಿರುದ್ಧವಾಗಿ ಪುರುಷ, ಸ್ತ್ರೀ ಅಥವಾ ಪ್ರಾಣಿಯೊಡನೆ ದೈಹಿಕ ಸಂಭೋಗ ನಡೆಸುತ್ತಾರೋ ಅವರು 10 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ. ಈ ಕಾನೂನಿನ ವಿರುದ್ಧವೇ ಈಗ ಸಮರ ಆರಂಭವಾಗಿ, ತೀರ್ಪು ನೀಡುವ ಹಂತಕ್ಕೆ ಬಂದಿದೆ.

What is section 377 under Indian Penal Code?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ಬಲವಂತದ ದೈಹಿಕ ಸಂಭೋಗಕ್ಕೆ ಸಂಬಂಧಿಸಿದ್ದರೆ, ಸೆಕ್ಷನ್ 377 ಸ್ವಇಚ್ಛೆಯಿದ್ದರೂ ನಿಸರ್ಗಕ್ಕೆ ಅಥವಾ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ದೈಹಿಕ ಸಂಭೋಗದ ಬಗ್ಗೆ ಹೇಳುತ್ತದೆ.

ಆದರೆ, ಈ 377 ಸೆಕ್ಷನ್ ಪುರುಷ, ಸ್ತ್ರೀ ಸಲಿಂಗ ಕಾಮಿಗಳು, ಲೈಂಗಿಕ ಅಲ್ಪಸಂಖ್ಯಾತರು, ದ್ವಿಲಿಂಗಿಗಳ ಸಮುದಾಯದ ಬಗ್ಗೆಯಾಗಲಿ, ಅವರ ಲೈಂಗಿಕ ಕ್ರಿಯೆಗಳ ಬಗ್ಗೆಯಾಗಲು ನೇರವಾಗಿ ಏನನ್ನೂ ಹೇಳುವುದಿಲ್ಲ.

ಸಲಿಂಗ ಕಾಮ ಮಾತ್ರ ಅಪರಾಧವಲ್ಲ

ಈ ಕಾನೂನಿನಡಿಯಲ್ಲಿ ಸಲಿಂಗ ಕಾಮಿಗಳು ಮಾತ್ರವಲ್ಲ ಭಿನ್ನಲಿಂಗೀಯ ಕಾಮ ಕೂಡ ಅಪರಾಧ ಎಂದು ಹೇಳುತ್ತದೆ. ಇಂಥ ಪ್ರಕೃತಿಗೆ ವಿರುದ್ಧವಾದ ಸಂಭೋಗ ಸ್ವಇಚ್ಛೆಯಿಂದ ನಡೆಸಿದರೆ ಕೂಡ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ ಮತ್ತು ಅಪರಾಧವಾಗುತ್ತದೆ.

ಶಿಶ್ನ ಮತ್ತು ಯೋನಿ ಕೂಡಿಕೆಯ ಸಂಭೋಗವನ್ನು ಹೊರತುಪಡಿಸಿ ಮತ್ತಾವುದೇ ಸಂಭೋಗವಾಗಲಿ, ಗುದ ಸಂಭೋಗ, ಮೌಖಿಕ ಸಂಭೋಗ ಕೂಡ, ಅದು ಸ್ವಇಚ್ಛೆಯಿಂದ ಮಾಡಿದ್ದರೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅಡಿಯಲ್ಲಿ ಅಪರಾಧವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+