ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟ ಕಾಲದ ಆರ್ಥಿಕ ಮುಗ್ಗಟ್ಟಿಗೆ 'ಫೋರ್ಸ್ ಮಜೂರ್' ಮದ್ದು

|
Google Oneindia Kannada News

ನವದೆಹಲಿ, ಜುಲೈ 17: ಇಡೀ ರಾಷ್ಟ್ರವೇ ಕೊರೊನಾ ಸೋಂಕಿನಿಂದ ಬಳಲುತ್ತಿದೆ.ಹೀಗಾಗಿ ಸಾಕಷ್ಟು ನಿರ್ಬಂಧಗಳನ್ನು ಕೂಡ ಹೇರಲಾಗಿದೆ. ವ್ಯವಹಾರಗಳು ನಷ್ಟವನ್ನು ಎದುರಿಸುತ್ತಿವೆ.

ಲಾಕ್‌ಡೌನ್ ಸಂದರ್ಭದಲ್ಲಿ ವ್ಯವಹಾರಗಳು ನಷ್ಟವನ್ನು ಎದುರಿಸುತ್ತಿವೆ. ಹಾಗೆಯೇ ಹಣಕಾಸಿ ಕೊರತೆಯಿಂದಾಗಿ ಬಾಡಿಗೆದಾರರು ಬಾಡಿಗೆಯನ್ನೂ ಕೂಡ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ.

1972ರ ಭಾರತೀಯ ಗುತ್ತಿಗೆ ಕಾಯ್ದೆಯ ಸೆಕ್ಷನ್ 37ರ ಪ್ರಕಾರ ತಾವು ನೀಡಿದ್ದ ಕೆಲಸವನ್ನು ಮಾಡಲಾಗದಿದ್ದರೂ ಕೂಡ ಅವರು ನೀಡಿದ್ದ ಭರವಸೆಯನ್ನು ಪೂರೈಸಬೇಕು.
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್ ಅವರು 'ವಾಣಿಜ್ಯ ಮತ್ತು ಹಿಡುವಳಿ ವಿವಾದಗಳಲ್ಲಿ ಫೋರ್ಸ್ ಮಜೂರ್' ಎಂಬ ವಿಷಚಯದ ಕುರಿತು ವಕೀಲ ಜೆ ರವೀಂದ್ರನ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

What Is Force Majeure and Importance During A Pandemic Explained By Justice Pratibha Singh

'ಫೋರ್ಸ್ ಮಜೂರ್ 'ಎಂಬುದು ಫ್ರೆಂಚ್‌ನಿಂದ ಬಂದಂತಹ ಶಬ್ದ ಅಂದರೆ ಉನ್ನತ ಶಕ್ತಿ ಎಂದು ಅರ್ಥ. ಬ್ಲ್ಯಾಕ್ ಲಾ ನಿಘಂಟು ಇದನ್ನು ಘಟನೆ ಅಥವಾ ಪರಿಣಾಮ ಎಂದು ವ್ಯಾಖ್ಯಾನಿಸುತ್ತದೆ. ಅದನ್ನು ನಿಯಂತ್ರಿಸಲಾಗುವುದಿಲ್ಲ. ಈ ಪದವು ಪ್ರವಾಹದಂತಹ ಪ್ರಕೃತಿಯ ವಿಕೋಪಗಳಿಗೂ ಸಂಬಂಧಿಸುತ್ತದೆ. ಯುದ್ಧ ಮತ್ತು ಮುಷ್ಕರ ಸಂದರ್ಭದಲ್ಲೂ ಈ ಪದ ಬಳಕೆಯಾಗುತ್ತದೆ.

ಈ ಸಾಂಕ್ರಾಮಿ ರೋಗದಿಂದ ಕಾನೂನು ವೃತ್ತಿಯು ಸಾಕಷ್ಟು ಬದಲಾವಣೆಗಳನ್ನು ಕಂಡುಕೊಂಡಿದೆ ಎಂದು ನ್ಯಾ. ಸಿಂಗ್ ಹೇಳಿದರು. ಕೆಲವು ಇಚ್ಛಾಶಕ್ತಿಯನ್ನು ರೂಪಿಸುವ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ಜನರು ಹೆಚ್ಚು ಆತ್ಮಾವಲೋಕನವನ್ನು ಮಾಡಿಕೊಳ್ಳುವುದನ್ನು ನಾವು ನೋಡುತ್ತೇವೆ. ಅವರ ಕುಟುಂಬದವರ ಜೊತೆ ಕಳೆದ ಸಮಯವನ್ನೂ ಕೂಡ ಮೌಲ್ಯಮಾಪನ ಮಾಡುತ್ತೇವೆ ಎಂದರು.

ಸಾಂಕ್ರಾಮಿಕ ರೋಗದ ಕೆಡುಕನ್ನು ಮಾತ್ರ ಹೇಳುವುದು ಬೇಡ ಇದರಿಂದಾಗಿ ನಮ್ಮ ಜೀವನದ ಬಗೆಗೆ ಹೆಚ್ಚು ಸಮಯ ಕೊಟ್ಟಿದ್ದೇವೆ ಎಂಬುದನ್ನು ಮರೆಯಬಾರದು.
ಈ ಸಂದರ್ಭದಲ್ಲಿ ಫೋರ್ಸ್ ಮಜೂರ್ ಪ್ರಮುಖಪಾತ್ರ ವಹಿಸುತ್ತದೆ.

ಬಾಡಿಗೆ ಪಾವತಿ ಮಾಡಬೇಕೇ ಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಕಾಲದಲ್ಲಿ ಹಿಡುವಳಿದಾರ ಮತ್ತು ಭೂಮಾಲಿಕರು ಕುಳಿತು ಮಾತನಾಡಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ವಾಣಿಜ್ಯ ಒಪ್ಪಂದಗಳಲ್ಲಿ ದೊಡ್ಡ ಸಮಸ್ಯೆಗಳಿವೆ ಮತ್ತು ಅಂತಹ ಸಮಯದಲ್ಲಿ ಫೋರ್ಸ್ ಮಜೂರ್ ದೊಡ್ಡ ಪಾತ್ರವಹಿಸುತ್ತದೆ ಎಂದರು.

ಮಾಲ್‌ಗಳಲ್ಲಿ ಅನೇಕರು ಗುತ್ತಿಗೆಗೆ ಅಂಗಡಿಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಬಾಡಿಗೆ ಪಾವತಿ ಮಾಡುವ ಯಾವುದೇ ಗ್ಯಾರಂಟಿಯಿಲ್ಲ.ಒಪ್ಪಂದದಲ್ಲಿ ಫೋರ್ಸ್ ಮಜೂರ್ ಷರತ್ತು ಇಲ್ಲದಿದ್ದರೆ ಮಾಲ್ ಮಾಲೀಕರು ಮತ್ತು ಬಾಡಿಗೆದಾರರು ಮಾತುಕತೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶರು ಹೇಳಿದರು.

ಫೋರ್ಸ್ ಮಜೂರ್ ಷರತ್ತು ಇಲ್ಲದಿದ್ದರೆ, ನ್ಯಾಯಾಲಯಗಳು ಹೆಜ್ಜೆ ಹಾಕಬಹುದೇ? ಹಿಡುವಳಿಯು ಮೌಖಿಕ ಒಪ್ಪಂದವನ್ನು ಆಧರಿಸಿದ್ದರೆ, ಅವರು ದೂರ ಹೋಗಬಹುದು. ಆದರೆ ಬಾಡಿಗೆದಾರರು ಎಲ್ಲಿಯವರೆಗೆ ಬಾಡಿಗೆಯಲ್ಲಿರುತ್ತಾರೋ ಅಲ್ಲಿಯವರೆಗೆ ಪಾವತಿ ಮಾಡಬೇಕಾಗುತ್ತದೆ.
ಒಪ್ಪಂದದ ಪ್ರಕಾರ ನಿಬಂಧನೆಯನ್ನೂ ನೋಡಬೇಕಾಗಿದೆ. ಭಾರತೀಯ ಗುತ್ತಿಗೆ ಕಾಯ್ದೆಯ ಸೆಕ್ಷನ್ 32 ಪ್ರಕಾರ ಅಸಾಧ್ಯ ಅಥವಾ ಆಕಸ್ಮಿಕ ಸಂದರ್ಭಗಳು ಸಂಭವಿಸಿದರೆ ಮಾತ್ರ ಫೋರ್ಸ್ ಮಜೂರ್ ಜಾರಿಗೆ ತರಲಾಗುತ್ತದೆ.

English summary
As the entire nation continues to battle this deadly pandemic called COVID-19, everything remains restricted. Businesses are facing losses, tenants are unable to pay rents owing to lockdowns and finances becoming scarce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X