• search
For Quick Alerts
ALLOW NOTIFICATIONS  
For Daily Alerts

  ಇದೇನಿದು? ಚುನಾವಣೆಯೋ, ಅಮಾನವೀಯತೆಯ ಪರಾಕಾಷ್ಠೆಯೋ..?

  |

  ಕೋಲ್ಕತ್ತಾ, ಮೇ 14: ಪಶ್ಚಿಮ ಬಂಗಾಳದ ಮಟ್ಟಿಗೆ ಚುನಾವಣೆಯ ದಿನವೆಂದರೆ ಅದೊಂದು ಕರಾಳ ಯುಗದಂತೆ! ವಿಧಾನಸಭೆ ಚುನಾವಣೆಯಿರಲಿ, ಕೊನೆಗೆ ಪಂಚಾಯತ್ ಚುನಾವಣೆಯೇ ಇರಲಿ ಬಾಂಬಿನ ಸದ್ದಿಲ್ಲದೆ ಅದು ಸಂಪನ್ನವಾಗುವುದೇ ಇಲ್ಲ!

  ಇಂದು(ಮೇ 14) ಬೆಳಿಗ್ಗೆಯಿಂದ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಮತದಾನ ಆರಂಭವಾಗಿದೆ. ಒಟ್ಟು 621 ಜಿಲ್ಲಾ ಪಂಚಾಯಿತಿ, 6157 ಪಂಚಾಯತ್ ಸಮಿತಿ, 31827 ಗ್ರಾಮಪಂಚಾಯಿತಿಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವದಾಗಿನಿಂದಲೂ ಒಂದಿಲ್ಲೊಂದು ಕಡೆ ಹಿಂಸಾಚಾರದ ಘಟನೆಗಳು ವರದಿಯಾಗುತ್ತಲೇ ಇವೆ.

  ಚುನಾವಣೆಯ ಕಾರಣದಿಂದ ಪಶ್ಚಿಮ ಬಂಗಾಳ ಪೊಲೀಸ್ ಪಡೆಯ 46000 ಸಿಬ್ಬಂದಿ, ಕೋಲ್ಕತ್ತಾ ಪೊಲೀಸ್ ಪಡೆಯ 12000 ಸಿಬ್ಬಂದಿ ಮತ್ತು 1500 ಭದ್ರತಾ ಸಿಬ್ಬಂದಿಗಳನ್ನು ನೇಮಿಸಿ, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದರೂ ಹಿಂಸಾಚಾರ ನಡೆಯುತ್ತಲೇ ಇದೆ.

  ಪ.ಬಂಗಾಳ ಪಂಚಾಯಿತಿ ಚುನಾವಣೆ: ಭುಗಿಲೆದ್ದ ಹಿಂಸಾಚಾರ

  ಕೆಲವೆಡೆ ಸ್ಫೋಟಕಗಳನ್ನು ಎಸೆದ ಸುದ್ದಿ ಕೇಳಿಬರುತ್ತಿದೆ. ಈ ಹಿಂಸಾಚಾರದಲ್ಲಿ 6 ಜನ ಮೃತರಾಗಿದ್ದಾರೆಂದು ಕೆಲವು ವರದಿಗಳು ತಿಳಿಸಿವೆ. ಮೇ 12 ರಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಿತಾರೂ ಎಲ್ಲೂ ಹಿಂಸಾಚಾರದ, ಅಹಿತಕರ ಘಟನೆ ವರದಿಯಾಗಲಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಯಲ್ಲೂ ಹಿಂಸಾಚಾರ! ಈ ಹಿಂಸಾಚಾರದ ವಿಡಿಯೋ, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಹಿಂಸಾಚಾರವನ್ನು ಟ್ವಿಟ್ಟಿಗರು ಕಟುಶಬ್ದಗಳಿಂದ ಖಂಡಿಸಿದ್ದಾರೆ.

  ಇದು ಪ್ರಜಾಪ್ರಭುತ್ವದ ಕೊಲೆ

  ಯಾರದೋ ಮೇಲಿನ ದ್ವೇಷಕ್ಕಾಗಿ ಟಿಎಂಸಿ ಸದಸ್ಯರು ಗರ್ಭಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ, ಪೊಲೀಸರ ಎದುರಲ್ಲೇ ಮತಗಟ್ಟೆಗಳನ್ನು ಹೈಜಾಕ್ ಮಾಡಲಾಗುತ್ತಿದೆ, ಮತದಾರರನ್ನು ಆಯುಧಗಳಿಂದ ಹೊಡೆಯಲಾಗುತ್ತಿದೆ, ಮಾಧ್ಯಮಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.

  ಹಿಂದುಗಳ ಮೇಲೆ ಜಜಿಯಾ ಟ್ಯಾಕ್ಸ್ ಹೇರುವುದೊಂದೇ ದಾರಿ!

  ಬಂಗಾಳದ ಗಲ್ಲಿ ಗಲ್ಲಿಗಳಲ್ಲೂ ಹಿಂಸೆಯ ಸದ್ದು ಕೇಳುತ್ತಿದೆ. ಪಶ್ಚಿಮಬಂಗಾಳದಲ್ಲಿ ಟಿಎಂಸಿಯವರು ಪ್ರಜಾಪ್ರಭುತ್ವವನ್ನು ಬಿಕರಿಗಿಟ್ಟಿದ್ದಾರೆ! ಜಜಿಯಾ ಟ್ಯಾಕ್ಸ್ ಅನ್ನು ಹಿಂದುಗಳ ಮೇಲೆ ಹೇರುವುದೊಂದೇ ಈಗ ಮಮತಾ ಬ್ಯಾನರ್ಜಿಯವರಿಗಿರುವ ದಾರಿ! ರಕ್ತದ ಮತಗಟ್ಟೆಗಳು! ಎಂದು ಆವೇಶಭರಿತ ಟ್ವೀಟ್ ಮಾಡಿದ್ದಾರೆ ಅಂಶುಲ್ ಚೌಧರಿ.

  ನಾಚಿಕೆಗೇಡು

  ಒಂದು ರಾಜ್ಯದ ಮುಖ್ಯಮಂತ್ರಿಯೇ ಮತದಾರರನ್ನು, ವಿರೋಧಿ ಅಭ್ಯರ್ಥಿಯನ್ನು ಥಳಿಸಲು ಪ್ರಚೋದಿಸುವುದು ನಿಜಕ್ಕೂ ನಾಚಿಕೆಗೇಡು. ಪಂಚಾಯಿತಿ ಚುನಾವಣೆಯಲ್ಲೇ ಹೀಗಾದರೆ ಇನ್ನು ವಿಧಾನಸಭೆ, ಲೋಕಸಭೆ ಚುನಾವಣೆಗಳ ಕತೆ ಏನು? ಈ ರಾಜಾರೋಷದ ಗೂಂಡಾಗಿರಿಗೆ ಏನೆನ್ನಬೇಕು? ಎಂದು ಪ್ರಶ್ನಿಸಿದ್ದಾರೆ ಅರ್ಜುನ್.

  ಪಂಚಾಯಿತಿ ಚುನಾವಣೆಯಲ್ಲಿ ನಡೆಯುತ್ತಿರುವ ಹಿಂಸೆ

  ಪಂಚಾಯಿತಿ ಚುನಾವಣೆಯಲ್ಲಿ ನಡೆಯುತ್ತಿರುವ ಹಿಂಸೆ ಜಿಹಾದಿ ಟಿಎಂಸಿ ಕಾರ್ಯಕರ್ತರ ಭಯೋತ್ಪಾದನೆ ಮತ್ತು ಪ್ರಜಾಪ್ರಭುತ್ವದ ವೈಫಲ್ಯಕ್ಕೆ ಸಾಕ್ಷಿ. ಇಷ್ಟೆಲ್ಲ ಆದರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಒಂದೇ ಒಂದು ಹೇಳಿಕೆಯಿಲ್ಲ. ಈ ಭಯೋತ್ಪಾದನೆ ಪಶ್ಚಿಮ ಬಂಗಾಳದಿಂದ ಯಾವಾಗ ಕೊನೆಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ ಜೆಪಿ ಸಿಂಗ್.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Violence took place in West Bengal due to Panchayat Elections, which is taking place on May 14th.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more