Sexual Harrassment Case: ಪೊಲೀಸರು ಸಮನ್ಸ್ ನೀಡಿದರೆ ನಿರ್ಲಕ್ಷಿಸಿ: ರಾಜ್ಯಪಾಲರ ಸೂಚನೆ
ಬೆಂಗಳೂರು, ಮೇ 06: ರಾಜಭವನದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ರಾಜ್ಯಪಾಲರೊಬ್ಬರು ಪೊಲೀಸ್ ಪ್ರಕರಣ ಕುರಿತು ಸಮನ್ಸ್ ನೀಡಿದರೆ ಅದನ್ನು ನಿರ್ಲಕ್ಷಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಕಾನೂನಿನ ಪಾಠ ಮಾಡುವವರ ನಡೆ, ನಿರ್ಧಾರಗಳು ಚರ್ಚೆಗೆ ಗ್ರಾಸವಾಗಿವೆ.
2019ರಿಂದ ರಾಜಭವನದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಮೇಲೆ ರಾಜ್ಯಪಾಲರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದರು. 'ಪದೋನ್ನತಿ' ವಿಚಾರವಾಗಿ ತಮ್ಮ ಜೊತೆ ರಾಜ್ಯಪಾಲರು ಚರ್ಚಿಸುವ ವೇಳೆ ರೀತಿಯ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಕ್ರಿಮಿನಲ್ ಮೊಕದ್ದಮೆಗೆ ಅವಕಾಶ ಇಲ್ಲ
ಈ ರೀತಿ ಆರೋಪ ಕೇಳಿ ಬಂದಿರುವುದು ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್ ಬೋಸ್ ವಿರುದ್ಧ. ಅನುಚಿತವಾಗಿ ಈ ಮಹಿಳೆಯ ಜೊತೆ ನಡೆದುಕೊಂಡಿದ್ದಾರೆ. ತಮ್ಮನ್ನು ಸ್ಪರ್ಶಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.
ಇದೀಗ ಈ ಪ್ರಕರಣ ಸಂಬಂಧ ರಾಜ್ಯಪಾಲ ಆನಂದ್ ಬೋಸ್ ಅವರು ತಮ್ಮ ಸಿಬ್ಬಂದಿಗೆ ಸಮನ್ಸ್ ನೀಡಿದರೆ ಅದನ್ನು ನಿರ್ಲಕ್ಷಿಸುವಂತೆ ಸೂಚಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕ್ರಿಮಿನಲ್ ಕೇಸ್ ಹೂಡಲು ಬರುವುದಿಲ್ಲ ಎಂದು ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ.

ರಾಜಭವನ ಸಿಬ್ಬಂದಿಗೆ ಪತ್ರ ಬರೆದ ಬೋಸ್
ರಾಜಭವನದ ಸಿಬ್ಬಂದಿಗೆ ಇದೇ ವಿಚಾರವಾಗಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಆರೋಪ ವಿಚಾರವಾಗಿ ಪೊಲೀಸರು ರಾಜಭವನಕ್ಕೆ ಬರಬಹುದು. ಬಂದು ಇಲ್ಲಿ ಸಿಬ್ಬಂದಿ ವಿಚಾರಣೆ ನಡೆಸಬಹದು. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬಹುದು ಎಂದು ಮಾಧ್ಯಮಗಳು ವರದಿ ಬಿತ್ತರಿಸಿವೆ. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಅವರು ಪತ್ರ ಬರೆದಿದ್ದಾರೆ.
ವಿಚಾರಣಾ ಪ್ರಕ್ರಿಯೆಯಿಂದ ರಾಜ್ಯಪಾಲರಿಗೆ ವಿನಾಯಿತಿ
ರಾಜ್ಯಪಾಲರೊಬ್ಬರು ಅಧಿಕಾರಿದಲ್ಲಿದ್ದಾಗ ಸಾಂವಿಧಾನಿಕ 361ನೇ ವಿಧಿಯಡಿ ರಾಜ್ಯಪಾಲರ ವಿರುದ್ಧ ಯಾವುದೇ ಅಪರಾಧ ವಿಚಾರಣಾ ಪ್ರಕ್ರಿಯೆ, ಇಲ್ಲವೇ ಕ್ರಿಮಿನಲ್ ಮೊಕದ್ದಮೆ ಹೂಡಲು ಬರುವುದಿಲ್ಲ. ಇದೆಲ್ಲ ಪ್ರಕ್ರಿಯೆಗಳಿಂದ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ವಿನಾಯಿತಿ ಸಿಗಲಿದೆ.
ಅಧಿಕಾರ ದುರ್ಬಳಕೆ: ಸಾರ್ವಜನಿಕರ ಆಕ್ರೋಶ
ಇದೆಲ್ಲ ತಿಳಿಸಿರುವ ರಾಜ್ಯಪಾಲ ಆನಂದ್ ಬೋಸ್ ಅವರು, ತಮ್ಮ ಸಿಬ್ಬಂದಿಗೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ, ಆನ್‌ಲೈನ್, ಆಪ್‌ಲೈನ್ ಮೂಲಕ ಪೊಲೀಸರಿಗೆ, ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದಂತೆ ಸೂಚನೆ ನೀಡಿದ್ದಾರೆ. ಇದು ಅಧಿಕಾರದ ದುರ್ಬಳಕೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಹಿತಿಗಾಗಿ ತಡಕಾಡುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications