ಟಿಎಂಸಿ ಶಾಸಕನ ಮನೆಯಲ್ಲಿ ಬಾಂಬ್ ಸ್ಫೋಟ
ಕೋಲ್ಕತ್ತಾ, ಮೇ.24: ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಬುರೋ ಹಂಸ್ಡಾ ಮನೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದೆ. ಸ್ಫೋಟದಲ್ಲಿ ಶಾಸಕ ಬುರೋ ಅವರ ಪತ್ನಿ ಸಾವನ್ನಪ್ಪಿರುವ ಸುದ್ದಿ ಬಂದಿದೆ. ಶಾಸಕ ಬುರೋಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಮುಖಂಡ ಬುರೋ ಹಂಸ್ಡಾ ಅವರ ಬಿರ್ ಬುಮ್ ಜಿಲ್ಲೆಯಲ್ಲಿರುವ ಮನೆಯಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ನಾಡಬಾಂಬ್ ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ.

ಭಾನುವಾರ ಬೆಳಗ್ಗೆ ಬುರೋ ಮನೆಯಲ್ಲಿದ್ದಾಗಲೇ ನಾಡಬಾಂಬ್ ಸ್ಫೋಟಗೊಂಡಿದೆ. ಶಾಸಕ ಬುರೋ ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುರೋ ಹಾಗೂ ಅವರ ಸಹಾಯಕರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬುರೋ ಅವರಿರುವ ತಾಣ ನಕ್ಸಲ್ ಪೀಡಿತ ಪ್ರದೇಶ ಹಾಗೂ ಬಾಂಗ್ಲಾ ಉಗ್ರರ ಟಾರ್ಗೆಟ್ ಆಗಿದೆ. ಹೀಗಾಗಿ ಸ್ಫೋಟದ ಬಗ್ಗೆ ತಿಳಿದ ತಕ್ಷಣ ಭಾರಿ ಪ್ರಮಾಣದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ.












Click it and Unblock the Notifications