'ಬಜೆಟ್‌ನಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಇನ್ನೂ ಹೆಚ್ಚು ಅನುದಾನ ಸಿಗಬೇಕಿತ್ತು'

ನವದೆಹಲಿ,ಫೆಬ್ರವರಿ 02: ನಿನ್ನೆಯಷ್ಟೇ ಮಂಡಿಸಲಾಗಿರುವ ಕೇಂದ್ರ ಬಜೆಟ್‌ನಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಮತ್ತಷ್ಟು ಅನುದಾನ ಮೀಸಲಿಡಬಹುದಿತ್ತು ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ.

ಕೊರೊನಾ ಸಾಂಕ್ರಾಮಿಕ ರೋಗ ವಿಮಾನಯಾನ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಸಾಕಷ್ಟು ನಷ್ಟವನ್ನು ಎದುರಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವುದರಿಂದ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಿದ್ದೆವು ವಿಮಾನಯಾನ ಸಂಸ್ಥೆಗಳು ಹೇಳಿವೆ.

ಟರ್ಬೈನ್ ಇಂಧನವನ್ನು ಜಿಎಸ್'ಟಿ ಅಡಿಯಲ್ಲಿ ತರುವಂತೆ ಹಾಗೂ ಅಬಕಾರಿ ಸುಂಕವನ್ನು ಕಡಿತಗೊಳಿಸುವುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಅದಾವುದನ್ನೂ ಮಾಡಲಾಗಿಲ್ಲ ಎಂದು ಭಾರತದ ಮೊದಲ ಏವಿಯೇಷನ್ ಡಾಟಾ ಕನ್ಸಲ್ಟಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ತೋಮರ್ ಅವರು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಹೋಟೆಲ್ ಉದ್ಯಮದ ಬಳಿಕ ವಿಮಾನಯಾನ ಸಂಸ್ಥೆಗಳು ಸಾಕಷ್ಟು ನಷ್ಟವನ್ನು ಅನುಭವಿಸಿವೆ. ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.

ವಿದೇಶಿ ಕಂಪನಿಗಳಿಂದ ವಿಮಾನ ಗುತ್ತಿಗೆ

ವಿದೇಶಿ ಕಂಪನಿಗಳಿಂದ ವಿಮಾನ ಗುತ್ತಿಗೆ

ಭಾರತೀಯ ವಿಮಾನಯಾನ ಉದ್ಯಮದಲ್ಲಿ ಶೇ.90ರಷ್ಟು ವಿಮಾನಗಳನ್ನು ವಿದೇಶಿ ಕಂಪನಿಗಳಿಂದ ಗುತ್ತಿಗೆ ಪಡೆಯಲಾಗುತ್ತದೆ. ವಿದೇಶಿ ಕಂಪನಿಗಳಿಗೆ ಡಾಲರ್ ಮೂಲಕವೇ ಹಣವನ್ನು ಪಾವತಿ ಮಾಡಲಾಗುತ್ತದೆ. ಬಾಡಿಗೆ ಹಣದ ಮೇಲಿನ ತೆರಿಗೆ ವಿನಾಯಿತಿ ಇಡೀ ವಿಮಾನಯಾನ ಉದ್ಯಮಕ್ಕೆ ಸಹಾಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಈ ಘೋಷಣೆ ಇಂಡಿಗೋ ಅಥವಾ ಸ್ಪೈಸ್ ಜೆಟ್ ಗಳಿಗೆ ಲಾಭ ನೀಡಬಹುದಷ್ಟೇ ಎಂದು ವಿಮಾನಯಾನ ಕ್ಷೇತ್ರದ ತಜ್ಞ ಕ್ಯಾಪ್ಟೆನ್ ಮೋಹನ್ ರಂಗನಾಥ್ ಅವರು ಹೇಳಿದ್ದಾರೆ.

ಸಾಲದ ಸುಳಿ

ಸಾಲದ ಸುಳಿ

ನಿನ್ನೆಯಷ್ಟೇ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾಲದ ಸುಳಿಯಲ್ಲಿ ಸಿಲುಕಿರುವ ರಾಷ್ಟ್ರೀಯ ಸಂಸ್ಥೆಯ ಆರ್ಥಿಕ ಪುನಶ್ಚೇತನ ಭಾಗವಾಗಿ ವಿಶೇಷ ಉದ್ದೇಶದ ವಾಹಕ ಸ್ಥಾಪನೆಗೆ 2.268 ಕೋಟಿ ರೂ. ಹಂಚಿಕೆ ಮಾಡಿರುವುದಾಗಿ ಹೇಳಿದ್ದರು.

ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 3224 ಕೋಟಿ ಮೀಸಲು

ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 3224 ಕೋಟಿ ಮೀಸಲು

2021-22ರ ಕೇಂದ್ರ ಬಜೆಟ್‌ನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 3,224 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ 4,131 ಕೋಟಿ ರೂ.ಗಳಲ್ಲಿ ಶೇ. 22 ಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷ 2020-21ನೇ ಸಾಲಿಗಾಗಿ ವಿಮಾನಯಾನ ಸಚಿವಾಲಯಕ್ಕೆ ರೂ.3797 ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಪರಿಷ್ಕೃತ ಅಂದಾಜಿನಂತೆ ರೂ.4,131 ಕೋಟಿಗೆ ಅದನ್ನು ಹೆಚ್ಚಿಸಲಾಗಿದೆ. 2021-22ರ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್‌ಗೆ ಪ್ರಸಕ್ತ ಹಣಕಾಸು ವರ್ಷಕ್ಕಿಂತ ಶೇ.28 ರಷ್ಟು ಕಡಿಮೆ ಅನುದಾನ ನೀಡಲಾಗಿದೆ.

ಉಡಾನ್ ಯೋಜನೆ

ಉಡಾನ್ ಯೋಜನೆ

ಉಡಾನ್ ಯೋಜನೆಯಡಿ, ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವಿಮಾನ ನಿಲ್ದಾಣ ಆಪರೇಟರ್ ಗಳು ಆಯ್ದು ಏರ್ ಲೈನ್ಸ್ ಗಳಿಂದ ಸೇವೆ ಇಲ್ಲದ- ಸೇವೆ ಇರುವ ವಿಮಾನ ನಿಲ್ದಾಣಗಳಿಂದ ಕೈಗೆಟುಕುವ ದರದಲ್ಲಿ ಕಾರ್ಯಾಚರಣೆಯನ್ನು ಉತ್ತೇಜಿಸುತ್ತವೆ. ಹೊಸ ಮೂಲಸೌಕರ್ಯಗಳನ್ನು ಅಭಿವೃದ್ಧಿಗೆ ಹಣ ಸಂಗ್ರಹಿಸಲು ಸರ್ಕಾರವು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿನ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಚಾಲಿತ ವಿಮಾನ ನಿಲ್ದಾಣಗಳ ಆಸ್ತಿಯನ್ನು ಸರ್ಕಾರ ವಿತ್ತೀಯಗೊಳಿಸಲಿದೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+