ಚಂದ್ರನಿಗೆ ನಾವೀಗ ಮೂರು ಹೆಜ್ಜೆ ಹತ್ತಿರ: ಇಸ್ರೋ

ನವದೆಹಲಿ, ಜುಲೈ 29: ಸಣ್ಣ ಅಡ್ಡಿ ಆತಂಕದ ಬಳಿಕ ಯಶಸ್ವಿಯಾಗಿ ಚಂದ್ರಲೋಕದತ್ತ ಪ್ರಯಾಣ ಬೆಳೆಸಿರುವ ದೇಶದ ಹೆಮ್ಮೆಯ ಚಂದ್ರಯಾನ-2 ಮಹತ್ವದ ಮೈಲುಗಲ್ಲು ನಿರ್ಮಿಸುವ ಸನಿಹದಲ್ಲಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22ರಂದು ಉಡಾವಣೆಗೊಂಡಿದ್ದ ಚಂದ್ರಯಾನ-2ರ ಇದುವರೆಗಿನ ಪಯಣ ಸುಗಮವಾಗಿದೆ. ತನ್ನ ಮೂರನೇ ಕಕ್ಷಾ ಸಂಚಾರವನ್ನು ನೌಕೆ ಪೂರ್ಣಗೊಳಿಸಿದೆ. ಈ ಮೂಲಕ ಭಾರತವನ್ನು ಚಂದ್ರನಿಗೆ ಮೂರು ಹೆಜ್ಜೆ ಸಮೀಪಕ್ಕೆ ಕೊಂಡೊಯ್ದಿದೆ.

'ಚಂದ್ರಯಾನ-2 ಬಾಹ್ಯಾಕಾಶ ನೌಕೆಯ ಮೂರನೇ ಭೂ ಕಕ್ಷಾ ಪರ್ಯಟನೆಯು ಇಂದು (ಜುಲೈ 29) ಯೋಜನೆಯಂತೆಯೇ ಪೂರ್ಣಗೊಂಡಿತು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಟ್ವಿಟ್ಟರ್‌ನಲ್ಲಿ ಚಂದ್ರಯಾನ-2ರ ಕಾರ್ಯಾಚರಣೆಯ ಕುರಿತಾದ ಚಿತ್ರದೊಂದಿಗೆ ಸಂತಸ ಹಂಚಿಕೊಂಡಿದೆ.

We Are Now 3 Steps Closer To The Moon ISRO Tweet

ಮೂರನೇ ಕಕ್ಷೆ ಚಲನಾ ಪ್ರಕ್ರಿಯೆಯನ್ನು ಚಂದ್ರಯಾನ-2 ಇಂದು ಪೂರ್ಣಗೊಳಿಸುವ ಮೂಲಕ ನಾವು ಚಂದ್ರನಿಗೆ ಮೂರು ಹೆಜ್ಜೆ ಹತ್ತಿರ ಸಮೀಪಿಸಿದ್ದೇವೆ ಎಂದು ಇಸ್ರೋ ಮತ್ತೊಂದು ಟ್ವೀಟ್ ಮಾಡಿದೆ.

ಭೂಮಿಯ ಸುತ್ತಲೂ ಸುತ್ತುತ್ತಲೇ ಉಪಗ್ರಹವು ಕಕ್ಷೆಯೊಂದರ ಒಳ ಪ್ರವೇಶಿಸಿ ಚಂದ್ರನಡೆಗೆ ಸಾಗುವ ಪ್ರಕ್ರಿಯೆಯಿದು. ಇದರ ನಾಲ್ಕನೆಯ ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ 2-3 ಗಂಟೆಯಲ್ಲಿ ನಡೆಯಲಿದೆ. ಬಾಹ್ಯಾಕಾಶ ನೌಕೆಯ ಎಲ್ಲ ನಿಯತಾಂಕಗಳು ಸಹಜ ಸ್ಥಿತಿಯಲ್ಲಿವೆ ಎಂದು ಇಸ್ರೋ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+