Watch Viral Video: ನನ್ನ ಹೆಂಡ್ತಿಗೆ ಹೆಂಗೆ ಕೆಲಸ ಕೊಟ್ರಿ ಅಂತ ಗಂಡ ಮಾಡಿದ ರಾದ್ಧಾಂತ, ಇಲ್ಲಿದೆ ವೈರಲ್ ವಿಡಿಯೋ!

Watch Viral Video: ಜಗತ್ತಿನಲ್ಲಿ ಎಂಥೆಂತಾ ಜನ ಇರ್ತಾರೆ ಅನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿ. ಹೆಂಡತಿಗೆ ಕೆಲಸ ಕೊಟ್ಟಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಆ ಅಂಗಡಿಯ ಮಾಲೀಕರ ವಿರುದ್ಧವೇ ಗಂಡ ತಿರುಗಿ ಬಿದ್ದಿದ್ದಾನೆ. ಅಂಗಡಿಗೆ ನುಗ್ಗಿ ಭಾರೀ ಅವಾಂತರವನ್ನೇ ಸೃಷ್ಟಿ ಮಾಡಿದ್ದಾನೆ. ಈ ಹುಚ್ಚಾಟಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ನೆಟ್ಟಿಗರು ಈ ವೈರಲ್ ವಿಡಿಯೋವನ್ನು ನೋಡಿ ಗರಂ ಆಗಿದ್ದಾರೆ. ಇಷ್ಟಕ್ಕೂ ಈ ಕಿತಾಪತಿ ಗಂಡ ಮಾಡಿದ್ದೇನು. ಈಗ ಪೊಲೀಸ್ ಅತಿಥಿ ಆಗಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಜಗತ್ತು ಎಷ್ಟೇ ಮುಂದುವರಿಯಲಿ ಕೆಲವರು ಪುರುಷಪ್ರಧಾನ ಮನಸ್ಥಿತಿಯಿಂದಲೇ ಚಿಂತಿಸುತ್ತಾರೆ. ಅದೇ ರೀತಿ ವ್ಯಕ್ತಿಯೊಬ್ಬ ನಡೆದುಕೊಂಡಿದ್ದು ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಲ್ಲೋಲ - ಕಲ್ಲೋಲವನ್ನೇ ಹಬ್ಬಿಸಿದೆ. ಆದರೆ ಈ ವ್ಯಕ್ತಿ ವೈರಲ್ ಆಗುವ ಕಾರಣಕ್ಕೆ ಈ ರೀತಿ ಮಾಡಿಲ್ಲ. ತನ್ನ ಹೆಂಡತಿಯ ಮೇಲಿದ್ದ ಕೋಪದಿಂದ ಈ ರೀತಿ ಮಾಡಿದ್ದಾನೆ. ಹೆಂಡತಿಗೆ ಕೆಲಸ ಕೊಟ್ಟ ದೊಡ್ಡ ಅಂಗಡಿಗೆ ನುಗ್ಗಿ ರಾದ್ಧಾಂತ ಸೃಷ್ಟಿ ಮಾಡಿದ್ದಾನೆ. ಈ ವ್ಯಕ್ತಿಯ ವರ್ತನೆಯನ್ನು ನೋಡಿ ಮೊದಲಿಗೆ ಅಲ್ಲಿದ್ದವರು ಅಂಗಡಿ ಮಾಲೀಕರಿಂದ ಏನಾದರು ತಪ್ಪಾಗಿರಬಹುದು ಎಂದುಕೊಂಡಿದ್ದಾರೆ.

Watch the viral video husband vandalizing shop for giving work to wife Video goes viral

ಅಂಗಡಿಯ ಮಾಲೀಕ ಮಾಡಿದ ಒಂದೇ ತಪ್ಪು ಎಂದರೆ ಈ ವ್ಯಕ್ತಿಯ ಪತ್ನಿಗೆ ಕೆಲಸ ಕೊಟ್ಟಿದ್ದು ಅಂತ ನೆಟ್ಟಿಗರು ಹೇಳುತ್ತಿದ್ದಾರೆ. ಇಷ್ಟಕ್ಕೂ ಕಾರಣವೇ ಇಲ್ಲದೆ ಹೆಂಡತಿ ಕೆಲಸ ಮಾಡುತ್ತಿದ್ದ ಅಂಗಡಿಗೆ ನುಗ್ಗಿ ರಾದ್ಧಾಂತ ಮಾಡುವ ಅವಶ್ಯಕತೆ ಏನಿತ್ತು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದು ನಡೆದಿರುವುದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳಯಂ ಎನ್ನುವಲ್ಲಿ ಹೆಂಡತಿ ಕೆಲಸ ಮಾಡುತ್ತಿದ್ದ ಟೀ ಮತ್ತು ಬೇಕರಿ ಅಂಗಡಿಗೆ ಏಕಾಏಕಿ ನುಗ್ಗಿದ ಗಂಡ. ಮನಸಿಗೆ ಬಂದಂತೆ ಎಲ್ಲಾ ವಸ್ತುಗಳನ್ನು ಒಡೆದು ಹಾಕಿದ್ದಾನೆ. ಹೆಂಡತಿಗೆ ಯಾಕೆ ಕೆಲಸ ಕೊಟ್ಟಿದ್ದೀರಿ ಅಂತ ಪ್ರಶ್ನೆ ಮಾಡಿರುವ ವ್ಯಕ್ತಿ ಖಾಸಗಿ ಚಹಾ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದಾನೆ.

ಅಂಗಡಿಯಲ್ಲಿ ಗಾಜಿನ ಬಾಟಲಿಗಳು ಹಾಗೂ ವಸ್ತುಗಳನ್ನು ಕಬ್ಬಿಣದ ರಾಡಿನಿಂದ ಒಡೆದಿದ್ದಾನೆ. ಅಲ್ಲದೇ ಅಂಗಡಿಯ ಪೀಠೋಪಕರಣಗಳಿಗೆ ಹಾನಿ ಮಾಡಿದ್ದು ಎಲ್ಲವನ್ನೂ ಸರ್ವನಾಶ ಮಾಡಿದ್ದಾನೆ. ಹೆಂಡತಿಗೆ ಉದ್ಯೋಗ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಆ ವ್ಯಕ್ತಿ ಕಬ್ಬಿಣದ ರಾಡ್‌ನಿಂದ ಅಂಗಡಿಯ ಮೇಲೆ ದಾಳಿ ಮಾಡಿ, ಎಲ್ಲಾ ವಸ್ತುಗಳನ್ನು ಒಡೆದು ಹಾಕಿದ್ದು. ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾನೆ. ಅಲ್ಲದೇ ಆ ಅಂಗಡಿಯ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದು. ಜೈಲಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+