Watch: ಪ್ರಿಯಾಂಕಾ ಗಾಂಧಿ ಸ್ವಾಗತಕ್ಕೆ ಗುಲಾಬಿ ಹೂವಿನ ದಳಗಳ ಕಾರ್ಪೆಟ್- ವಿಡಿಯೊ ನೋಡಿ

ಕಾಂಗ್ರೆಸ್ಸಿನ 85 ನೇ ಸಮಗ್ರ ಅಧಿವೇಶನವು ಛತ್ತೀಸ್‌ಗಡದ ರಾಯಪುರದಲ್ಲಿ ನಡೆಯುತ್ತಿದೆ. ಎರಡನೇ ದಿನದ ಅಧಿವೇಶಕ್ಕೆ ಆಗಮಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತ ಮಾಡಲು ಗುಲಾಬಿ ಹೂವಿನ ದಳಗಳ ಕಾರ್ಪೆಟ್‌ ಅನ್ನು ಸಿದ್ದಪಡಿಸಲಾಗಿದೆ.

ರಾಯಪುರ, ಫೆಬ್ರವರಿ 25: ಕಾಂಗ್ರೆಸ್ಸಿನ 85 ನೇ ಸಮಗ್ರ ಅಧಿವೇಶನವು ಛತ್ತೀಸ್‌ಗಡದ ರಾಯಪುರದಲ್ಲಿ ನಡೆಯುತ್ತಿದೆ. ಎರಡನೇ ದಿನದ ಅಧಿವೇಶಕ್ಕೆ ಆಗಮಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತ ಮಾಡಲು ಗುಲಾಬಿ ಹೂವಿನ ದಳಗಳ ಕಾರ್ಪೆಟ್‌ ಅನ್ನು ಸಿದ್ದಪಡಿಸಲಾಗಿದೆ. ಈ ಕಾರ್ಪೆಟ್‌ ಹೆಚ್ಚುಕಮ್ಮಿ ಒಂದು ಕಿಲೋಮೀಟರ್‌ ಇದೆ ಎಂದು ವರದಿಯಾಗಿದೆ.

ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಶನಿವಾರ ಸ್ವಾಗತಿಸಲು ಹೂವಿನ ದಳಗಳ ಕಾರ್ಪೆಟ್ ಅನ್ನು ಸಿದ್ದಪಡಿಸಲಾಗಿದೆ. ಮೂರು ದಿನಗಳ ಅಧಿವೇಶನದಲ್ಲಿ ಸುಮಾರು 15,000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

Watch: Flower petals laid down to welcome Priyanka Gandhi Vadra, Congress leaders in Raipur

ಜನರು ರಸ್ತೆಯ ಬದಿಯಲ್ಲಿ ನಾಯಕರಿಗಾಗಿ ಕಾಯುತ್ತಿರುವುದು ಕಂಡುಬಂದಿದೆ. ಸಂಗೀತ ಮತ್ತು ನೃತ್ಯದ ಮಧ್ಯೆ ನಾಯಕರ ಭರ್ಜರಿ ಸ್ವಾಗತಕ್ಕಾಗಿ ಹೂವಿನ ದಳಗಳನ್ನು ರಸ್ತೆಯಲ್ಲಿ ಹಾಕಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ವೀಡಿಯೊದಲ್ಲಿ ತೋರಿಸಲಾಗಿದೆ.

ಸಭೆಯ ಎರಡನೇ ದಿನ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಸೋನಿಯಾ ಗಾಂಧಿ ನಿಯೋಗವನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಖರ್ಗೆ ಒತ್ತು ನೀಡಿದರು. ಅವರು ಕಳಪೆ ವಿರೋಧಿ ಎಂದು ಬಿಜೆಪಿಯನ್ನು ಮೂದಲಿಸಿದರು. 'ದೆಹಲಿಯಲ್ಲಿ ಅಧಿಕಾರದಲ್ಲಿರುವವರ ಡಿಎನ್‌ಎ' ಬಗ್ಗೆಯೂ ಟೀಕೆ ಮಾಡಿದರು.

Watch: Flower petals laid down to welcome Priyanka Gandhi Vadra, Congress leaders in Raipur

ಸೋನಿಯಾ ಗಾಂಧಿ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯು ಸಮಾಜದಲ್ಲಿ 'ದ್ವೇಷವನ್ನು ಹರಡುತ್ತಿದೆ' ಎಂದರು. ಈಗಿನ ಪರಿಸ್ಥಿತಿಯು ಕಾಂಗ್ರೆಸ್‌ ಅತ್ಯಂತ ಸವಾಲಿನ ಸಂದರ್ಭವಾಗಿದೆ ಎಂದರು. 'ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರತಿ ಸಂಸ್ಥೆಯನ್ನು ವಶಪಡಿಸಿಕೊಂಡಿದ್ದಾರೆ' ಎಂದು ಹೇಳಿದರು.

'2004 ಮತ್ತು 2009 ರಲ್ಲಿನ ನಮ್ಮ ವಿಜಯಗಳು ಮತ್ತು ಡಾ ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವವು ನನಗೆ ವೈಯಕ್ತಿಕ ತೃಪ್ತಿಯನ್ನು ನೀಡಿತು. ಆದರೆ, ನನಗೆ ಅತ್ಯಂತ ಖುಷಿಯ ವಿಷಯವೆಂದರೆ ನನ್ನ ಇನ್ನಿಂಗ್ಸ್ ಭಾರತ್ ಜೋಡೋ ಯಾತ್ರೆಯೊಂದಿಗೆ ಮುಕ್ತಾಯಗೊಂಡಿರುವುದು' ಎಂದು ಸೋನಿಯಾ ಗಾಂಧಿ ತಿಳಿಸಿದರು.

ಸಮಗ್ರ ಅಧಿವೇಶನಕ್ಕೆ ಮುಂಚಿತವಾಗಿ ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ತನಿಖಾ ಇಲಾಖೆಗಳಿಂದ ದಾಳಿ ನಡೆದಿದೆ. ಜಾರಿ ನಿರ್ದೇಶನಾಲಯವು ರಾಯ್‌ಪುರದಲ್ಲಿ ದಾಳಿ ನಡೆಸಿದೆ. ಎಂಟು ಕಾಂಗ್ರೆಸ್ ಮುಖಂಡರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.

ನಿರ್ಣಾಯಕ ಅಧಿವೇಶನವು ಕಾಂಗ್ರೆಸ್‌ನ ಹೊಸ ಕಾರ್ಯಕಾರಿ ಸಮಿತಿಯ ರಚನೆ ಕುರಿತು ಬೆಳಕು ಚೆಲ್ಲಿದೆ. ಈಗಿರುವ ಸಮಿತಿಯ (ಸಿಡಬ್ಲ್ಯೂಸಿ) ಎಲ್ಲ ಸದಸ್ಯರನ್ನು ನಾಮನಿರ್ದೇಶನ ಮಾಡಲು ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸ್ಟೀರಿಂಗ್ ಸಮಿತಿ ಸರ್ವಾನುಮತದಿಂದ ನಿರ್ಧರಿಸಿತು. ಇದಕ್ಕೆ ಚುನಾವಣೆಗಳು ನಡೆಯುದಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಗಾಂಧಿ ಪರಿವಾರಕ್ಕೆ ಸೇರಿದ ಯಾರೊಬ್ಬರೂ ಶುಕ್ರವಾರ ನಡೆದ ಸ್ಟೀರಿಂಗ್ ಸಮಿತಿ ಸಭೆಯಲ್ಲಿ ಭಾಗವಹಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+