ಮುಗಿದ ಚುನಾವಣೆ, ಬೇಸಿಗೆ ರಜೆ: ತಿರುಪತಿಗೆ ಭಕ್ತರ ದಂಡು!
ಅಮರಾವತಿ, ಮೇ 19: ದಕ್ಷಿಣದ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ 2024ರ ಮತದಾನ ಪೂರ್ಣಗೊಂಡಿದೆ. ಶಾಲೆಗಳಿಗೆ ಬೇಸಿಗೆ ರಜೆ ಇದೆ. ಆಂಧ್ರ ಪ್ರದೇಶ ರಾಜ್ಯದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದೆ. ಆದ್ದರಿಂದ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಲೋಕಸಭೆ ಚುನಾವಣೆ, ಆಂಧ್ರ ಪ್ರದೇಶದಲ್ಲಿ ಚುನಾವಣೆ ಮುಗಿಯುವ ಮೊದಲು ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಪ್ರತಿದಿನ ಸಾಮಾನ್ಯವಾಗಿ ಸುಮಾರು 60 ಸಾವಿರ ಇತ್ತು. ಆದರೆ ಈಗ ಮತದಾನ ಮುಗಿಯುತ್ತಿದ್ದಂತೆಯೇ ರಾಜಕೀಯ ನಾಯಕರು, ಕಾರ್ಯಕರ್ತರು, ಭಕ್ತರು ಭಾರೀ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಎಷ್ಟು ಭಕ್ತರ ಭೇಟಿ?; ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಾಹಿತಿ ಪ್ರಕಾರ ಬುಧವಾರ ಒಂದೇ ದಿನ 81,930 ಭಕ್ತರು, ಗುರುವಾರ 76,369 ಹಾಗೂ ಶುಕ್ರವಾರ 71,510 ಭಕ್ತರು ದರ್ಶನ ಪಡೆದಿದ್ದಾರೆ. ಭಕ್ತರನ್ನು ನಿಯಂತ್ರಿಸುವುದು ಟಿಟಿಡಿ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ಭಕ್ತರು ಸಾಮಾನ್ಯ ಉಚಿತ ದರ್ಶನ ಪಡೆಯಲು 24 ತಾಸಿಗೂ ಹೆಚ್ಚು ಸಮಯ ಆಗುತ್ತಿದೆ. ಭಾನುವಾರ ರಜಾದಿನದಂದು ಇನ್ನಷ್ಟು ಭಕ್ತರು ಆಗಮಿಸಬಹುದು ಎಂದು ನಿರೀಕ್ಷೆ ಮಾಡಲಾಗಿದ್ದು, ಟಿಟಿಡಿ ಸಿಬ್ಬಂದಿ ಖುದ್ದು ಭಕ್ತರನ್ನು ನಿಯಂತ್ರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಕುಟುಂಬವೊಂದರ 6 ಸದಸ್ಯರು ಗುರುವಾರ ಬೆಳಗ್ಗೆ ತಿರುಪತಿಗೆ ತೆರಳಿದ್ದರು. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸಾಮಾನ್ಯ ದರ್ಶನ ಪಡೆದು ಮರಳಲು 30 ತಾಸು ಬೇಕಾಯಿತು ಎಂದು ಹೇಳಿದರು.
ಮೇ 13ರ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ನಡೆಯಿತು. ಈ ಹಂತದಲ್ಲಿ ಆಂಧ್ರ ಪ್ರದೇಶದ 25, ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾಯಗೊಂಡಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಆಂಧ್ರ ಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರ ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಿಗೆ ಮತದಾನ ಮೇ 13ರಂದು ನಡೆದಿದೆ. ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದೆ. ಆದ್ದರಿಂದ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಏರಿಕೆಯಾಗಿದೆ.
ದಕ್ಷಿಣದ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇದೆ. ಮೇ 25ರ ಬಳಿಕ ಖಾಸಗಿ ಶಾಲೆಗಳು, ಜೂನ್ 1 ರಿಂದ ಸರ್ಕಾರಿ ಶಾಲಾ-ಕಾಲೇಜುಗಳು ಆರಂಭವಾಗಲಿವೆ. ಆದ್ದರಿಂದ ಇನ್ನು ಎರಡು ವಾರ ಜನರು ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿ ದೇವರ ದರ್ಶನ ಮಾಡಲಿದ್ದು, ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಕಲಬುರಗಿ-ತಿರುಪತಿ ವಿಮಾನ ಸೇವೆ: ಸ್ಟಾರ್ ಏರ್ ಸಂಸ್ಥೆ ಕಲಬುರಗಿಯಿಂದ ತಿರುಪತಿಗೆ ಹೋಗುವ ಭಕ್ತರಿಗೆ ಸಿಹಿಸುದ್ದಿ ನೀಡಿದೆ. ವಾರದಲ್ಲಿ 4 ದಿನ ಕಲಬುರಗಿ ಮತ್ತು ತಿರುಪತಿ ನಡುವೆ ವಿಮಾನ ಸಂಚಾರ ನಡೆಸಲಿದೆ.
ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಹಾರಾಟ ನಡೆಸಲಿದ್ದು, ಈ ಮಾರ್ಗದ ವಿಮಾನಕ್ಕೆ ತಿರುಪತಿಯಲ್ಲಿ ನಿಲುಗಡೆ ನೀಡಲಾಗಿದೆ.
ಬೆಳಗಾವಿ-ಕಲಬುರಗಿ ನಡುವೆ ಸಂಚಾರ ನಡೆಸುವ ಎಸ್5-153 ವಿಮಾನ ಬೆಳಗಾವಿಯಿಂದ ಮಧ್ಯಾಹ್ನ 2.55ಕ್ಕೆ ಹೊರಟು, 4.05ಕ್ಕೆ ತಿರುಪತಿಯಲ್ಲಿ ಲ್ಯಾಂಡ್ ಆಗಲಿದೆ. ಬಳಿಕ ತಿರುಪತಿಯಿಂದ ಕಲಬುರಗಿಗೆ ಹಾರಲಿದೆ.
ಕಲಬುರಗಿ-ಬೆಳಗಾವಿ ನಡುವೆ ಸಂಚಾರ ನಡೆಸುವ ಎಸ್5-127 ವಿಮಾನ ಕಲಬುರಗಿಯಿಂದ ಸಂಜೆ 6.35ಕ್ಕೆ ಹೊರಟು 7.40ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಹೊರಟು ಬೆಳಗಾವಿಗೆ ಹೋಗಲಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications